Ad Widget .

ಕೋಮುಭಾವನೆ ಕೆರಳಿಸುವ ಫೋಸ್ಟ್ ಹಾಕಿದ್ದ ಸಂಬರಗಿ ವಿರುದ್ದ ಎಪ್ಐಆರ್

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಂಗಳೂರು: ಕೋಮುಭಾವನೆ ಕೆರಳಿಸುವಂತೆ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಂತ ಪ್ರಶಾಂತ್ ಸಂಬರಗಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Ad Widget . Ad Widget . Ad Widget .

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿಯವರು ಡಿಕೆ ಶಿವಕುಮಾರ್ ಉರೂಪ್ ಡಿಕೆಎಸ್ ದೊಡ್ಡ ದೊಡ್ಡ ಬಂಡೆಗಳನ್ನೇ ಒಡೆದು ಹಾಕಿದವನಿಗೆ ಮತಾಂತರ ಕಾಯ್ದೆ ಹರಿಯೋದು ಕಷ್ಟವೇನಲ್ಲ ಬಿಡಿ ಎಂಬುದಾಗಿ ಕೋಮುಭಾವನೆ ಕೆರಳಿಸುವಂತ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.

ಈ ಪ್ರಶಾಂತ ಸಂಬರಗಿಯವರ ಪೋಸ್ಟ್ ಗೆ ಅನೇಕರು ಆಕ್ಷೇಪ ಕೂಡ ವ್ಯಕ್ತ ಪಡಿಸಿದ್ದರು. ಈ ಪೋಸ್ಟ್ ಬಗ್ಗೆ ಇದೀಗ ಆಕ್ಷೇಪಿಸಿ ಹಾಗೂ ಅವರು ಕೋಮುಭಾವನೆ ಕೆರಳಿಸುತ್ತಿದ್ದಾರೆ ಎಂಬುದಾಗಿ ಬೆಂಗಳೂರು ದಕ್ಷಿಣ ಸೈಬರ್ ಪೊಲೀಸ್ ಠಾಣೆಗೆ ವಕೀಲ ಸಿ.ಲಕ್ಷ್ಮೀನಾರಾಯಣ ಎಂಬುವರು ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಈ ದೂರಿನ ಬಗ್ಗೆಯೂ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿರುವಂತ ಪ್ರಶಾಂತ್ ಸಂಬರಗಿ ಅವರು, ದುರಾದೃಷ್ಠಕರ ಸಂಗತಿ ನೋಡಿ.. ಕಾಂಗ್ರೆಸ್ ಗುಲಾಮರೊಬ್ಬರು ನನ್ನ ವಿರುದ್ಧ ದೂರು ದಾಖಲಿಸಿದ ಪರಿಣಾಮ, ಎಫ್‌ಐಆರ್ ದಾಖಲಿಸಲಾಗಿದೆ. ಇದು ನಾನು ಡಿಕೆ ಶಿವಕುಮಾರ್ ವಿರುದ್ಧ ಧ್ವನಿ ಎತ್ತಿದ ಕಾರಣದಿಂದ ಆಗಿದೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *