ಚಿತ್ರದುರ್ಗ: ಅರೆಬೆತ್ತಲೆಯಲ್ಲೇ ಆರೋಪಿಯ ಎಳೆತಂದ ಪೊಲೀಸರು| ಅಷ್ಟಕ್ಕೂ ಆತ ಏನ್ ತಪ್ಪು ಮಾಡಿದ್ದ ಗೊತ್ತಾ?

Ad Widget ... ..

ಚಿತ್ರದುರ್ಗ: ಆರೋಪಿಯೊಬ್ವನನ್ನು ಅರೆಬೆತ್ತಲೆಯಾಗಿ ಠಾಣೆಗೆ ಎಳೆತಂದ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ. ಪಕ್ಕದ ಮನೆಯವರಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಅರೆಬೆತ್ತಲೆಯಾಗಿಯೇ ಎಳೆದು ತಂದಿದ್ದಾರೆ.

Ad Widget

ರೌಡಿಶೀಟರರ್ ಓರ್ವನ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿತ್ತು. ಈತನನ್ನು ಕರೆತರಲು ಹೆಡ್ ಕಾನ್ಸ್‌ಟೇಬಲ್ ಹೋಗಿದ್ದರು. ಪೊಲೀಸರು ಹೋದಾಗ ಈ ರೌಡಿಶೀಟರ್ ಸ್ನಾನ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರು ಆತನನ್ನ ಅದೇ ಸ್ಥಿತಿಯಲ್ಲೇ ಎಳೆದು ತಂದಿದ್ದಾರೆ.

ಈ ಘಟನೆ ಸಂಬಂಧ ಆರೋಪಿ ಆಕ್ರೋಶ ಹೊರ ಹಾಕಿದ್ದಾನೆ. ಪೊಲೀಸರು ಬಂದಾಗ ನಾನು ಸ್ನಾನ ಮಾಡುತ್ತಿದ್ದೆ. ಸ್ನಾನ ಮುಗಿಸಿಕೊಂಡು ಬರುತ್ತೇನೆಂದು ಹೇಳಿದರು ಕೇಳಲಿಲ್ಲ. ಇದು ದುರುದ್ಧೇಶದಿಂದ ಮೆರವಣಿಗೆ ಮಾಡಿದ್ದಾರೆ. ನಾನು ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿ ಜಾಮೀನು ಪಡೆದಿದ್ದಾನೆ. ಸದ್ಯ ಅರೆ ಬೆತ್ತಲೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave a Comment

Your email address will not be published. Required fields are marked *