ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್‌ ಬಿದ್ದು ಯುವಕ ಮೃತ್ಯು

Ad Widget ... ..

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್‌ ಆಕಸ್ಮಿಕವಾಗಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ನ.13ರ ಶನಿವಾರದಂದು ಅತ್ತಾವರದಲ್ಲಿ ನಡೆದಿದೆ.

Ad Widget

ಮೃತರನ್ನು ಜೆಪ್ಪು ನಿವಾಸಿ ಹಮೀದ್‌ ಎಂಬವರ ಪುತ್ರ ಅಬ್ದರ್ರಹ್ಮಾನ್‌ ರಿಲ್ವಾನ್‌ (30) ಎಂದು ಗುರುತಿಸಲಾಗಿದೆ.

ಶನಿವಾರ ರಾಜಸ್ಥಾನದಿಂದ ಅತ್ತಾವರಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಲಾರಿ ಬಂದಿತ್ತು. ಈ ಸಂದರ್ಭ ಕಟ್ಟಡದ ರೈಟರ್‌ ಆಗಿದ್ದ ರಿಲ್ವಾನ್‌ ಅವರಲ್ಲಿ ಗ್ರಾನೈಟ್‌‌‌‌‌ನ ಫೋಟೋ ತೆಗೆಯಲು ಕಟ್ಟಡದ ಸೂಪರ್‌‌ ವೈಸರ್‌‌‌ ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ರಿಲ್ವಾನ್‌ ಫೋಟೋ ತೆಗೆಯಲು ಲಾರಿಯ ಹಿಂಬದಿಗೆ ತೆರಳಿದ್ದಾರೆ ಎನ್ನಲಾಗಿದೆ. ಈ ವೇಳೆ ಲಾರಿಯಲ್ಲಿದ್ದ ಗ್ರಾನೈಟ್‌ ಏಕಾಏಕಿ ರಿಲ್ವಾನ್‌ ಅವರ ಮೇಲೆ ಬಿದ್ದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *