ಅ.17ರಂದು ತಲಕಾವೇರಿಯಲ್ಲಿ ತೀರ್ಥೋದ್ಭವ| ಸಕಲ ಸಿದ್ಧತೆ ಮಾಡಿಕೊಂಡಿದೆ ಜಿಲ್ಲಾಡಳಿತ|

ಕೊಡಗು: ಕಾವೇರಿ ‌ಉಗಮಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವು ಅ.17ರಂದು ನಡೆಯಲಿದೆ. ಜೀವನದಿ ಕಾವೇರಿ ಈ ಬಾರಿ ಮಧ್ಯಾಹ್ನ ದರ್ಶನ ನೀಡಲಿದ್ದಾಳೆ.

Ad Widget ... ..

ತೀರ್ಥೋದ್ಭವ ವೇಳೆ 6 ಅರ್ಚಕರಿಂದ ಮಹಾಪೂಜೆ ನಡೆಯಲಿದೆ. ಪ್ರಧಾನ ಅರ್ಚಕ ಗುರುರಾಜಾಚಾರ್ ನೇತೃತ್ವದಲ್ಲಿ ಪೂಜೆ ನಡೆಯಲಿದೆ.

Ad Widget

ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ಆಗಲಿದೆ. ಬೆಳಗ್ಗೆ 11ರ ಬಳಿಕ ಕುಂಡಿಕೆ ಬಳಿ ಭಕ್ತರಿಗೆ ಪ್ರವೇಶವಿಲ್ಲ ಎಂದು ತಿಳಿಸಲಾಗಿದೆ. ಕೊವಿಡ್-19 ಹಿನ್ನೆಲೆ ಈ ಬಾರಿ ತೀರ್ಥೋದ್ಭವಕ್ಕೆ ಹಲವು ನಿರ್ಬಂಧ ವಿಧಿಸಲಾಗಿದೆ. ತೀರ್ಥೋದ್ಭವ ವೇಳೆ ಪುಣ್ಯಸ್ನಾನಕ್ಕೆ ಅವಕಾಶ ಇರುವುದಿಲ್ಲ ಎಂದು ಸೂಚನೆ ನೀಡಲಾಗಿದೆ. ಭಕ್ತರು ಕಲ್ಯಾಣಿಗೆ ಇಳಿದು ಪುಣ್ಯ ಸ್ನಾನ ಮಾಡುವಂತಿಲ್ಲ. ಬದಲಾಗಿ, ಭಕ್ತರಿಗೆ ತೀರ್ಥ ವಿತರಣೆಗೆ ಎಲ್ಲ ರೀತಿಯ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಕೊಡಗು‌ ಜಿಲ್ಲಾಡಳಿತ ತಿಳಿಸಿದೆ.

Leave a Comment

Your email address will not be published. Required fields are marked *