ಬೆಳ್ತಂಗಡಿ: ಖಾಸಗಿ ಜಮೀನಿನಲ್ಲಿ ಮಾನವನ ಅಸ್ಥಿಪಂಜರ ಪತ್ತೆ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಸೋಮವಾರ ಸಂಜೆ ಅಪರಿಚಿತ ಮಾನವನ ಅಸ್ಥಿಪಂಜರವೊಂದು ಪತ್ತೆಯಾಗಿದೆ.

. Ad Widget . Ad Widget . Ad Widget

ನಾಲ್ಕೂರು ಗ್ರಾಮದ ಬಳಂಜ ಪಾಡಿ ನಿವಾಸಿ ವಿನೋದ್ ಎಂಬವರ ಕೃಷಿ ಭೂಮಿಯ ಕಣಿಯ ಬಳಿ ತಲೆಬುರುಡೆ, ಮೂಳೆಗಳು ಹಾಗೂ ಉಡುಪುಗಳು ಸೇರಿ ಮಾನವನ ಅಸ್ಥಿಪಂಜರ ಕಂಡುಬಂದಿದೆ. ವಿನೋದ್ ಅವರ ಜಮೀನನ್ನು ಮಜ್ಜೆನಿಬೈಲು ಪಾಡಿ ನಿವಾಸಿ ಸುರೇಶ್ ಎಂಬವರು ನಿರ್ವಹಣೆ ಮಾಡುತ್ತಿದ್ದರು.

. Ad Widget .

ಯಂತ್ರದ ಮೂಲಕ ಕೃಷಿ ಭೂಮಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ವೇಣೂರು ಪೊಲೀಸ್ ಅಧಿಕಾರಿಗಳು ಹಾಗೂ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Leave a Comment

Your email address will not be published. Required fields are marked *