ಏಷ್ಯನ್ ಗೇಮ್ಸ್ 2026| 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಚಿನ್ನಕ್ಕೆ‌ ಮುತ್ತಿಕ್ಕಿದ‌ ಭಾರತ

ಸಮಗ್ರ ನ್ಯೂಸ್: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಶೂಟರ್‌ಗಳು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಸುರುಚಿ ಇಂದರ್ ಸಿಂಗ್ ಮತ್ತು ಕಮಲ್‌ಜೀತ್ ಜೋಡಿ ಅಮೋಘ ಪ್ರದರ್ಶನ ನೀಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಲಿದ ಎರಡನೇ ಚಿನ್ನದ ಪದಕ ಇದಾಗಿದೆ.

. Ad Widget . Ad Widget

ಫೈನಲ್ ಪ್ರವೇಶಕ್ಕೂ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿಯೂ ಭಾರತೀಯ ಜೋಡಿ ಅಬ್ಬರದ ಆಟ ಪ್ರದರ್ಶಿಸಿತ್ತು. ಒಟ್ಟು 21 ತಂಡಗಳು ಭಾಗವಹಿಸಿದ್ದ ಈ ಸುತ್ತಿನಲ್ಲಿ ಸುರುಚಿ ಮತ್ತು ಕಮಲ್‌ಜೀತ್ ಜೋಡಿ ಒಟ್ಟು 587 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆಯಿತು. ಈ ಮೂಲಕ ನೂತನ ಏಷ್ಯನ್ ಗೇಮ್ಸ್ ಅರ್ಹತಾ ದಾಖಲೆಯನ್ನು ನಿರ್ಮಿಸುವುದರ ಜೊತೆಗೆ ಏಷ್ಯನ್ ದಾಖಲೆಯನ್ನು ಸಮಗಟ್ಟಿದರು.

. Ad Widget . . Ad Widget . Ad Widget

ಅರ್ಹತಾ ಸುತ್ತಿನ ಮೊದಲ ಸರಣಿಯಲ್ಲಿ 196, ಎರಡನೇ ಸರಣಿಯಲ್ಲಿ 195 ಹಾಗೂ ಅಂತಿಮ ಸರಣಿಯಲ್ಲಿ 196 ಅಂಕಗಳನ್ನು ಕಲೆಹಾಕಿ 29 ‘ಇನ್ನರ್ 10’ ಹೊಡೆತಗಳೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟ ಈ ಜೋಡಿ, ಪ್ರಶಸ್ತಿ ಸುತ್ತಿನಲ್ಲೂ ನಿಖರ ಗುರಿಯೊಂದಿಗೆ ಎದುರಾಳಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಕಾಯ್ದುಕೊಂಡಿತು.

ವೈಯಕ್ತಿಕ ವಿಭಾಗಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗದೆ ಹಿನ್ನಡೆ ಅನುಭವಿಸಿದ್ದ ಈ ಇಬ್ಬರೂ ಶೂಟರ್‌ಗಳು, ಮಿಶ್ರ ತಂಡ ಸ್ಪರ್ಧೆಯಲ್ಲಿ ಅದ್ಭುತ ಹೊಂದಾಣಿಕೆ ತೋರುವ ಮೂಲಕ ದೇಶಕ್ಕೆ ಬಂಗಾರದ ಪದಕ ತಂದುಕೊಟ್ಟಿದ್ದಾರೆ.

Leave a Comment

Your email address will not be published. Required fields are marked *