August 2026

ಮಡಿಕೇರಿ: ಸ್ಟೋನ್ ಹಿಲ್ ನಲ್ಲಿ ಭೂ ಕುಸಿತ| ಪೊಲೀಸ್ ವಸತಿಗೃಹದತ್ತ ಹರಿದು ಬಂದ ಕಸದ ರಾಶಿ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಮಡಿಕೇರಿ ನಗರದ ಸ್ಟೋನ್ ಹಿಲ್ ಬೆಟ್ಟದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಬೆಟ್ಟದ ಮೇಲಿದ್ದ ನೂರಾರು ಟನ್ ಕಸದ ರಾಶಿ ಕೆಳಭಾಗಕ್ಕೆ ಧಾವಿಸಿಬಂದಿದೆ. ಬೆಟ್ಟದ ತುದಿಯಲ್ಲಿ ವರ್ಷಗಳಿಂದ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿದ್ದುದೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪೋಲಿಸ್ ವಸತಿ ಸಮುಚ್ಚಯಕ್ಕೆ ಕಸದ ರಾಶಿ ಭೀತಿಬೆಟ್ಟದ ಕೆಳಭಾಗದಲ್ಲೇ ಪೊಲೀಸ್ ವಸತಿ ಗೃಹಗಳಿದ್ದು, ಕುಸಿತದಿಂದಾಗಿ ದೊಡ್ಡ ಪ್ರಮಾಣದ ಕಸ ಮತ್ತು ಮಣ್ಣಿನ ಮಿಶ್ರಣ ವಸತಿ ಸಮುಚ್ಚಯದತ್ತ ಕೊಚ್ಚಿಬರುತ್ತಿದೆ.

ಮಡಿಕೇರಿ: ಸ್ಟೋನ್ ಹಿಲ್ ನಲ್ಲಿ ಭೂ ಕುಸಿತ| ಪೊಲೀಸ್ ವಸತಿಗೃಹದತ್ತ ಹರಿದು ಬಂದ ಕಸದ ರಾಶಿ Read More »

ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನ ಪರಿಷತ್ತಿನ ನೂತನ ಹಂಗಾಮಿ (ಪ್ರೊಟೆಮ್) ಸಭಾಪತಿಯಾಗಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಪುಟ್ಟಣ್ಣ ಅವರು ಹಂಗಾಮಿ ಸಭಾಪತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಜ್ಯಪಾಲರು ಹೊರಡಿಸಿರುವ ಆದೇಶವು ಆಗಸ್ಟ್ 7 ರಿಂದಲೇ ಜಾರಿಗೆ ಬರುವಂತೆ ಅನ್ವಯವಾಗಲಿದೆ. ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಪುಟ್ಟಣ್ಣ ಅವರ ಸುದೀರ್ಘ ಸಂಸದೀಯ ಅನುಭವವನ್ನು ಪರಿಗಣಿಸಿ, ಕಲಾಪಗಳ ನಿರ್ವಹಣೆ ಹಾಗೂ

ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ Read More »

ಮಂಗಳೂರು: ತಲವಾರು ಹಿಡಿದು ಸಾರ್ವಜನಿಕವಾಗಿ ಓಡಾಟ| ಇಬ್ಬರ ಬಂಧನ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ತಲವಾರು ಹಿಡಿದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಜೀವ ಬೆದರಿಕೆ ಒಡ್ಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಉಳ್ಳಾಲದ ಮಾರ್ಗತಲೆ ನಿವಾಸಿ ಮೊಹಮ್ಮದ್ ಶಾಕಿರ್ ( 31) ಹಾಗೂ ಮಂಚಿಲ ನಿವಾಸಿ ಅಶ್ವಕ್ (28) ಎಂದುತಿಳಿದುಬಂದಿದೆ. ಬಂಧಿತರ ಪೈಕಿ ಶಾಕಿರ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು , ಅಶ್ಪಕ್ ವೃತ್ತಿಯಲ್ಲಿ ಆಟೋ ಚಾಲಕ. ಈತನ ವಿರುದ್ಧ ಈಗಾಗಲೇ ರೌಡಿ ಶೀಟ್ ತೆರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾನೂನುಬಾಹಿರವಾಗಿ ಮಾರಕಾಸ್ತ್ರಗಳನ್ನು ಹೊಂದಿದ್ದು

ಮಂಗಳೂರು: ತಲವಾರು ಹಿಡಿದು ಸಾರ್ವಜನಿಕವಾಗಿ ಓಡಾಟ| ಇಬ್ಬರ ಬಂಧನ Read More »

ಕೇರಳ: ಕಾಸರಗೋಡಿನಲ್ಲಿ ಸಾವರ್ಕರ್ ಪ್ರಶ್ನೆ ಕೇಳಿದ ಅಧ್ಯಾಪಕನ ಅಮಾನತು

ಸಮಗ್ರ ನ್ಯೂಸ್: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಂಜೇಶ್ವರ ಉಪಜಿಲ್ಲೆಯ ಎಲ್‌ಪಿ ವಿದ್ಯಾರ್ಥಿಗಳಿಗಾಗಿ ಸಮಾಜ ವಿಜ್ಞಾನ ಕ್ಲಬ್‌ ಆಯೋಜಿಸಿದ್ದ ‘ಸ್ವಾತಂತ್ರ್ಯ ರಸಪ್ರಶ್ನೆ 2026’ ಸ್ಪರ್ಧೆಯಲ್ಲಿ ‘ಸಾವರ್ಕರ್‌’ ಹೆಸರು ಬಂದಿರುವುದು ಕೇರಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಫ್ರೀಡಂ ಕ್ವಿಜ್‌ನಲ್ಲಿ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ 15 ಪ್ರಶ್ನೆಗಳ ಜತೆಗೆ ನೀಡಿದ 5 ಟೈ ಬ್ರೇಕರ್‌ ಪ್ರಶ್ನೆಗಳಲ್ಲಿ ಕೊನೆಯದ್ದು ಸಾರ್ವರ್ಕರ್‌ ಕುರಿತದ್ದಾಗಿತ್ತು. ಬ್ರಿಟೀಷರ ಕೈಯಿಂದ ಅತ್ಯಂತ ಹೆಚ್ಚು ಶಿಕ್ಷೆ ಅನುಭವಿಸಿದ ಸ್ವಾಂತ್ರ್ಯಹೋರಾಟಗಾರ ಯಾರು? ಎಂದು ಪ್ರಶ್ನೆ ಕೇಳಲಾಗಿತ್ತು. ಅದರ ಉತ್ತರ ಕೀಲಿಯಲ್ಲಿ ವಿ.ಡಿ.ಸಾವರ್ಕರ್‌ ಎಂದು

ಕೇರಳ: ಕಾಸರಗೋಡಿನಲ್ಲಿ ಸಾವರ್ಕರ್ ಪ್ರಶ್ನೆ ಕೇಳಿದ ಅಧ್ಯಾಪಕನ ಅಮಾನತು Read More »

ಮದುವೆಯಾದ ಏಳು ವರ್ಷದೊಳಗೆ ಪತ್ನಿ ಅಸಹಜ ಸಾವನ್ನಪ್ಪಿದರೆ ವರದಕ್ಷಿಣೆ ಕೇಸ್ – ಹೈಕೋರ್ಟ್

ಸಮಗ್ರ ನ್ಯೂಸ್: ವಿವಾಹಿತ ಮಹಿಳೆಯರ ಅನುಮಾನಾಸ್ಪದ ಸಾವು ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮದುವೆಯಾದ ಏಳು ವರ್ಷಗಳೊಳಗೆ ಮಹಿಳೆಯೊಬ್ಬರು ತನ್ನ ಅತ್ತೆ-ಮಾವನ ಮನೆಯಲ್ಲಿ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದರೆ, ಆಕೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂಬುದಕ್ಕೆ ಸಾಕ್ಷ್ಯಗಳಿದ್ದಲ್ಲಿ, ಅದನ್ನು ವರದಕ್ಷಿಣೆ ಹತ್ಯೆ ಎಂದು ಪರಿಗಣಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ . ಇಂತಹ ಗಂಭೀರ ಪ್ರಕರಣಗಳಲ್ಲಿ ಮಹಿಳೆಯ ಸಾವಿನಲ್ಲಿ ಪತಿ ಅಥವಾ ಅತ್ತೆ-ಮಾವನ ಮನೆಯವರ ನೇರ ಪಾತ್ರವಿದೆ ಎಂಬುದನ್ನು ಸಾಬೀತುಪಡಿಸಲು ಪ್ರತ್ಯಕ್ಷ

ಮದುವೆಯಾದ ಏಳು ವರ್ಷದೊಳಗೆ ಪತ್ನಿ ಅಸಹಜ ಸಾವನ್ನಪ್ಪಿದರೆ ವರದಕ್ಷಿಣೆ ಕೇಸ್ – ಹೈಕೋರ್ಟ್ Read More »

ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದ ಆಗಸ್ಟ್ ಮಳೆ| ಕಣ್ಣೆದುರೇ ಉದುರುತ್ತಿರುವ ಅರೆಬೆಳೆದ ಅಡಿಕೆ

ಸಮಗ್ರ ನ್ಯೂಸ್: ಆಗಸ್ಟ್ ಮೊದಲ ವಾರದಲ್ಲೇ ಸುರಿಯುತ್ತಿರುವ ಮಳೆಯ ಲಯ ಅಡಿಕೆ ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ. ಮಳೆಯ ತೀವ್ರತೆಯೊಂದಿಗೆ ಎಲೆಚುಕ್ಕಿ ಸೇರಿದಂತೆ ವಿವಿಧ ರೋಗಗಳ ವಿರುದ್ಧ ತೋಟಗಳಲ್ಲಿ ಔಷಧ ಸಿಂಪಡಣೆ ನಡೆಸುತ್ತಿದ್ದ ಬೆಳೆಗಾರರಿಗೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. ಭಾರಿ ಮಳೆಯ ಪರಿಣಾಮ ಅಡಿಕೆ ಕಾಯಿಗಳು ಕೆಂಪು ಬಣ್ಣಕ್ಕೆ ತಿರುಗಿ ಉದುರಲಾರಂಭಿಸಿದ್ದು, ಇದರ ಜತೆಗೆ ಕೊಳೆರೋಗದ ಭೀತಿಯೂ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ವಿವಿಧೆಡೆ ಹಳದಿ ರೋಗದ ಬಾಧೆಯಿಂದ ಅಡಿಕೆ

ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದ ಆಗಸ್ಟ್ ಮಳೆ| ಕಣ್ಣೆದುರೇ ಉದುರುತ್ತಿರುವ ಅರೆಬೆಳೆದ ಅಡಿಕೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಆಗಸ್ಟ್ 10 ರಿಂದ 16 ರವರೆಗಿನ ವಾರ ಭವಿಷ್ಯವನ್ನು ಪ್ರಸ್ತುತಪಡಿಸಲಾಗಿದೆ. ಈ ವಾರದಲ್ಲಿ ಆಷಾಢ ಮಾಸ ಅಂತ್ಯಗೊಂಡು ಶ್ರಾವಣ ಮಾಸ ಪ್ರಾರಂಭವಾಗಲಿದೆ. ಅಲ್ಲದೆ, ಸೋಮ ಪ್ರದೋಷ, ಭೀಮನ ಅಮಾವಾಸ್ಯೆ, ವಿನಾಯಕಿ ಚತುರ್ಥಿ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂತಹ ಪ್ರಮುಖ ಘಟನೆಗಳು ನಡೆಯಲಿವೆ. ಗ್ರಹಣವಿದ್ದರೂ ಭಾರತದಲ್ಲಿ ಗೋಚಾರವಿಲ್ಲದ ಕಾರಣ ಆಚಾರ-ವಿಧಿ ವಿಧಾನಗಳು ಇರುವುದಿಲ್ಲ. ಈ ವಾರದಲ್ಲಿ ಗ್ರಹಗಳ ಸಂಚಾರ, ವಿಶೇಷ ದಿನಗಳು ಮತ್ತು ದ್ವಾದಶ ರಾಶಿಗಳ ಮೇಲಿನ ಅವುಗಳ ಪರಿಣಾಮಗಳನ್ನು ನೋಡೋಣ… ಮೇಷ ರಾಶಿ:ಆಷಾಢ ಮಾಸ ಸುಬ್ರಹ್ಮಣ್ಯ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾದ ಫೋಕ್ಸೋ ಆರೋಪಿ; ತೀವ್ರ ಶೋಧ

ಸಮಗ್ರ ನ್ಯೂಸ್: ಪೋಕ್ಸೋ ಪ್ರಕರಣದಲ್ಲಿ ವಿಚಾರಣಾಧೀನ ಬಂಧನದಲ್ಲಿದ್ದ ಆರೋಪಿಯೊಬ್ಬ ವೆನ್ಲಾಕ್ ಆಸ್ಪತ್ರೆಯಿಂದ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಜೈಲು ಅಧಿಕಾರಿಗಳ ದೂರಿನ ಮೇರೆಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಲಾಗಿದೆ. ಪರಾರಿಯಾದ ಆರೋಪಿಯನ್ನು ರೋಶನ್ ಫರ್ನಾಂಡಿಸ್ (36) ಎಂದು ಗುರುತಿಸಲಾಗಿದೆ. ಈತ ಮೂಡುಬಿದಿರೆ ತಾಲೂಕಿನ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಬಂಧನದ ಬಳಿಕ

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾದ ಫೋಕ್ಸೋ ಆರೋಪಿ; ತೀವ್ರ ಶೋಧ Read More »

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ| ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತದ ಪರಿಚಲನೆ ಸಕ್ರಿಯಗೊಂಡಿದ್ದು, ದೇಶದ ಹಲವು ರಾಜ್ಯಗಳ ಜೊತೆಗೆ ಕರ್ನಾಟಕದಲ್ಲೂ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಮಾನ್ಸೂನ್ ಟ್ರಫ್ ಸಕ್ರಿಯವಾಗಿರುವುದರಿಂದ ಮಧ್ಯ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಮಳೆಯ ಪ್ರಮಾಣ ತೀವ್ರಗೊಳ್ಳಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗಲಿದ್ದು, ಹವಾಮಾನ

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ| ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ Read More »

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು| ಧರ್ಮಸ್ಥಳ ಯಾತ್ರೆಗೆ ಹೊರಟವರು ಮಸಣಕ್ಕೆ

ಸಮಗ್ರ ನ್ಯೂಸ್: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ತಮಕೂರು ಜಿಲ್ಲೆಯ ಒಂದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಬ್ಬಿ ತಾಲ್ಲೂಕಿನ ಹಳಿಲ್ ಗದ್ದೆ ನಿವಾಸಿಗಳಾದ ಜ್ಞಾನೇಶ್(28), ಮೋಹನ್(30) ಮತ್ತು ಗುರುಕಿರಣ್(28) ಮೃತಪಟ್ಟವರು. ಪ್ರೇಮಕುಮಾರ್ ಮತ್ತು ಹೃತಿಕ್ ಗಾಯಗೊಂಡಿದ್ದಾರೆ. ಒಂದೇ ಊರಿನ ಯುವಕರು ಧರ್ಮಸ್ಥಳಕ್ಕೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹೊರಟಿದ್ದರು. ಬೆಳಗಿನ ಜಾವ ಕೊಟ್ಟಿಗೆಹಾರ ಬಳಿ ಬಂದಾಗ ಚಾಲಕ ನಿದ್ರೆಯಲ್ಲಿ ಇದ್ದಿದ್ದರಿಂದ ಎಡಭಾಗದ

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು| ಧರ್ಮಸ್ಥಳ ಯಾತ್ರೆಗೆ ಹೊರಟವರು ಮಸಣಕ್ಕೆ Read More »