ಸಮಗ್ರ ನ್ಯೂಸ್: ರಬ್ಬರ್ ಬೆಳೆಗೆ ಬುಧವಾರ ಕೆ.ಜಿ.ಯೊಂದಕ್ಕೆ ಗರಿಷ್ಠ ₹263 ದೊರೆತಿದ್ದು, ಇದು ಸಾರ್ವಕಾಲಿಕ ದಾಖಲಾಗಿದೆ. ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಆರ್‌ಎಸ್‌ಎಸ್-4 ದರ್ಜೆಯ ರಬ್ಬರ್‌ಗೆ ಕೆ.ಜಿ.ಯೊಂದಕ್ಕೆ ಕನಿಷ್ಠ ₹252ರಿಂದ ಗರಿಷ್ಠ ₹263ರವರೆಗೆ, ಆರ್‌ಎಸ್‌ಎಸ್-5 ದರ್ಜೆಗೆ ₹222ರಿಂದ ಗರಿಷ್ಠ ₹252ರವರೆಗೆ ಧಾರಣೆ ದೊರೆತಿದೆ.
‘ದಶಕದ ಹಿಂದೆ ರಬ್ಬರ್ ಕೆ.ಜಿ.ಗೆ ಗರಿಷ್ಠ ₹245ರವರೆಗೆ ದರ ದೊರೆತಿತ್ತು. ನಂತರದ ವರ್ಷಗಳಲ್ಲಿ ರಬ್ಬರ್ ದರ ಏರಿಳಿತವಾಗುತ್ತಿತ್ತು. ಕಳೆದ ವರ್ಷ ಕೆ.ಜಿ.ಗೆ ₹130ರವರೆಗೆ ಇಳಿಕೆಯಾಗಿ ಬೆಳೆಗಾರರು ಕಂಗಾಲಾಗಿದ್ದರು. ಕೆಲವು ದಿನಗಳಿಂದ ರಬ್ಬರ್ ದರ ಏರುಗತಿಯಲ್ಲಿ ಸಾಗಿದೆ. ಬೇಡಿಕೆ ಹೆಚ್ಚುತ್ತಿದ್ದು, ಉತ್ಪಾದನೆ ಕಡಿಮೆಯಾಗುತ್ತಿದೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ಎದುರಾಗಿರುವ ಸಂಘರ್ಷದಿಂದ ಕಚ್ಚಾತೈಲದ ಬೆಲೆ ಏರಿಕೆಯಾಗಿದ್ದು, ಕೃತಕ ರಬ್ಬರ್ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ. ಈ ಎಲ್ಲ ಅಂಶಗಳು ರಬ್ಬರ್ ದರ ಏರಿಕೆಗೆ ಕಾರಣವಾಗಿರಬಹುದು’ ಎನ್ನುತ್ತಾರೆ ಬೆಳೆಗಾರರು.








