ಇರಾನ್ ಗೆ ಪ್ರಯಾಣಿಸದಂತೆ ಭಾರತೀಯರಿಗೆ ತುರ್ತು ಕರೆ ನೀಡಿದ ಭಾರತೀಯ ರಾಯಭಾರ ಕಚೇರಿ

ಸಮಗ್ರ ನ್ಯೂಸ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ಮತ್ತು ಹಠಾತ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಅತ್ಯಂತ ತುರ್ತು ಸೂಚನೆಯೊಂದನ್ನು ನೀಡಿದೆ. ಭಾರತೀಯರು ಸದ್ಯಕ್ಕೆ ಇರಾನ್ ದೇಶಕ್ಕೆ ಯಾವುದೇ ರೀತಿಯ ಪ್ರಯಾಣ ಮಾಡದಂತೆ ರಾಯಭಾರ ಕಚೇರಿಯು ಕಟ್ಟುನಿಟ್ಟಿನ ಸಲಹೆ ನೀಡಿದೆ.

Ad Widget . Ad Widget . Ad Widget . Ad Widget . Ad Widget . Ad Widget .

ಪ್ರಾದೇಶಿಕ ಪರಿಸ್ಥಿತಿಗಳು ಬಿಗಡಾಯಿಸುತ್ತಿರುವುದರಿಂದ ಇರಾನ್ಗೆ ಕೈಗೊಳ್ಳಬೇಕಾದ ಎಲ್ಲಾ ಮುಂಬರುವ ಪ್ರಯಾಣಗಳನ್ನು ರದ್ದುಗೊಳಿಸುವಂತೆ ಭಾರತೀಯರಿಗೆ ತಿಳಿಸಲಾಗಿದೆ.ಸದ್ಯ ಇರಾನ್ ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ಲಭ್ಯವಿರುವ ಯಾವುದೇ ಸಾರಿಗೆ ಸಂಪರ್ಕಗಳನ್ನು (ವಿಮಾನ ಅಥವಾ ಇತರ ಮಾರ್ಗಗಳು) ಬಳಸಿಕೊಂಡು ತಕ್ಷಣವೇ ದೇಶವನ್ನು ತೊರೆಯುವಂತೆ ಸೂಚಿಸಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇರಾನ್ ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಯು ತನ್ನ ಹಳೆಯ ಪ್ರಯಾಣದ ಮಾರ್ಗಸೂಚಿಯನ್ನೇ ಮತ್ತೊಮ್ಮೆ ಬಲವಾಗಿ ಪುನರುಚ್ಚರಿಸಿದೆ.

Leave a Comment

Your email address will not be published. Required fields are marked *