ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್| ರಾಜ್ಯದಲ್ಲಿ 3395 ಪೊಲೀಸ್ ಕಾನ್ಸ್ ಟೇಬರ್ ನೇಮಕಾತಿಗೆ ಅಧಿಸೂಚನೆ

ಸಮಗ್ರ ನ್ಯೂಸ್: ಖಾಕಿ ಧರಿಸಿ ನಾಡಿನ ಸೇವೆ ಮಾಡಬೇಕು ಅಂದುಕೊಂಡಿರೋ ರಾಜ್ಯದ ಸುವರ್ಣಾವಕಾಶ ಕಾಯ್ತಿದ್ದ ಯುವಜನತೆಗೆ ಕರ್ನಾಟಕ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಒಟ್ಟು 3,395 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget .

ಈ ಬಾರಿ ವಿಶೇಷ ಏನೆಂದರೆ, ಇಡೀ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುತ್ತಿದ್ದು, ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಯಾವ್ಯಾವ ವಿಭಾಗದಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಕೆ ಹೇಗೆ? ವಯೋಮಿತಿ ಸಡಿಲಿಕೆ ಏನಿದೆ?

ಹುದ್ದೆಗಳ ಸಂಪೂರ್ಣ ವರ್ಗೀಕರಣ:
ಒಟ್ಟು 3,395 ಹುದ್ದೆಗಳನ್ನು ಪುರುಷರು, ಮಹಿಳೆಯರು, ಸೇವಾನಿರತರು ಹಾಗೂ ತೃತೀಯಲಿಂಗಿ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:

ಪುರುಷ ಅಭ್ಯರ್ಥಿಗಳು: 2,266 ಹುದ್ದೆಗಳು

ಮಹಿಳಾ ಅಭ್ಯರ್ಥಿಗಳು: 755 ಹುದ್ದೆಗಳು

ಸೇವಾನಿರತ ಪುರುಷರು (In-Service): 257 ಹುದ್ದೆಗಳು

ಸೇವಾನಿರತ ಮಹಿಳೆಯರು (In-Service): 82 ಹುದ್ದೆಗಳು

ತೃತೀಯಲಿಂಗಿ ಅಭ್ಯರ್ಥಿಗಳು (Transgender): 35 ಹುದ್ದೆಗಳು

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಿನಾಂಕಗಳ ಕಡೆಗೆ ವಿಶೇಷ ಗಮನ ಹರಿಸುವುದು ಮುಖ್ಯ.

ಅರ್ಜಿ ಸಲ್ಲಿಕೆ ಆರಂಭ: ಜೂನ್ 8 ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 3 ಆನ್‌ಲೈನ್‌ ಮೂಲಕ ಅಪ್ಲೈ ಮಾಡಲು ಕಡೆಯ ದಿನಾಂಕವಾಗಿದೆ.

ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 4 ರೊಳಗೆ ನಿಗದಿತ ಶುಲ್ಕವನ್ನು ಪಾವತಿಸಬೇಕಿರುತ್ತದೆ.

ವಯೋಮಿತಿ ಸಡಿಲಿಕೆ ವಿವರ (Age Limit)

ವಿವಿಧ ಕೆಟಗರಿಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

ನೇರ ನೇಮಕಾತಿ ಅಭ್ಯರ್ಥಿಗಳಿಗೆ (Direct Recruitment):
ಸಾಮಾನ್ಯ ಅರ್ಹತೆ (GM): ಗರಿಷ್ಠ 33 ವರ್ಷಗಳು

SC/ ST/ ಪ್ರವರ್ಗ-1 ಮತ್ತು 2A, 2B, 3A, 3B: ಗರಿಷ್ಠ 35 ವರ್ಷಗಳು

ಬುಡಕಟ್ಟು (Tribal) ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷಗಳ ವರೆಗೆ ಅವಕಾಶ ನೀಡಲಾಗಿದೆ.

ಸೇವಾನಿರತ (In-Service) ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ:
ಸಾಮಾನ್ಯ ಅರ್ಹತೆ (GM): ಗರಿಷ್ಠ 38 ವರ್ಷಗಳು

SC/ ST/ ಪ್ರವರ್ಗ-1 ಮತ್ತು 2A, 2B, 3A, 3B: ಗರಿಷ್ಠ 40 ವರ್ಷ ವಯೋಮಿತಿ ಇದೆ.

Leave a Comment

Your email address will not be published. Required fields are marked *