ಸಮಗ್ರ ನ್ಯೂಸ್: ಮೇ4 ರಿಂದ ಮೇ 10ರವರೆಗೆ, ನಡೆಯುವ ಈ ವಾರ ಹನ್ನೆರಡು ರಾಶಿ ಚಕ್ರಗಳ ಮೇಲೆ ಗ್ರಹ-ನಕ್ಷತ್ರಗಳ ಸಂಚಾರವು ವಿಭಿನ್ನ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳಿಗೆ ಈ ಸಮಯವು ಅತ್ಯಂತ ಶುಭದಾಯಕವಾಗಿದ್ದರೆ, ಇನ್ನು ಕೆಲವು ರಾಶಿಗಳು ಅನೇಕ ಸಣ್ಣ ಪುಟ್ಟ ಸವಾಲುಗಳನ್ನು ಎದುರಿಸಬೇಕಾಗಬಹುದು.
ನಕ್ಷತ್ರಗಳ ಸಂಚಾರದ ಆಧಾರದ ಮೇಲೆ ಮೇಷದಿಂದ ಮೀನ ರಾಶಿವರೆಗಿನ ನಿಮ್ಮ ವಾರಭವಿಷ್ಯವನ್ನು ಇಲ್ಲಿ ವಿವರವಾಗಿ ತಿಳಿದುಕೊಳ್ಳಿ.
ಮೇಷ ರಾಶಿ:
ಮೇಷ ರಾಶಿಯವರಿಗೆ ಈ ವಾರ ಮಿಶ್ರ ಫಲ ನೀಡಬಹುದು. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದರೆ ಜಾಗರೂಕರಾಗಿರಿ. ಮನೆಯ ಖರ್ಚುಗಳು ಹೆಚ್ಚಾಗುವುದರಿಂದ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ವೈವಾಹಿಕ ಜೀವನದಲ್ಲಿ ವಿವಾದಗಳು ಉಂಟಾಗಬಹುದು.
ವೃಷಭ ರಾಶಿ:
ವೃಷಭ ರಾಶಿಯವರಿಗೆ ಈ ವಾರ ಒಳ್ಳೆಯ ವರವಾಗಬಹುದು. ಈ ರಾಶಿಯಲ್ಲಿ ಜನಿಸಿದ ಉದ್ಯಮಿಗಳು ಲಾಭ ಗಳಿಸುತ್ತಾರೆ. ಹೂಡಿಕೆಗಳು ಭವಿಷ್ಯದಲ್ಲಿ ಪ್ರಯೋಜನಗಳನ್ನು ತರಬಹುದು. ಪ್ರೇಮ ಜೀವನದಲ್ಲಿಯೂ ಸಕಾರಾತ್ಮಕ ಫಲಿತಾಂಶ ಸಿಗುವುದು. ಕುಟುಂಬ ಜೀವನವು ಸಂತೋಷದಿಂದ ತುಂಬಿರುತ್ತದೆ.
ಮಿಥುನ ರಾಶಿ:
ಮಾತಿನಲ್ಲಿ ಸ್ವಲ್ಪ ಸಂಯಮ ವಹಿಸಬೇಕು. ಕೆಲಸಕ್ಕಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಆರ್ಥಿಕ ನಷ್ಟ ಎದುರಾಗಬಹುದು. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರು ಸ್ವಲ್ಪ ಜಾಗರೂಕರಾಗಿರಬೇಕು. ಉದ್ಯಮಿಗಳು ಪ್ರತಿಯೊಂದು ಕೆಲಸವನ್ನು ಎಚ್ಚರಿಕೆಯಿಂದ ನಡೆಸಬೇಕಾಗುತ್ತದೆ. ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಖರ್ಚು ಮಾಡುವುದರಿಂದ ಆರ್ಥಿಕ ಸ್ಥಿತಿ ಹದಗೆಡಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.
ಸಿಂಹ ರಾಶಿ:
ವೃತ್ತಿ ಮತ್ತು ಶಿಕ್ಷಣದಲ್ಲಿ ಯಶಸ್ಸನ್ನು ಕಾಣುವ ಸಾಧ್ಯತೆಯಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವುದಾದರೆ ಸರಿಯಾದ ಸಲಹೆಯನ್ನು ಪಡೆದ ನಂತರವೇ ಮುಂದುವರಿಯುವುದು ಒಳ್ಳೆಯದು. ನೀವು ಮಾಡುವ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು.
ಕನ್ಯಾ ರಾಶಿ:
ಅಜಾಗರೂಕತೆಯೇ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಅನಗತ್ಯ ವಸ್ತುಗಳನ್ನು ಖರೀದಿಸುವುದು ನಷ್ಟವನ್ನುಂಟು ಮಾಡಬಹುದು. ಆರೋಗ್ಯದತ್ತ ಗಮನ ಹರಿಸಿ.
ತುಲಾ ರಾಶಿ:
ಈ ವಾರ ಕೆಲವರು ಐಷಾರಾಮಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ನೀವು ಮಾಡುವ ಕೆಲಸಕ್ಕೆ ನಿಮ್ಮ ಸಂಗಾತಿಯ ಬೆಂಬಲ ಸಿಗಬಹುದು. ವಾರದ ಕೊನೆಯಲ್ಲಿ ಕೆಲವು ಕಾರಣಗಳಿಂದ ಒತ್ತಡ ಅನುಭವಿಸುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ:
ಮಾನಸಿಕ ಒತ್ತಡ ಹೆಚ್ಚಾಗಬಹುದು. ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಪ್ರಯೋಜನವಾಗುತ್ತದೆ. ಈ ರಾಶಿಯಲ್ಲಿ ಜನಿಸಿದವರು ತಾಂತ್ರಿಕ ಅನ್ವೇಷಣೆಗಳಲ್ಲಿ ಯಶಸ್ಸನ್ನು ಕಾಣುತ್ತಾರೆ.
ಧನು ರಾಶಿ:
ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ನೆಲೆಯಾಗುವುದು. ಈ ವಾರ ಆರ್ಥಿಕ ಚಿಂತೆಗಳು ಕಡಿಮೆಯಾಗಬಹುದು. ಆಹಾರಕ್ರಮದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಇಲ್ಲದಿದ್ದರೆ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.
ಮಕರ ರಾಶಿ:
ಈ ವಾರ ವೃತ್ತಿಜೀವನದಲ್ಲಿ ಯಶಸ್ಸು ಸಿಗಬಹುದು. ಕೆಲವರಿಗೆ ಬಡ್ತಿ ಸಿಗಬಹುದು. ಆರ್ಥಿಕ ಸ್ಥಿತಿ ಸುಧಾರಿಸುವುದು. ನಿಮ್ಮ ಕಠಿಣ ಮಾತುಗಳಿಂದ ಇನ್ನೊಬ್ಬರಿಗೆ ನೋವು ಉಂಟು ಮಾಡಬಹುದು. ವೈವಾಹಿಕ ಜೀವನ ಸುಖಕರವಾಗಿರುವುದು.
ಕುಂಭ ರಾಶಿ:
ಈ ವಾರ ವೃತ್ತಿಪರ ಪ್ರಗತಿ ಕಂಡುಬರಬಹುದು. ವಿದೇಶಿ ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದಲೂ ಲಾಭವಾಗುವುದು. ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ವಾರ ನಿಮಗೆ ಪರಿಹಾರ ಸಿಗಬಹುದು.
ಮೀನ ರಾಶಿ:
ಈ ವಾರ ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಸೃಜನಶೀಲ ಪ್ರಯತ್ನಗಳಲ್ಲಿ ಯಶಸ್ಸು ಸಿಗುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳಿಬರಬಹುದು. ಈ ವಾರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.







