ಸಮಗ್ರ ನ್ಯೂಸ್: ಧಾರವಾಡ ನಗರದ ಹೊರವಲಯದಲ್ಲಿ ಟಿಬೆಟಿಯನ್ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಧಾರವಾಡ ಹೊರವಲಯದ ಹಳಿಯಾಳ ರಸ್ತೆಯಲ್ಲಿ ತಾಶಿ ಧೋಂಡು (39) ಎಂಬ ಬೌದ್ಧ ಸನ್ಯಾಸಿ ಕೊಲೆಯಾಗಿದೆ. ರಸ್ತೆ ಪಕ್ಕ ಬಿದ್ದಿದ್ದ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೊದಲು ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದಿದ್ದರು, ಬಳಿಕ ಶವ ತಪಾಸಣೆ ನಡೆಸಿದ ಪೊಲೀಸರು ಕೊಲೆ ಎಂದು ಮಾಹಿತಿ ಸಿಕ್ಕಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ತಾಶಿ ಧೋಂಡು (39) ಬರ್ಬರವಾಗಿ ಹತ್ಯೆಯಾಗಿದ್ದಾರೆ. ಕಳೆದ ರಾತ್ರಿ ಕಿಡಿಗೇಡಿಗಳು ಬೇರೆ ಕಡೆ ಕೊಲೆ ಮಾಡಿ ಧಾರವಾಡದ ಹೊರವಲಯದಲ್ಲಿರುವ ಹಳಿಯಾಳ ರಸ್ತೆಯಲ್ಲಿ ಶವವನ್ನು ಎಸೆದು ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇನ್ನು, ರಸ್ತೆ ಪಕ್ಕ ಬಿದ್ದಿದ್ದ ಶವ ನೋಡಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು, ಮೊದಲು ರಸ್ತೆ ಅಪಘಾತದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಿದ್ದರು. ಆದ್ರೆ, ಆದರೆ ಶವವನ್ನು ಆಸ್ಪತ್ರೆಗೆ ರವಾನಿಸಿ ತಪಾಸಣೆ ನಡೆಸಿದ ಬಳಿಕ ಕೊಲೆಯಾಗಿರೋದನ್ನು ದೃಢಪಡಿಸಿದ್ದಾರೆ.
ಸದ್ಯ, ಈ ಘಟನೆ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಕೊಲೆ ಮಾಡಿದ್ದು ಯಾರು? ಕೊಲೆಗೆ ಕಾರಣವೇನು ಮತ್ತು ಕೊಲೆಯಾದ ಬೌದ್ಧ ಬಿಕ್ಕು ತಾಶೀ ಧೋಂಡು ಹಿನ್ನೆಲೆ ಏನು? ಎಂಬುದರ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.







