March 2026

ಸರ್ಕಾರಿ ಉದ್ಯೋಗಿಗಳಿಗಿಲ್ಲ ಯುಗಾದಿ ರಜೆ| ಕಡ್ಡಾಯ ಹಾಜರಾತಿ ಕುರಿತು ನೊಟೀಸ್ ಜಾರಿ

ಸಮಗ್ರ ನ್ಯೂಸ್: ಯುಗಾದಿ ಹಬ್ಬದ ಸಂಭ್ರಮದ ನಡುವೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಹಬ್ಬದ ರಜೆ ಇಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ವಿಧಾನಸಭೆ ಅಧಿವೇಶನಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸುವ ಅಗತ್ಯದ ಹಿನ್ನೆಲೆಯಲ್ಲಿ, ಹಬ್ಬದ ದಿನವೂ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಕಂದಾಯ ಇಲಾಖೆ ಸೂಚಿಸಿದೆ. ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರ ನಿರ್ದೇಶನದಂತೆ, ಮಾರ್ಚ್ 23, 2026ರಂದು ವಿಧಾನಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳು […]

ಸರ್ಕಾರಿ ಉದ್ಯೋಗಿಗಳಿಗಿಲ್ಲ ಯುಗಾದಿ ರಜೆ| ಕಡ್ಡಾಯ ಹಾಜರಾತಿ ಕುರಿತು ನೊಟೀಸ್ ಜಾರಿ Read More »

ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಿದ ಭಾರತಕ್ಕೆ ಧನ್ಯವಾದ ಹೇಳಿದ ಇರಾನ್| ಇಂಡಿಯಾ ಮಾಡಿದ ಸಹಾಯ ಏನು‌ ಗೊತ್ತಾ?

ಸಮಗ್ರ ನ್ಯೂಸ್: ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ‘ಸಂಕಷ್ಟದ ಸಮಯದಲ್ಲಿ ನೆರವಾಗುವವನೇ ನಿಜವಾದ ಗೆಳೆಯ’ ಎಂಬ ಮಾತನ್ನು ಭಾರತ ಮತ್ತೊಮ್ಮೆ ಸಾಬೀತುಪಡಿಸಿದೆ. ಇರಾನ್ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತವು ತನ್ನ ಸ್ನೇಹದ ಹಸ್ತವನ್ನು ಚಾಚುವ ಮೂಲಕ ದೊಡ್ಡ ಮಟ್ಟದ ಮಾನವೀಯ ನೆರವನ್ನು ರವಾನಿಸಿದೆ. ಭಾರತದ ಈ ಸಕಾಲಿಕ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿರುವ ಇರಾನ್ ಸರ್ಕಾರ, ನಿಮ್ಮ ಈ ದೊಡ್ಡ ಗುಣಕ್ಕೆ ಧನ್ಯವಾದಗಳು ಎಂದು ಹೃದಯಸ್ಪರ್ಶಿಯಾಗಿ ಹೇಳುವ ಮೂಲಕ ಉಭಯ ದೇಶಗಳ ನಡುವಿನ ಗಟ್ಟಿ ಸ್ನೇಹವನ್ನು ಜಗತ್ತಿಗೆ ಸಾರಿದೆ.

ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಿದ ಭಾರತಕ್ಕೆ ಧನ್ಯವಾದ ಹೇಳಿದ ಇರಾನ್| ಇಂಡಿಯಾ ಮಾಡಿದ ಸಹಾಯ ಏನು‌ ಗೊತ್ತಾ? Read More »

ಪುತ್ತೂರು: ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ‌ಅಧಿಕೃತ ಆದೇಶ| ಸೇಡಿಯಾಪುನಲ್ಲಿ ಸ್ಥಾಪನೆಯಾಗಲಿದೆ ಸುಸಜ್ಜಿತ ಆಸ್ಪತ್ರೆ

ಸಮಗ್ರ ನ್ಯೂಸ್: ಪುತ್ತೂರಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಮೆಡಿಕಲ್ ಕಾಲೇಜು ನಿರ್ಮಾಣವಾಗುವಲ್ಲಿ ಸರಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸೇಡಿಯಾಪಿನಲ್ಲಿ ಕಾಯ್ದಿರಿಸಲಾಗಿರುವ ೪೦ ಎಕ್ರೆ ಜಾಗದಲ್ಲಿ 300 ಬೆಡ್‌ನ ಮೆಡಿಕಲ್ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನವನ್ನು ಒದಗಿಸುವುದರ ಜೊತೆಗೆ ಕಟ್ಟಡದ ರೂಪುರೇಶೆಗಳ ಬಗ್ಗೆಯೂ ಸರಕಾರದದ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅಂತಿಮ ಮುದ್ರೆ ಬಿದ್ದಿದೆ. 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-138 ರಲ್ಲಿ ‘ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು

ಪುತ್ತೂರು: ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ‌ಅಧಿಕೃತ ಆದೇಶ| ಸೇಡಿಯಾಪುನಲ್ಲಿ ಸ್ಥಾಪನೆಯಾಗಲಿದೆ ಸುಸಜ್ಜಿತ ಆಸ್ಪತ್ರೆ Read More »

ಅಡಿಕೆ ಕ್ಯಾನ್ಸರ್ ಕಾರಕವಲ್ಲ| ಸಂಶೋಧನಾ ವರದಿಯಲ್ಲಿ ದೃಢ

ಸಮಗ್ರ ನ್ಯೂಸ್: ಅಡಿಕೆ ಹಾಗೂ ಅಡಿಕೆ ಹಾಳೆ ತಟ್ಟೆ ಕ್ಯಾನ್ಸರ್‌ಕಾರಕ ಎಂಬ ಅಪಪ್ರಚಾರಕ್ಕೆ ತೆರೆ ಎಳೆಯಲು ಸರ್ಕಾರ ವ್ಯಾಪಕ ಸಂಶೋಧನೆಗಳನ್ನು ಕೈಗೊಂಡಿದ್ದು, ಪ್ರಾಥಮಿಕ ವರದಿಗಳು ಅಡಿಕೆ ಬೆಳೆಗಾರರಿಗೆ ನೆಮ್ಮದಿ ತಂದಿವೆ. ತಂಬಾಕು ಬೆರೆಸದೆ ಅಲ್ಪ ಪ್ರಮಾಣದಲ್ಲಿ ಅಡಿಕೆ ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂಬ ಮಹತ್ವದ ಅಂಶ ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿದೆ. ಅಡಿಕೆಗೆ ಅಂಟಿರುವ ಕಳಂಕವನ್ನು ವೈಜ್ಞಾನಿಕವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ರಾಜ್ಯ ತೋಟಗಾರಿಕೆ ಇಲಾಖೆಯು ಬೆಂಗಳೂರಿನ ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯಕ್ಕೆ ವಿಶೇಷ ಅಧ್ಯಯನದ ಜವಾಬ್ದಾರಿ

ಅಡಿಕೆ ಕ್ಯಾನ್ಸರ್ ಕಾರಕವಲ್ಲ| ಸಂಶೋಧನಾ ವರದಿಯಲ್ಲಿ ದೃಢ Read More »

ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ| ಮಿನಿ‌ ಕಾಶ್ಮೀರದಂತಾದ ರಸ್ತೆಗಳು

ಸಮಗ್ರ ನ್ಯೂಸ್: ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ವರುಣನ ಅಬ್ಬರ ತುಸು ಹೆಚ್ಚಾಗಿದ್ದರೆ, ಉತ್ತರ ಒಳನಾಡಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಮಳೆ ವರದಿಯಾಗಿದೆ. ರಾಜ್ಯದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಹವಾಮಾನ ತಂಪಾಗಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಿದ್ದು, ಈ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಜನ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಈ ವಾರವಿಡೀ ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿಯಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ| ಮಿನಿ‌ ಕಾಶ್ಮೀರದಂತಾದ ರಸ್ತೆಗಳು Read More »

ಹವಾಮಾನ ವರದಿ| ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ|‌ ರಾಜ್ಯಾದ್ಯಂತ 4 ದಿನ ಗುಡುಗು ಸಹಿತ ಮಳೆ‌ ಮುನ್ಸೂಚನೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದಾದ್ಯಂತ ಇಂದಿನಿಂದ 4 ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ದಾವಣಗೆರೆ, ಬೆಳಗಾವಿ, ಬೀದರ್ ಹಾಗೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಹಲವೆಡೆ ಹವಾಮಾನ

ಹವಾಮಾನ ವರದಿ| ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ|‌ ರಾಜ್ಯಾದ್ಯಂತ 4 ದಿನ ಗುಡುಗು ಸಹಿತ ಮಳೆ‌ ಮುನ್ಸೂಚನೆ Read More »

ಕೋಟಿ ಕೋಟಿ ಆದಾಯವಿದ್ದರೂ ಮೂಲ ಸೌಕರ್ಯಗಳಿಗೆ ಕೊರತೆ| ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಶೂನ್ಯ!!

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ‌ ದೇವಸ್ಥಾನ ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಒಂದು. ಕೋಟ್ಯಂತರ ರೂ ಆದಾಯ ತಂದು ಕೊಡುವ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾತ್ರ ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲ ಎಂಬುದು‌ ದಶಕಗಳ‌ ಆರೋಪ.‌ ಸಂಪತ್ತು ಇದ್ದರೂ ಇಚ್ಛಾಶಕ್ತಿ, ಕ್ರಿಯಾಶಕ್ತಿ‌ ಇಲ್ಲದ ಪರಿಣಾಮ ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಭಕ್ತರು ಪರದಾಡುವಂತಾಗಿದೆ. ಪ್ರಸಿದ್ಧ ನಾಗ ಕ್ಷೇತ್ರ ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿರುವ ಈ ದೇವಸ್ಥಾನಕ್ಕೆ ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ

ಕೋಟಿ ಕೋಟಿ ಆದಾಯವಿದ್ದರೂ ಮೂಲ ಸೌಕರ್ಯಗಳಿಗೆ ಕೊರತೆ| ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಶೂನ್ಯ!! Read More »

ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ

ಸಮಗ್ರ ನ್ಯೂಸ್: ಇಂದಿನಿಂದ ರಾಜ್ಯದಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ಆರಂಭವಾಗಲಿದ್ದು, ಪ್ರಸ್ತುತ ಸಾಲಿನಲ್ಲಿ 8,65,968 ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತವೆ. ಅದಕ್ಕೂ ಮೊದಲು ವಿದ್ಯಾರ್ಥಿಗಳಿಗೆ 15 ನಿಮಿಷಗಳ ಓದುವ ಸಮಯ ನೀಡಲಾಗುತ್ತದೆ. ಈ ಸಮಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಗಮನವಾಗಿ ಓದಿ, ಉತ್ತರಗಳನ್ನು ಹೇಗೆ ಬರೆಯಬೇಕು ಎಂಬುದನ್ನು ಯೋಜಿಸಿಕೊಳ್ಳಬಹುದು. ಪರೀಕ್ಷೆ ಮಧ್ಯಾಹ್ನ 1:15ರವರೆಗೆ ನಡೆಯುತ್ತದೆ. ವಿದ್ಯಾರ್ಥಿಗಳು ಬೆಳಿಗ್ಗೆ 9:45ರೊಳಗೆ ಪರೀಕ್ಷಾ ಕೇಂದ್ರ ತಲುಪಿದರೆ ಯಾವುದೇ ಗಡಿಬಿಡಿ ಇಲ್ಲದೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು

ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ Read More »

ಮಂಗಳೂರು: ಕೈದಿಗಳ‌ ವಿರುದ್ದ ಎಫ್ಐಆರ್

ಸಮಗ್ರ ನ್ಯೂಸ್: ಮಂಗಳೂರು ‘ನಗರದ ಕೊಡಿಯಾಲ್‌ ಬೈಲಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಬ್ಬರು ನನ್ನ ಮೇಲೆ ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ, ಸ್ವತ್ತುಗಳನ್ನು ಹಾನಿಗೊಳಿಸಿ ದಾಂದಲೆ ನಡೆಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇನ್ನೊಬ್ಬ ಕೈದಿ ಅವರನ್ನು ಪ್ರಚೋದಿಸಿದ್ದ’ ಎಂದು ಆರೋಪಿಸಿ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ದೂರು ನೀಡಿದ್ದು, ಬರ್ಕೆ ಠಾಣೆಯಲ್ಲಿ ಮೂವರು ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ‘ಇದೇ 13ರಂದು ಶುಕ್ರವಾರ ರಾತ್ರಿ ವಿಚಾರಣಾ ಕೈದಿ ಮೊಹಮ್ಮದ್ ಇಕ್ಬಾಲ್ ನನ್ನ ಕಚೇರಿಗೆ ಬಂದು ಕಾರಾಗೃಹಕ್ಕೆ ಹೊಸದಾಗಿ ದಾಖಲಾಗುವ ಕೈದಿಗಳನ್ನು

ಮಂಗಳೂರು: ಕೈದಿಗಳ‌ ವಿರುದ್ದ ಎಫ್ಐಆರ್ Read More »

ಎದೆ ಮೇಲೆ ಪಿಸ್ತೂಲ್‌ ಇಟ್ಟು ಮಿಸ್ ಫೈರ್| ರೀಲ್ಸ್ ಹುಚ್ಚಾಟಕ್ಕೆ ಸ್ವತಃ ಬಲಿಯಾದ ಯುವಕ

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಯುವಕರು ಮಾಡುತ್ತಿರುವ ಅಪಾಯಕಾರಿ ಸಾಹಸಗಳು ಇಂದು ಮತ್ತೊಂದು ಬಲಿ ಪಡೆದಿವೆ. ದೆಹಲಿಯ ದಲ್ಲೂಪುರದಲ್ಲಿ ಪವನ್ ಎಂಬ ಯುವಕ ಸಿನಿಮಾ ಶೈಲಿಯಲ್ಲಿ ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯ ಕಂಡಿದ್ದಾನೆ. ಲೋಡ್ ಮಾಡಿದ ರಿವಾಲ್ವರ್ ಅನ್ನು ಎದೆಗೆ ಇಟ್ಟುಕೊಂಡು ಪೋಸ್ ನೀಡುತ್ತಿದ್ದಾಗ ಅಚಾನಕ್ಕಾಗಿ ಟ್ರಿಗರ್ ಒತ್ತಲ್ಪಟ್ಟಿದೆ. ಗುಂಡು ಎದೆಯನ್ನು ಸೀಳಿ ಹೋಗಿದ್ದು, ವಿಡಿಯೋ ಮಾಡುತ್ತಿದ್ದ ಗೆಳೆಯನ ಮುಂದೆಯೇ ಯುವಕ ಕುಸಿದು ಬಿದ್ದಿದ್ದಾನೆ. ಈ ಭೀಕರ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಎದೆ ಮೇಲೆ ಪಿಸ್ತೂಲ್‌ ಇಟ್ಟು ಮಿಸ್ ಫೈರ್| ರೀಲ್ಸ್ ಹುಚ್ಚಾಟಕ್ಕೆ ಸ್ವತಃ ಬಲಿಯಾದ ಯುವಕ Read More »