ಪ್ರವೀಣ್ ನೆಟ್ಟಾರು‌ ಹತ್ಯೆ ಪ್ರಕರಣ| ಮತ್ತೋರ್ವ ಆರೋಪಿಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಓರ್ವನಿಗೆ ಜಾಮೀನು ಮಂಜೂರಾಗಿದೆ. ರಿಯಾಜ್‌ ಎಚ್‌ ವೈ ಎಂಬ ವ್ಯಕ್ತಿಗೆ ಜಾಮೀನು ಮಂಜೂರಾಗಿದೆ.

Ad Widget ... .. Ad Widget .

ಜುಲೈ 26,2022 ರಂದು ತನ್ನ ಮನೆಗೆ ಹೊರಟಿದ್ದ ಪ್ರವೀಣ್‌ ನೆಟ್ಟಾರ್‌ ಮೇಲೆ ಆರೋಪಿಗಳು ಮಾರಕಾಸ್ತ್ರದಿಂದ ದಾಳಿ ಮಾಡಿ ಕೊ*ಲೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಐಎ ಒಟ್ಟು 26 ಮಂದಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಪ್ರಕರಣದ 26 ನೇ ಆರೋಪಿಯಾಗಿರುವ ಕೊಡಗು ಸೋಮವಾರಪೇಟೆ ಮೂಲದ ರಿಯಾಜ್‌ ಎಂಬಾತನಿಗೆ ಜಾಮೀನು ಮಂಜೂರಾಗಿರುವ ಕುರಿತು ವರದಿಯಾಗಿದೆ.

Ad Widget

ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದ ಎಂಬ ಹಿನ್ನೆಲೆಯಲ್ಲಿ ಈತನ ಬಂಧನವಾಗಿತ್ತು. ಈ ಪ್ರಕರಣ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರ್‌ಗೆ ಎಚ್‌ ವೈ ರಿಯಾಜ್‌ ಆಶ್ರಯ ನೀಡಿದ್ದ ಎನ್ನಲಾಗಿತ್ತು.

Leave a Comment

Your email address will not be published. Required fields are marked *