January 2026

ಟೆಕ್ಕಿ ಶರ್ಮಿಳಾ ಸಾವು ಪ್ರಕರಣಕ್ಕೆ ಮೇಜರ್ ಟ್ವಿಸ್ಟ್| ತನಿಖೆಯಲ್ಲಿ ಬಯಲಾಯ್ತು ಭಯಾನಕ ರಹಸ್ಯ!!

ಸಮಗ್ರ ನ್ಯೂಸ್: ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಜನವರಿ 3ರ ರಾತ್ರಿ ನಡೆದ ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದ 34 ವರ್ಷದ ಟೆಕ್ಕಿ ಶರ್ಮಿಳಾ ಸಾವಿನ ರಹಸ್ಯಕ್ಕೆ ಇದೀಗ ಸ್ಪೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಮತ್ತು ದಟ್ಟ ಹೊಗೆಯಿಂದ ಉಸಿರುಗಟ್ಟಿ ಸಾವು ಎಂದು ಶಂಕಿಸಲಾಗಿತ್ತು. ಆದರೆ ರಾಮಮೂರ್ತಿ ನಗರ ಪೊಲೀಸ್ ತನಿಖೆಯಲ್ಲಿ ಇದು ಕೊಲೆ ಎಂದು ಬಯಲಾಗಿದೆ. ಕೊಲೆಗಾರನಾಗಿ ಪಕ್ಕದ ಮನೆಯ ಕೇರಳ ಮೂಲದ ಯುವಕ ಕರ್ನಲ್ ಕುರೈ […]

ಟೆಕ್ಕಿ ಶರ್ಮಿಳಾ ಸಾವು ಪ್ರಕರಣಕ್ಕೆ ಮೇಜರ್ ಟ್ವಿಸ್ಟ್| ತನಿಖೆಯಲ್ಲಿ ಬಯಲಾಯ್ತು ಭಯಾನಕ ರಹಸ್ಯ!! Read More »

ಶಬರಿಮಲೆ: ಅಯ್ಯಪ್ಪ ಸ್ವಾಮಿಯ ತಿರುವಾಭರಣ ಕಳವು ಪ್ರಕರಣ| ಎಸ್ಐಟಿಯಿಂದ ಪ್ರಧಾನ ಅರ್ಚಕನ ಬಂಧನ

ಸಮಗ್ರ ನ್ಯೂಸ್: ಅಯ್ಯಪ್ಪ ಸ್ವಾಮಿ ಸನ್ನಿಧಿಯ ಅಮೂಲ್ಯ ಚಿನ್ನಾಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಶಬರಿಮಲೆ ದೇವಾಲಯದ ಪ್ರಧಾನ ಅರ್ಚಕ (ತಂತ್ರಿ) ಕಂದರಾರು ರಾಜೀವರಾರು ಅವರನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ದೇವಾಲಯದ ಆವರಣದಿಂದ ನಾಪತ್ತೆಯಾಗಿರುವ ಬೆಲೆಬಾಳುವ ಆಭರಣಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೆಲವು ದಿನಗಳ ಹಿಂದಷ್ಟೇ ದೇವಾಲಯದ ಒಳಗಿನ ಚಿನ್ನಾಭರಣಗಳು ಕಳುವಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಈ ಗಂಭೀರ ಪ್ರಕರಣದ ಬೆನ್ನಲ್ಲೇ ತನಿಖೆಯನ್ನು ಆರಂಭಿಸಲಾಗಿತ್ತು. ಇದೀಗ ತನಿಖಾ

ಶಬರಿಮಲೆ: ಅಯ್ಯಪ್ಪ ಸ್ವಾಮಿಯ ತಿರುವಾಭರಣ ಕಳವು ಪ್ರಕರಣ| ಎಸ್ಐಟಿಯಿಂದ ಪ್ರಧಾನ ಅರ್ಚಕನ ಬಂಧನ Read More »

ತುಮಕೂರು: ಲಾರಿ, ಕ್ರೂಸರ್ ನಡುವೆ ಡಿಕ್ಕಿ| ನಾಲ್ವರು ಮಾಲಾಧಾರಿಗಳು ಸಾವು 

ಸಮಗ್ರ ನ್ಯೂಸ್: ತುಮಕೂರಿನ ಕೋರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಅಯ್ಯಪ್ಪ ಭಕ್ತರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ  ನಡೆದಿದೆ.  ಕ್ರೂಸರ್ ವಾಹನದಲ್ಲಿದ್ದ ನಾಲ್ವರು ಅಯ್ಯಪ್ಪ ಭಕ್ತರು ದುರ್ಮರಣಕ್ಕೀಡಾಗಿದ್ದಾರೆ. ಮೃತರು ಸಾಕ್ಷಿ (7), ಮಾರುತಪ್ಪ, (45), ವೆಂಕಟೇಶ (30), ಗವಿಸಿದ್ದಪ್ಪ (28) ಎಲ್ಲರೂ ಕೊಪ್ಪಳ ಜಿಲ್ಲೆಯ ಕುಕನೂರು ನಿವಾಸಿಗಳು ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಂತಿದ್ದ ಲಾರಿಗೆ ವೇಗವಾಗಿ ಬರುತ್ತಿದ್ದ ಕ್ರೂಸರ್ ವಾಹನ ಡಿಕ್ಕಿಯಾಗಿದ್ದು

ತುಮಕೂರು: ಲಾರಿ, ಕ್ರೂಸರ್ ನಡುವೆ ಡಿಕ್ಕಿ| ನಾಲ್ವರು ಮಾಲಾಧಾರಿಗಳು ಸಾವು  Read More »

ಚಿಕ್ಕಮಗಳೂರು: ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರ್ಕಾರಿ ಶಾಲೆ

ಸಮಗ್ರ ನ್ಯೂಸ್: ಮುತ್ತಿಗೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕ ಸಾಧನೆ ಹಾಗೂ ಸೌಲಭ್ಯಗಳ  ಮೂಲಕ ಖಾಸಗಿ ಶಾಲೆಗಳಿಗೆ ಸವಾಲು ಹಾಕುವಂತ ಕಾರ್ಯ ಮಾಡಿ ಜಿಲ್ಲೆಯಾದ್ಯಂತ ಗಮನ ಸೆಳೆದಿದೆ.  ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಇದೇ ಮೊದಲ ಬಾರಿಗೆ ವಿಮಾನ ಪ್ರಯಾಣದ ಅವಕಾಶ ದೊರಕಿರುವುದು ವಿಶೇಷವಾಗಿದೆ. ಮುತ್ತಿಗೆಪುರ ಶಾಲೆಯ ವೈಶಿಷ್ಟ್ಯವೇನೆಂದರೆ, ಖಾಸಗಿ ಶಾಲೆಗಳಲ್ಲಿ ದೊರೆಯುವಂತ ಗುಣಮಟ್ಟದ ಶಿಕ್ಷಣ, ಶೈಕ್ಷಣಿಕ ಸೌಲಭ್ಯಗಳು ಮತ್ತು ಸಂಸ್ಕೃತಿಪೂರ್ಣ ವಾತಾವರಣವನ್ನು ಸರ್ಕಾರಿ ಶಾಲೆಯಲ್ಲೇ ಒದಗಿಸಲಾಗುತ್ತಿದೆ.

ಚಿಕ್ಕಮಗಳೂರು: ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರ್ಕಾರಿ ಶಾಲೆ Read More »

2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಡೇಟ್ ಫಿಕ್ಸ್| ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ 

ಸಮಗ್ರ ನ್ಯೂಸ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಜ.7 ರಂದು ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದ ಪ್ರಮುಖ ದಿನಾಂಕಗಳನ್ನು ಅನುಮೋದಿಸಿದೆ. ಸಂಸದೀಯ ಕ್ಯಾಲೆಂಡರ್ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, ಭಾನುವಾರದಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಅವರು ಸತತ ಎಂಟನೇ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.  ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಜನವರಿ 28 ರಂದು ಭಾಷಣ ಮಾಡಲಿದ್ದು, ಬಜೆಟ್

2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಡೇಟ್ ಫಿಕ್ಸ್| ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ  Read More »

ಹೆಚ್ಚುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ| ಮೂಡಿಗೆರೆ ಎಸ್ಟೇಟ್ ಗೆ ಪಿಎಸ್ಐ ಹರ್ಷವರ್ಧನ್ ಭೇಟಿ 

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲ್ ಎಸ್ಟೇಟ್‌ಗೆ ಪಿಎಸ್ಐ ಹರ್ಷವರ್ಧನ್ ಅವರು ಸಿಬ್ಬಂದಿಗಳೊಂದಿಗೆ ಭೇಟಿ ನೀಡಿದರು. ಈ ವೇಳೆ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಆಧಾರ್ ಕಾರ್ಡ್‌ಗಳನ್ನು ಎಂ-ಆಧಾರ್ ಆಪ್ ಮೂಲಕ ಪರಿಶೀಲನೆ ನಡೆಸಿದ್ದಾರೆ, ಈ ಪರಿಶೀಲನೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಅಕ್ರಮ ವಲಸಿಗರ ಪತ್ತೆಗಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ| ಮೂಡಿಗೆರೆ ಎಸ್ಟೇಟ್ ಗೆ ಪಿಎಸ್ಐ ಹರ್ಷವರ್ಧನ್ ಭೇಟಿ  Read More »

ತಲೆ ಕೂದಲು ನೀಡಿ ಪಾತ್ರೆ ಖರೀದಿಸುವಿರೇ|ಮಹಿಳೆಯರೇ ಎಚ್ಚೆತ್ತುಕೊಳ್ಳಿ 

ಸಮಗ್ರ ನ್ಯೂಸ್; ಬೀದಿಗಳಲ್ಲಿ ಕೂದಲನ್ನು ತೆಗೆದುಕೊಂಡು ಪ್ಲಾಸ್ಟಿಕ್ , ಸ್ಟೀಲ್ ಪಾತ್ರೆಗಳನ್ನು ಕೊಡುತ್ತಾರೆ  ಈ ರೀತಿ ಕೂದಲನ್ನ ಮಾರಾಟ ಮಾಡುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಯಾಕಂದ್ರೆ, ಇದರ ಹಿಂದೆ ಜ್ಯೋತಿಷ್ಯ, ಆರೋಗ್ಯ ಮತ್ತು ಧಾರ್ಮಿಕ ಕಾರಣಗಳಿವೆ. ಜ್ಯೋತಿಷ್ಯದ ಪ್ರಕಾರ, ಕೂದಲು ಮಾರಾಟ ಮಾಡುವುದು ತುಂಬಾ ಅಶುಭ. ವ್ಯಕ್ತಿಯ ಪ್ರಭಾವಲಯ ಶಕ್ತಿಯು ಅವರ ಕೂದಲಿನಲ್ಲಿರುತ್ತದೆ. ಅದರ ಮೂಲಕ ಸಂಮೋಹನದಂತಹ ಕಾರ್ಯವಿಧಾನಗಳನ್ನು ಮಾಡಲು ಸಾಧ್ಯವಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಕೂದಲು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ. ಕೂದಲು ಮಾರಾಟ ಮಾಡುವುದರಿಂದ ಈ

ತಲೆ ಕೂದಲು ನೀಡಿ ಪಾತ್ರೆ ಖರೀದಿಸುವಿರೇ|ಮಹಿಳೆಯರೇ ಎಚ್ಚೆತ್ತುಕೊಳ್ಳಿ  Read More »

ಕೊಟ್ಟಿಗೆಹಾರ: ಕುಡಿದ ಮತ್ತಿನಲ್ಲಿ ತಂದೆಯಿಂದ ಮಗನ ಭೀಕರ ಹತ್ಯೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ತಂದೆಯೇ ತನ್ನ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಭೀಕರ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಪ್ರದೀಪ್ ಆಚಾರ್ (29) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಮೃತನ ತಂದೆ ರಮೇಶ್ ಆಚಾರ್ ಕ್ಷುಲಕ ಕಾರಣಕ್ಕೆ ಮದ್ಯಪಾನ ಮಾಡಿ ಆಗಾಗ ಮನೆಲ್ಲೇ ಗಲಾಟೆ ಮಾಡುತ್ತಿದ್ದ. ತಂದೆ–ಮಗನ ನಡುವಿನ ಕಲಹ ತೀವ್ರವಾಗಿದ್ದು, ಅವರ ಕಾಟದಿಂದ ಬೇಸತ್ತ ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು. ನಂತರ ಮನೆಯಲ್ಲಿ ತಂದೆ–ಮಗ

ಕೊಟ್ಟಿಗೆಹಾರ: ಕುಡಿದ ಮತ್ತಿನಲ್ಲಿ ತಂದೆಯಿಂದ ಮಗನ ಭೀಕರ ಹತ್ಯೆ Read More »

ಪುತ್ತೂರು: ಆರನೇ ದಿನಕ್ಕೆ ಕಾಲಿಟ್ಟ ವೃದ್ಧ ದಂಪತಿಗಳ ಅಹೋರಾತ್ರಿ ಧರಣಿ

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಇತ್ತೀಚೆಗೆ ಮನೆ ಕಳೆದುಕೊಂಡ ವೃದ್ಧ ದಂಪತಿಯೊಬ್ಬರು ನ್ಯಾಯಕ್ಕಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಇದು ಆರನೇ ದಿನಕ್ಕೆ ಕಾಲಿಟ್ಟಿದೆ. ಪುತ್ತೂರು ಸಹಾಯ ಆಯುಕ್ತರು ತನಿಖೆ ನಡೆಸಿ ಕ್ರಮಕೈಗೊಳ್ಳುವ ಬಗ್ಗೆ ಆಶ್ವಾಸನೆ ನೀಡಿದ್ದರೂ, ದಂಪತಿಗಳು ಧರಣಿಯನ್ನು ಮುಂದುವರೆಸಿದ್ದಾರೆ. ಮನೆ ಕಳೆದುಕೊಂಡ ಕಡಬ ತಾಲೂಕಿನ ಕೌಕ್ರಾಡಿ ಗ್ರಾ.ಪಂ ವ್ಯಾಪ್ತಿಯ ಕಾಪಿನ ಬಾಗಿಲು ನಿವಾಸಿ ರಾಧಾಮ್ಮ, ಮುತ್ತು ಸ್ವಾಮಿ ದಂಪತಿ ತಮಗೆ ನ್ಯಾಯ ಕೊಡಿಸುವಂತೆ ನೀತಿ ತಂಡದ ನೇತೃತ್ವದಲ್ಲಿ ಪುತ್ತೂರು ಸಹಾಯಕ ಕಮೀಷನರ್ ಕಚೇರಿ ಆವರಣದ ಮುಂದೆ ಅನಿರ್ದಿಷ್ಟಾವಧಿ

ಪುತ್ತೂರು: ಆರನೇ ದಿನಕ್ಕೆ ಕಾಲಿಟ್ಟ ವೃದ್ಧ ದಂಪತಿಗಳ ಅಹೋರಾತ್ರಿ ಧರಣಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜನವರಿ ತಿಂಗಳ ಈ ವಾರವು ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಶುಭ? ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ? ಎಲ್ಲಾ 12 ರಾಶಿಗಳ ಈ ವಾರದ ರಾಶಿ ಭವಿಷ್ಯ ಹೇಗಿರಲಿದೆ? ನೋಡೋಣ… ಮೇಷ ರಾಶಿ:ಮೇಷ ರಾಶಿಯವರಿಗೆ ಜವಾಬ್ದಾರಿಗಳು ಮತ್ತು ಕಾರ್ಯಭಾರ ಹೆಚ್ಚಾಗುವ ಸೂಚನೆ ಇದೆ. ವಾರದ ಆರಂಭದಲ್ಲಿ ಸ್ವಲ್ಪ ಮಾನಸಿಕ ಒತ್ತಡ ಕಂಡರೂ, ಮಧ್ಯಭಾಗದಿಂದ ಪರಿಸ್ಥಿತಿ ನಿಮ್ಮ ನಿಯಂತ್ರಣಕ್ಕೆ ಬರುತ್ತದೆ. ಕೆಲಸದ ಸ್ಥಳದಲ್ಲಿ

ದ್ವಾದಶ ರಾಶಿಗಳ ವಾರಭವಿಷ್ಯ Read More »