ಮೈಸೂರು ಅರಮನೆ ‌ಮುಂಭಾಗ ಬಲೂನ್ ಗ್ಯಾಸ್ ಸಿಲಿಂಡರ್ ಸ್ಪೋಟ| ಓರ್ವ ಸಾವು, ಐವರು ಗಂಭೀರ

ಸಮಗ್ರ ನ್ಯೂಸ್: ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ಗೇಟ್ ಬಳಿ ಗ್ಯಾಸ್ ಬಲೂನ್ ಸಿಲಿಂಡರ್‌ ಸ್ಪೋಟಗೊಂಡ ಪರಿಣಾಮ ಓರ್ವ ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

Ad Widget ... .. Ad Widget .

ಅರಮನೆ ಆವರಣದಲ್ಲಿ ʼಮಾಗಿ ಉತ್ಸವʼ ನಡೆಯುತ್ತಿದ್ದು ಅದನ್ನು ನೋಡಲು ಮತ್ತು ಕ್ರಿಸ್ ಮಸ್ ಹಿನ್ನಲೆಯಲ್ಲಿ ಅರಮನೆ ವಿದ್ಯುತ್ ದೀಪಲಂಕಾರ ವೀಕ್ಷಣೆ ಮಾಡಲು ಸ್ಥಳೀಯರು ಸೇರಿದಂತೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

Ad Widget

ಈ ವೇಳೆ ಅರಮನೆ ಮುಂಭಾಗ ಬಲೂನ್ ಗೆ ಗ್ಯಾಸ್ ತುಂಬುವ ನೈಟ್ರೋಜನ್ ಸಿಲಿಂಡರ್ ಸ್ಪೋಟಗೊಂಡಿದೆ. ಪರಿಣಾಮ ಓರ್ವ ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಸ್ಪೋಟಕ್ಕೆ ಅಲ್ಲಿದ್ದವರು ಗಾಬರಿಯಾಗಿ ಓಡಲಾರಂಭಿಸಿದ್ದಾರೆ. ಈ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆಯೂ ಹೆಚ್ಚಾಗಿದ್ದು, ಘಟನೆ ಕಂಡು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.

ಸ್ಥಳಕ್ಕೆ ಡಿಸಿಪಿ ಗಳಾದ ಬಿಂದುಮಣಿ, ಸುಂದರ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Leave a Comment

Your email address will not be published. Required fields are marked *