ಸಮಗ್ರ ನ್ಯೂಸ್: ದುಬೈನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ‘ದುಬೈ ಏರ್ ಶೋ 2025’ರಲ್ಲಿ ಭಾರತದ ‘ತೇಜಸ್’ ಲಘು ಯುದ್ಧವಿಮಾನ ಪತನವಾಗಿದೆ.
ಏರ್‌ಶೋನಲ್ಲಿ ‘ತೇಜಸ್’ ಯುದ್ಧವಿಮಾನ ಪ್ರದರ್ಶನ ನಡೆಸುತ್ತಿದ್ದಾಗ ಪತನವಾಗಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ 2:10ರ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ.
ಪತನದ ತಕ್ಷಣ ವಿಮಾನ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ದೂರದಿಂದಲೇ ಹೊತ್ತಿ ಉರಿಯುತ್ತಿದ್ದ ಜ್ವಾಲೆಗಳು ಮತ್ತು ದಟ್ಟವಾಗಿ ಆವರಿಸಿರುವ ಹೊಗೆ ಗೋಚರಿಸಿವೆ.
ಪೈಲಟ್ ಅಪಾಯದಿಂದ ಪಾರಾಗಿದ್ದಾರೋ ಇಲ್ಲವೋ ಎಂಬುದು ಇನ್ನೂ ದೃಢಪಡಿಸಬೇಕಾಗಿದೆ. ಈ ಸಂಬಂಧ ಭಾರತೀಯ ವಾಯುಪಡೆಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.






