ಸಮಗ್ರ ನ್ಯೂಸ್: ಬಿಹಾರ ಚುನಾವಣಾ ಫಲಿತಾಂಶ ಶುಕ್ರವಾರ ಹೊರಬೀಳಲಿದ್ದು, ಇಡೀ ದೇಶದ ಗಮನವೇ ಬಿಹಾರದತ್ತ ನೆಟ್ಟಿದೆ. ಕಾಂಗ್ರೆಸ್ ಒಕ್ಕೂಟವಾದ ಇಂಡಿ ಅಲೈಯನ್ಸ್ ಹಾಗೂ ಬಿಜೆಪಿ ಒಕ್ಕೂಟವಾದ ಎನ್‌ಡಿಎ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಕದನ ನಡೆದಿದ್ದು ಮತದಾರ ಯಾರಿಗೆ ಒಲಿದಿದ್ದಾನೆಂದು ಇಂದು ತಿಳಿಯಲಿದೆ.
ಬಿಜೆಪಿ ಕಾಂಗ್ರೆಸ್ ಹೊರತುಪಡಿಸಿ ಪ್ರಶಾಂತ್ ಕಿಶೋರ್ ರ ಜನಸೂರಜ್ ಪಕ್ಷ ಹಾಗೂ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸಹ ಕಣಕ್ಕಿಳಿದಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಪಕ್ಷಗಳು ಪ್ರಬಲ ಸ್ಥಳೀಯ ಪಕ್ಷಗಳಾಗಿದ್ದು, ಇಂದು ಎರಡೂ ಪಕ್ಷಗಳ ಹಣೆಬರಹ ಹೊರಬೀಳಲಿದೆ.
ಒಟ್ಟಾರೆ 243 ಸ್ಥಾನಗಳಿರುವ ಬಿಹಾರದಲ್ಲಿ ಎನ್‌ಡಿಎ ಸುಲಭ ಸರಳ ಬಹುಮತ ಗಳಿಸಬಹುದೆಂದು ಎಕ್ಸಿಟ್ ಪೋಲ್ ಗಳು ಈಗಾಗಲೇ ಭವಿಷ್ಯ ನುಡಿದಿದೆ. ಎಕ್ಸಿಟ್ ಪೋಲ್ ಗಳ ಪ್ರಕಾರ ಬಿಜೆಪಿ ಮತ್ತು ಜೆಡಿಯು ಒಕ್ಕೂಟಕ್ಕೆ 150 ಸ್ಥಾನಗಳು ಸುಲಭವಾಗಿ ದೊರೆತರೆ, ಕಾಂಗ್ರೆಸ್ ಮತ್ತು ಆರ್‌ಜೆಡಿ ಒಕ್ಕೂಟ 90 ಸ್ಥಾನಗಳನ್ನೂ ಸಹ ದಾಟುವುದು ಕಷ್ಟ ಎನ್ನಲಾಗಿದೆ.
ಆದರೆ ನಿಜವಾದ ಫಲಿತಾಂಶ ಇನ್ನು ಕೆಲವೇ ತಾಸುಗಳಲ್ಲಿ ಹೊರಬೀಳಲಿದ್ದು ಇಡೀ ದೇಶವೇ ಕುತೂಹಲದಿಂದ ನಿರೀಕ್ಷಿಸುತ್ತಿದೆ.







