ಇಂದು ಕಾರ್ತಿಕ ಹುಣ್ಣಿಮೆ| ಭೂಮಿಗೆ ಹತ್ತಿರ ಬರಲಿದ್ದಾನೆ ಚಂದಿರ| ಸೂಪರ್ ಮೂನ್ ಕಣ್ತುಂಬಿಕೊಳ್ಳಿ…

ಸಮಗ್ರ ನ್ಯೂಸ್: ಇಂದು ಕಾರ್ತಿಕ ಹುಣ್ಣಿಮೆ. ಈ ದಿನದಂದು ಸೂಪರ್‌ ಮೂನ್‌ ಗೋಚರವಾಗಲಿದೆ. ಇಂದು ಚಂದ್ರನು ಭೂಮಿಗೆ ತೀರಾ ಸಮೀಪದಲ್ಲಿರಲಿದ್ದು, ದೊಡ್ಡದಾಗಿ ಕಾಣಿಸಲಿದ್ದಾನೆ. ಭೂಮಿಗೆ ದೀರ್ಘವೃತ್ತದಲ್ಲಿ 28 ದಿನಗಳಿಗೊಮ್ಮೆ ತಿರುಗುವ ಚಂದ್ರ ಭೂಮಿಗೊಮ್ಮೆ ಸಮೀಪಿಸುವುದುಂಟು (3,56,400ಕಿ.ಮೀ). ಆಗ ಹುಣ್ಣಿಮೆಯಾದಲ್ಲಿ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುತ್ತಾನೆ.

Ad Widget ... .. Ad Widget .

ಈ ವರ್ಷದ ಮೂರು ಸೂಪರ್ ಮೂನ್​ಗಳಲ್ಲಿ ಅಕ್ಟೋಬರ್ ತಿಂಗಳ ವಿದ್ಯಮಾನ ಈಗಾಗಲೇ ಮುಗಿದಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಇಂತಹದೇ ವಿದ್ಯಮಾನ ಜರುಗಲಿದೆ. ಭೂಮಿಗೆ ಅತೀ ಸಮೀಪ ಇವತ್ತಿನ ಹುಣ್ಣಿಮೆಯಂದು ಚಂದ್ರ ಬರಲಿದ್ದಾನೆ. ಅಂದರೆ ಇಂದು ನಡೆಯಲಿರುವ ಹುಣ್ಣಿಮೆಯೇ ಈ 2ನೇ ಸೂಪರ್​ ಮೂನ್​ ಆಗಿದೆ. ಹೀಗಾಗಿ ಚಂದ್ರ ಅತಿದೊಡ್ಡದಾಗಿರಲಿದ್ದು, ಬೆಳದಿಂಗಳಿಂದ ಕೂಡಿರುವುದರಿಂದ ಆಕಾಶದಲ್ಲಿ ಚಂದ್ರ ಮಿರ ಮಿರ ಮಿಂಚಲಿದ್ದಾನೆ.

Ad Widget

Leave a Comment

Your email address will not be published. Required fields are marked *