ಹಾಸನಾಂಬೆ ದೇಗುಲದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ| ಫಾರಿನ್ ಕರೆನ್ಸಿ, ಚಿನ್ನ ಸೇರಿ 25 ಕೋಟಿಗೂ ಅಧಿಕ ಆದಾಯ

ಸಮಗ್ರ ನ್ಯೂಸ್: ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕೊನೆಗೊಂಡಿದ್ದು, ಶುಕ್ರವಾರ ನಡೆದ ಹುಂಡಿ ಎಣಿಕೆ ನಂತರದಲ್ಲಿ ಈ ಬಾರಿ ₹25.59 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಇದು ದೇಗುಲದ ಇತಿಹಾಸದಲ್ಲೇ ಅತ್ಯಧಿಕ ಕಾಣಿಕೆಯಾಗಿದೆ.

Ad Widget ... .. Ad Widget .

ಸುಮಾರು 3೦೦ಕ್ಕೂ ಹೆಚ್ಚು ಸಿಬ್ಬಂದಿ ಎಣಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಹಾಗೂ ಭಾರತ್ ಸ್ಕೌಟ್ಸ್‌ ಆಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Ad Widget

ದೇವರ ಹುಂಡಿಯಲ್ಲಿ ಹಣದ ಜೊತೆಗೆ 75 ಗ್ರಾಂ ಚಿನ್ನ, ೧ ಕೇಜಿ ೫೮ ಗ್ರಾಂ ಬೆಳ್ಳಿ ಮತ್ತು ತಾಮ್ರದ ವಸ್ತುಗಳು ಪತ್ತೆಯಾಗಿವೆ. ಜೊತೆಗೆ, ಅಮೆರಿಕದ ಐದು ಡಾಲರ್, ಇಂಡೋನೇಷ್ಯಾ ಮತ್ತು ಮಾಲ್ಡೀವ್ಸ್‌ ರಾಷ್ಟ್ರಗಳ ಕರೆನ್ಸಿ ನೋಟುಗಳೂ ಪತ್ತೆಯಾದವು.

ಹುಂಡಿ ಎಣಿಕೆ ವೇಳೆ ಈ ಬಾರಿ ಭಕ್ತರ ಭಾವನಾತ್ಮಕ ಮನವಿ ಪತ್ರಗಳೇ ಹೆಚ್ಚು ಪತ್ತೆಯಾಗಿವೆ. ‘ತಾಯಿ, ನನ್ನ ಕಷ್ಟ ದೂರಮಾಡು’, ‘ಕುಟುಂಬಕ್ಕೆ ಸುಖ, ಶಾಂತಿ ಕೊಡು’, ‘ಇಷ್ಟಾರ್ಥ ಸಿದ್ಧಿಸಲಿ’ ಎಂಬ ಬೇಡಿಕೆಗಳು ಹುಂಡಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡುಬಂದಿವೆ. ಈ ಬೇಡಿಕೆ ಪತ್ರಗಳನ್ನು ಹಣದಿಂದ ಪ್ರತ್ಯೇಕಿಸಿ ಗೌಪ್ಯವಾಗಿ ಸಂಗ್ರಹಿಸಿಡಲಾಗಿದೆ.

ಹುಂಡಿ ಎಣಿಕೆ ಕಾರ್ಯವನ್ನು ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಅವರ ನೇತೃತ್ವದಲ್ಲಿ ಹಾಗೂ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ಅವರ ಮೇಲ್ವಿಚಾರಣೆಯಲ್ಲಿ ಸುಸೂತ್ರವಾಗಿ ನಡೆಸಲಾಯಿತು. ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಕಂಡುಬಂದ ಭಕ್ತರ ಸಂಖ್ಯೆಯೂ, ಅವರ ಅರ್ಪಣೆಗಳ ಪ್ರಮಾಣವೂ ಹಿಂದಿನ ವರ್ಷಗಳಿಗಿಂತ ಸಾಕಷ್ಟು ಹೆಚ್ಚಾಗಿತ್ತು.

Leave a Comment

Your email address will not be published. Required fields are marked *