ಟಿ.20ನಲ್ಲಿ ಕ್ರಿಕೆಟ್ ದಿಗ್ಗಜರಿಗೆ ಸೋಲುಣಿಸಿದ ನೇಪಾಳ| ಐತಿಹಾಸಿಕ ದಾಖಲೆ ಬರೆದ ಕ್ರಿಕೆಟ್ ಶಿಶು

ಸಮಗ್ರ ನ್ಯೂಸ್: ಟಿ20 ಕ್ರಿಕೆಟ್​ನಲ್ಲಿ ನೇಪಾಳ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಎರಡು ಬಾರಿಯ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಕ್ಕೆ ಸೋಲುಣಿಸುವ ಮೂಲಕ ನೇಪಾಳ ತಂಡವು ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ಚೊಚ್ಚಲ ಗೆಲುವು ದಾಖಲಿಸಿದಂತಾಗಿದೆ.

Ad Widget ... .. Ad Widget .

ನೇಪಾಳ ತಂಡವು ಈವರೆಗೆ ಟೆಸ್ಟ್ ಆಡುವ ದೇಶದ ವಿರುದ್ಧ ಒಂದೇ ಒಂದು ಟಿ20 ಪಂದ್ಯ ಗೆದ್ದಿರಲಿಲ್ಲ. ಇದೀಗ ವಿಂಡೀಸ್ ಪಡೆಯನ್ನು ಮಕಾಡೆ ಮಲಗಿಸಿ ಐತಿಹಾಸಿಕ ಸಾಧನೆ ಮಾಡಿದೆ.

Ad Widget

ಯುಎಇನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 148 ರನ್ ಕಲೆಹಾಕಿದ್ದರು.

149 ರನ್​ಗಳ ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅದರಲ್ಲೂ ಯಾವುದೇ ಬ್ಯಾಟರ್ 30 ರನ್​ ಕಲೆಹಾಕಿಲ್ಲ ಎಂಬುದು ವಿಶೇಷ. ಪರಿಣಾಮ ವೆಸ್ಟ್ ಇಂಡೀಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 129 ರನ್​ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ನೇಪಾಳ ತಂಡವು 19 ರನ್​ಗಳ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದೆ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11:ಕೈಲ್ಮೇಯರ್ಸ್ , ಅಕೀಮ್ಅಗಸ್ಟೆ , ಕೀಸಿಕಾರ್ಟಿ , ಅಮೀರ್ಜಾಂಗೂ (ವಿಕೆಟ್ ಕೀಪರ್) , ಜ್ಯುವೆಲ್ಆಂಡ್ರ್ಯೂ , ಜೇಸನ್ಹೋಲ್ಡರ್ , ಫ್ಯಾಬಿಯನ್ಅಲೆನ್ , ಅಕೇಲ್ಹೊಸೇನ್ (ನಾಯಕ) , ನವೀನ್ಬಿಡೈಸಿ , ಓಬೆಡ್ಮೆಕಾಯ್ , ರಾಮನ್ಸಿಮಂಡ್ಸ್.

ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ಶೇಖ್ (ವಿಕೆಟ್ ಕೀಪರ್) , ರೋಹಿತ್ಪೌಡೆಲ್ (ನಾಯಕ) , ಸಂದೀಪ್ಜೋರಾ , ದೀಪೇಂದ್ರ ಸಿಂಗ್ ಐರಿ , ಕುಶಾಲ್ ಮಲ್ಲಾ , ಕರಣ್ಕೆಸಿ , ಗುಲ್ಸನ್ಝಾ , ಸೋಂಪಾಲ್ ಕಾಮಿ , ನಂದನ್ ಯಾದವ್ , ಲಲಿತ್ ರಾಜಬಂಶಿ.

Leave a Comment

Your email address will not be published. Required fields are marked *