ಉಪ್ಪಿನಂಗಡಿ: ಪ್ರಚೋದನಕಾರಿ ಭಾಷಣ| ಗಣರಾಜ್ ಕೆದಿಲ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ಪೆರ್ನೆಯಲ್ಲಿ ದನ ಕದ್ದು ಮಾಂಸ ಮಾಡಿದ ಘಟನೆ ವಿರೋಧಿಸಿ ಸೆಪ್ಟೆಂಬರ್ 6 ರಂದು ನಡೆದಿದ್ದ ಪ್ರತಿಭಚನೆಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹಿಂದೂ ಸಂಘಟನೆ ಮುಖಂಡ ಗಣರಾಜ್ ಭಟ್ ಕೆದಿಲ ಅವರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget ... .. Ad Widget .

ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕಡಂಬು ಕಾರ್ಲ ರಾಮಧ್ವಾರದ ಬಳಿ ʼʼಗೋ ಮಾತಾ ಸಂರಕ್ಷಣಾ ಚಳುವಳಿ ಪೆರ್ನೆ” ಇದರ ವತಿಯಿಂದ ಗೋ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ವೇಳೆ ಗಣರಾಜ್ ಭಟ್ ಕೆದಿಲ ಎಂಬವರು ಸ್ಥಳೀಯವಾಗಿ ಧಾರ್ಮಿಕ, ಸಮುದಾಯಿಕವಾಗಿ ದ್ವೇಷ ಭಾವನೆ ಹುಟ್ಟಿಸುವ ಉದ್ದೇಶದಿಂದ ಗುಂಪು ಗುಂಪುಗಳ, ಸಮುದಾಯಗಳ ಮಧ್ಯೆ ವೈಮನಸ್ಸು ಬೆಳೆಸುವಂತೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಪ್ರಚೋದನಕಾರಿಯಾಗಿ ಭಾಷಣ ಮಾಡಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 78/2025 ಕಲಂ: 353 (2)BNS 2023 ಯಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

Ad Widget

Leave a Comment

Your email address will not be published. Required fields are marked *