ಶೌಚಾಲಯದಲ್ಲಿ ವಿದ್ಯಾರ್ಥಿನಿ‌ ಹೆರಿಗೆಯಾದ ಪ್ರಕರಣ| ಪ್ರಮುಖ‌ ಆರೋಪಿ‌ ಅರೆಸ್ಟ್

ಸಮಗ್ರ ನ್ಯೂಸ್: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಯಾದಗಿರಿ ವಸತಿ ಶಾಲೆ ಹೆರಿಗೆ ಕೇಸ್ ಬಗ್ಗೆ ಇದೀಗ ಬಿಗ್ ಅಪ್ಡೇಟ್ ದೊರೆತಿದೆ. ಯಾದಗಿರಿಯ ಶಹಾಪುರ‌ದ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಹೆರಿಗೆ ಪ್ರಕರಣ ಸಂಬಂಧ ಪ್ರಮುಖ A1 ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

. Ad Widget . Ad Widget . Ad Widget .

ಹಾಸ್ಟೆಲ್ ವಾರ್ಡನ್ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿತ್ತು. ಸುರಪುರ ತಾಲೂಕಿನ ಕಕ್ಕೇರ ಗ್ರಾಮದ ಪರಮಣ್ಣ(30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಸದ್ಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಆರೋಪಿ ಪರಮಣ್ಣ, ಅಪ್ರಾಪ್ತ ಬಾಲಕಿ ಜೊತೆ ಸಂಬಂಧ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಕೂಡ ಹಾಕಿದ್ದನು ಎನ್ನಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ವಸತಿ ಶಾಲೆಯ ಟಾಯ್ಲೆಟ್ ನಲ್ಲಿ ಅಪ್ರಾಪ್ತ ಹುಡುಗಿ ಕಿರುಚಾಡಿದ್ದಳು. ಸಹಪಾಠಿಗಳೆಲ್ಲ ಹೋಗಿ ನೋಡಿದಾಗ ಹೆರಿಗೆ ನೋವಿನಿಂದ ಬಾಲಕಿ ಒದ್ದಾಡುತ್ತಿದ್ದಳು. ಬಳಿಕ ಹೆರಿಗೆ ಆಗಿತ್ತು. ನವಜಾತ ಶಿಶುವನ್ನು ಶಹಾಪುರ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಇಡೀ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *