ಕೊಟ್ಟಿಗೆಹಾರ : ಡೆಮೋ ಕಾರಿನಿಂದ ಡೀಸೆಲ್ ಕದ್ದು ಮಾರಾಟ ಮಾಡಿದ ಶೋ ರೂಂ ಸಿಬ್ಬಂದಿ

ಸಮಗ್ರ ನ್ಯೂಸ್: ಶೋ ರೂಂ ಸಿಬ್ಬಂದಿಗಳೇ ಡೆಮೋ ಕಾರಿನಿಂದ ಡಿಸೇಲ್ ಕಳವು ಮಾಡಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ-ಬಣಕಲ್ ರಸ್ತೆ ಮಧ್ಯೆ ಬೆಳಕಿಗೆ ಬಂದಿದೆ.

Ad Widget . Ad Widget . Ad Widget . Ad Widget . Ad Widget . Ad Widget .

ಮಂಗಳೂರಿನಿಂದ ಕಡೂರಿನತ್ತ ಹೊಸ ಟಾಟಾ ಯೋಧ ಕಾರನ್ನು ಶೋ ರೂಂಗೆ ತಲುಪಿಸಲು ಹೊರಟಿದ್ದ ಸಿಬ್ಬಂದಿಗಳು ಮಾರ್ಗ ಮಧ್ಯೆ ಕಾರಿನ ಇಂಜಿನ್ ಪಕ್ಕದ ಪಂಪ್ ಪೈಪ್ ಬಿಚ್ಚಿ ಸುಮಾರು 10 ಲೀಟರ್ ಡಿಸೇಲ್ ಇಳಿಸಿ ಸ್ಥಳೀಯ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಳ್ಳತನ ಮಾಡಿದ ಹಣದಿಂದ ಮದ್ಯ‌ ಸೇವಿಸಿ, ನಾನ್ ವೆಜ್ ಊಟ ಮಾಡಿ ವಾಪಸ್ ಹೋದ ಸಿಬ್ಬಂದಿಗಳ ಕಾರ್ಯ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ಹೊಸ ವಾಹನಗಳನ್ನು ಶೋ ರೂಂಗಳಿಗೆ ತಲುಪಿಸುವಾಗಲೇ ಸಿಬ್ಬಂದಿಗಳು ಇಂತಹ ದುಷ್ಕೃತ್ಯದಲ್ಲಿ ತೊಡಗಿರುವುದು ಗಂಭೀರವಾಗಿದ್ದು, ಈ ಕುರಿತು ಸ್ಥಳೀಯರು ಕಂಪನಿ ಮಟ್ಟದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *