ಕುಕ್ಕೆಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದಲ್ಲಿEmployability Excellence :Career Ace ತರಬೇತಿ ಕಾರ್ಯಕ್ರಮ 

ಸಮಗ್ರ ನ್ಯೂಸ್: ಕುಕ್ಕೆಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ, ಎಚ್ ಆರ್ ಹಾಗೂ ಪ್ಲೇಸ್ಮೆಂಟ್ ಸೆಲ್ ವತಿಯಿಂದ, ಮ್ಯಾಜಿಕ್ ಬಸ್ ಇಂಡಿಯ ಫೌಂಡೇಶನ್ ಹಾಗೂ ರಿಲಯನ್ಸ್ ಫೌಂಡೇಶನ್ ಇವರ ಆಶ್ರಯದಲ್ಲಿ Employability Excellence :Career Ace ತರಬೇತಿ ಕಾರ್ಯಕ್ರಮವು 4.08.2025 ರಿಂದ 9.8.2025 ರವರೆಗೆ ನಡೆಯಿತು.

Ad Widget ... .. Ad Widget .

ಮಹಾವಿದ್ಯಾಲಯದ ಪ್ರಾಂಶುಪಾಲರಾದ Dr. ದಿನೇಶ   ಪಿ.ಟಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಪ್ರೀತಮ್ ಪ್ರಸಾದ್ ಎಸ್. ಪ್ಲೇಸ್ಮೆಂಟ್ ಆಫೀಸರ್, ರಿಲಯನ್ಸ್ ಫೌಂಡೇಶನ್ ಬೆಂಗಳೂರು ಹಾಗೂ ಅಜಯ್ ಕುಮಾರ್ ಎ. ಜೆ. ಕಾರ್ಪೊರೇಟ್ ಟ್ರೈನರ್, ರಿಲಯನ್ಸ್ ಫೌಂಡೇಶನ್ ಬೆಂಗಳೂರು ಉಪಸ್ಥಿತರಿದ್ದು ಈ ತರಬೇತಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. 

Ad Widget

ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರಾದ ಲತಾ B.T ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಎಚ್ ಆರ್ ಹಾಗೂ ಪ್ಲೇಸ್ಮೆಂಟ್ ಸೆಲ್ ಸಂಯೋಜಕರಾದ ಶ್ರೀಮತಿ ಆರತಿ ಸ್ವಾಗತಿಸಿ , ವಿದ್ಯಾರ್ಥಿನಿ ಕೃತಿ ಧನ್ಯವಾದ ಸಮರ್ಪಿಸಿ, ನಿಶಾ ಗೌರಿ ಕಾರ್ಯಕ್ರಮ ನಿರೂಪಣೆ ನಡೆಸಿದರು. ಮಹಾವಿದ್ಯಾಲಯದ ಅಂತಿಮ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಈ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

Leave a Comment

Your email address will not be published. Required fields are marked *