ಗೃಹಲಕ್ಷ್ಮಿಯರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಪ್ಟ್ ನೀಡಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ರಾಜ್ಯದ ಮಹಿಳೆಯರಿಗೆ ವರಮಮಹಾಲಕ್ಮೀ ಹಬ್ಬದ ಸಂದರ್ಭದಲ್ಲಿ ಸಿಹಿಸುದ್ದಿ ಸಿಕ್ಕಿದ್ದು, ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ಬಿಡುಗಡೆಯಾಗಿದೆ.

. Ad Widget . Ad Widget . Ad Widget

2025- 26 ನೇ ಸಾಲಿನ ಮೂರನೇ ಕಂತಿನ ಎರಡು ಸಾವಿರ ರೂಪಾಯಿಯನ್ನು ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಎರಡು ಮೂರು ದಿನದಲ್ಲಿ ಜಮಾ ಮಾಡಲಾಗುವುದು. ರಾಜ್ಯದ 1.24 ಕೋಟಿ ಮಹಿಳೆಯರ ಖಾತೆಗೆ ಮೂರನೇ ಕಂತಿನ ಹಣ ಜಮಾ ಆಗಲಿದ್ದು, ನಾಲ್ಕು ಮತ್ತು ಐದನೇ ಕಂತಿನ ಹಣ ಬಾಕಿ ಉಳಿಯಲಿದೆ.

. Ad Widget .

ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಖಾತೆಗೆ ಹಣ ಸಂದಾಯವಾಗುತ್ತಿದ್ದು, ನಂತರ ತಾಲೂಕು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಿಂದ ಡಿಬಿಟಿ ಮೂಲಕ ಫಲಾನುಭವಿಗಳಿಗೆ ನೇರವಾಗಿ ಹಣ ಸಂದಾಯವಾಗಲಿದೆ ಎನ್ನಲಾಗಿದೆ.

Leave a Comment

Your email address will not be published. Required fields are marked *