ಧರ್ಮಸ್ಥಳ ಪ್ರಕರಣದಲ್ಲಿ ಮಾಧ್ಯಮ ‌ನಿರ್ಬಂಧ ವಿಚಾರ| ಪ್ರಕರಣ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲು ನ್ಯಾಯಾಧೀಶರ ಮನವಿ

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಮಾಧ್ಯಮಗಳಿಗೆ ಯಾವುದೇ ರೀತಿ ಸುದ್ದಿ ಪ್ರಕಟಿಸದಂತೆ ಹಾಗೂ ಪ್ರಕಟಿಸಿರುವ ಸುದ್ದಿಗಳನ್ನು ಡಿಲೀಟ್ ಮಾಡುವಂತೆ ಏಕಪಕ್ಷೀಯವಾಗಿ ಆದೇಶ ಮಾಡಿದ್ದ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು ತಾವು ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲು ಅವರು ಮನವಿ ಮಾಡಿದ್ದಾರೆ.

Ad Widget ... ..

ಪ್ರಕರಣವನ್ನು ಅಗತ್ಯ ಆದೇಶಗಳಿಗಾಗಿ ಪ್ರಧಾನ ನಗರ ಸಿವಿಲ್ ಸೆಷನ್ಸ್ ನ್ಯಾಯಾಧೀಶರ ಮುಂದೆ ಇಡುವುದು ಸೂಕ್ತ ಎಂದು ಆಗಸ್ಟ್‌ 2ರಂದು ಅವರು ತಿಳಿಸಿದ್ದಾರೆ ಎಂದು ಬಾರ್ ಆಂಡ್ ಬೆಂಚ್ ವೆಬ್ ಸೈಟ್ ವರದಿ ಮಾಡಿದೆ.

Ad Widget

ಸೆಶೆನ್ಸ್ ನ್ಯಾಯಾಲಯ ಮಾಧ್ಯಮಗಳಿಗೆ ಪ್ರತಿಬಂಧಕಾದೇಶ ಮಾಡಿದ್ದನ್ನು ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಹಾಗೂ ಬೈರಪ್ಪ ಹರೀಶ್ ಕುಮಾರ್ ಪ್ರಶ್ನಿಸಿದ್ದರು. ನ್ಯಾಯಾಧೀಶರು ಮೊಕದ್ದಮೆ ಸಲ್ಲಿಸಿದ್ದ ಹರ್ಷೇಂದ್ರ ಕುಮಾರ್‌ ಅವರ ಕುಟುಂಬದಿಂದ ನಿರ್ವಹಿಸಲಾಗುತ್ತಿರುವ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದರು. ಹೀಗಾಗಿ ಬೇರೆ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸುವಂತೆ ತಮ್ಮ ವಕೀಲರಿಗೆ ಮನವಿ ಮಾಡಿದ್ದರು. ವಕೀಲರು ಈ ಸಂಬಂಧ ನ್ಯಾಯಾಲಯಕ್ಕೆ ಮೆಮೊ ಮತ್ತು ಪತ್ರ ಸಲ್ಲಿಸಿದ್ದರು. ಇತ್ತ ಮೊಕದ್ದಮೆ ಹೂಡಿದ್ದ ಹರ್ಷೇಂದ್ರಕುಮಾರ್‌ ಪರ ವಕೀಲರು ಮೆಮೊ ಆಧಾರದಲ್ಲಿ ಮೊಕದ್ದಮೆ ವರ್ಗಾಯಿಸುವಂತಿಲ್ಲ ಎಂದು ವಾದಿಸಿದ್ದರು.

ತಾನು ಕಾಲೇಜಿನ ವಿದ್ಯಾರ್ಥಿಯಾಗಿದ್ದುದು ಸತ್ಯ ಎಂದು ನುಡಿದಿರುವ ನ್ಯಾಯಾಧೀಶರು ಆದರೆ ಮೊಕದ್ದಮೆದಾರರನ್ನು ತಾವು ಯಾವುದೇ ಸಂದರ್ಭದಲ್ಲಿ ನೇರ ಇಲ್ಲವೇ ಪರೋಕ್ಷವಾಗಿ ಮಾತನಾಡಿಸಿಲ್ಲ ಎಂದಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಮುಂದುವರೆಯುವಂತಾಗಲು ನ್ಯಾಯ ಒದಗಿಸಿದರಷ್ಟೇ ಸಾಲದು, ಅದು ಕಾಣುವಂತಿರಬೇಕು ಎಂದಿರುವ ಅವರು ನಾನು ಈ ಮೊಕದ್ದಮೆಯಲ್ಲಿ ಪಕ್ಷಕಾರನಲ್ಲದಿದ್ದರೂ ಅಥವಾ ಯಾವುದೇ ವೈಯಕ್ತಿಕ ಆಸಕ್ತಿ ಹೊಂದಿಲ್ಲದಿದ್ದರೂ ಬೆಂಗಳೂರು ನಗರ ಸಿವಿಲ್‌ ನ್ಯಾಯಾಲಯ ಕಾಯಿದೆ 1979 ರ ಸೆಕ್ಷನ್ 13(2)(b) ಪ್ರಕಾರ OS No.5185/2025 ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲು ಪ್ರಧಾನ ನಗರ ಸಿವಿಲ್‌ ಸೆಷನ್ಸ್ ನ್ಯಾಯಾಧೀಶರಿಗೆ ವಿನಂತಿ ಸಲ್ಲಿಸುವುದು ಸೂಕ್ತಎಂದಿದ್ದಾರೆ. ಅದಕ್ಕೆ ಅನುಗುಣವಾಗಿ ಪತ್ರ ಸಲ್ಲಿಸಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.

Leave a Comment

Your email address will not be published. Required fields are marked *