ಧರ್ಮಸ್ಥಳದ ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ| ಎಸ್ಐಟಿಯಿಂದ ತೀವ್ರಗೊಂಡ ಅನಾಮಿಕನ ವಿಚಾರಣೆ

ಸಮಗ್ರ ನ್ಯೂಸ್: ಧರ್ಮಸ್ಥಳದ ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ.

Ad Widget ... ..

ಇಂದು ಪಾಯಿಂಟ್ ನಂಬರ್ 11ರಲ್ಲಿ ಉತ್ಖನನ ನಡೆಸಲು ತೀರ್ಮಾನಿಸಿದ್ದು ಈ ವೇಳೆ ಅನಾಮಿಕ ಎಸ್ಐಟಿ ತಂಡವನ್ನು ಧರ್ಮಸ್ಥಳದ ಬಂಗ್ಲಗುಡ್ಡಕ್ಕೆ ಕರೆದೊಯ್ದಿದ್ದಿದ್ದಾನೆ. ಆ ಭಾಗದಲ್ಲಿ ಮೂಳೆ‌ ಹಾಗೂ ಇನ್ನಿತರ ಅವಶೇಷಗಳು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ‌ಅನಾಮಿಕನ ವಿಚಾರಣೆ ತೀವ್ರಗೊಂಡಿದೆ ಎಂಬ ಮಾಹಿತಿಗಳು ಲಭಿಸಿವೆ.

Ad Widget

ಅವಶೇಷಗಳು ಸಿಕ್ಕ ಬೆನ್ನಲ್ಲೆ ಸ್ಥಳಕ್ಕೆ ಎಸ್ಐಟಿ ತಂಡದ ಕಾರ್ಮಿಕರು ವಿವಿಧ ವಸ್ತುಗಳನ್ನು ಹೊತ್ಯೊಯ್ಯುತ್ತಿರುವುದಾಗಿ ತಿಳಿದುಬಂದಿದೆ. ಒಟ್ಟಾರೆಯಾಗಿ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿರುವುದು ಕಂಡುಬಂದಿದೆ.

ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಂತ್ ಎಂಬಾತ ಎಸ್ಐಟಿ ಗೆ ದೂರು ನೀಡಲು ಬಂದಿದ್ದು ಆತನ ದೂರನ್ನು ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಯ ಅಧಿಕಾರಿಗಳು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಮಾಧ್ಯಮವೊಂದು ಹೇಳಿದೆ.

Leave a Comment

Your email address will not be published. Required fields are marked *