ಧರ್ಮಸ್ಥಳ: ಉತ್ಖನನ ವೇಳೆ ಸಿಕ್ಕ ಪ್ಯಾನ್ ಕಾರ್ಡ್ ಯಾರದ್ದು? ಇಲ್ಲಿದೆ ಎಸ್ಐಟಿ‌ ನೀಡಿದ ಮಾಹಿತಿ…

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಉತ್ಖನನದ ವೇಳೆ ಸಿಕ್ಕ ಪ್ಯಾನ್ ಕಾರ್ಡ್ ನ ಮೂಲವನ್ನು ಎಸ್ಐಟಿ ಅಧಿಕಾರಿಗಳು ಜಾಲಾಡಿದ್ದಾರೆ. ಪ್ಯಾನ್ ಕಾರ್ಡ್ ಹೋಲ್ಡರ್ ಜಾಂಡೀಸ್ ನಿಂದ ತನ್ನ ಊರಿನಲ್ಲೇ ಸಾವಿನ್ನಪ್ಪಿದ್ದಾನೆಂದು ಮಾಹಿತಿ ಲಭ್ಯವಾಗಿದೆ.

Ad Widget ... ..

ದೂರುದಾರ ಮೃತದೇಹ ಹೂತಿಟ್ಟಿದ್ದೇನೆಂದು ಹೇಳಿರುವ ಫಸ್ಟ್ ಪಾಯಿಂಟ್ ನಲ್ಲಿ ಪ್ಯಾನ್ ಕಾರ್ಡ್ ಪತ್ತೆಯಾಗಿತ್ತು. ಈ ಪ್ಯಾನ್ ಕಾರ್ಡ್ ಬಗ್ಗೆ ಎಸ್ ಐಟಿ ಅಧಿಕಾರಿಗಳು ಮಾಹಿತಿ ಕಳೆ ಹಾಕಿದ್ದಾರೆ. ಪಾನ್ ಕಾರ್ಡ್ ಕಳೆದ ಮಾರ್ಚ್ ನಲ್ಲಿ‌ ಅನಾರೋಗ್ಯದಿಂದ ಮೃತಪಟ್ಟಿ ನೆಲಮಂಗಲದ ವ್ಯಕ್ತಿಯದ್ದು ಎಂದು ಗೊತ್ತಾಗಿದೆ.

Ad Widget

ಆ ವ್ಯಕ್ತಿ ಧರ್ಮಸ್ಥಳಕ್ಕೆ ಬಂದಿದ್ದಾಗ ವ್ಯಕ್ತಿಯ ಪರ್ಸ್ ಕಳ್ಳತನವಾಗಿರುವ ಸಂಶಯ ವ್ಯಕ್ತವಾಗಿದೆ. ಕಳ್ಳ ಹಣವನ್ನು ತೆಗೆದುಕೊಂಡು ಉಳಿದ ವಸ್ತುಗಳನ್ನು ಕಳ್ಳ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *