ಇಂದು RCB V/s PK ನಡುವೆ ಐಪಿಎಲ್ ಫೈನಲ್| ಯಾರ ಮುಡಿಗೆ ಕಪ್!?

ಸಮಗ್ರ ನ್ಯೂಸ್: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2025 ಫೈನಲ್‌ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರು ಹಾಗೂ ಪಂಜಾಬ್‌ ತಂಡಗಳು ಮುಖಾಮುಖಿಯಾಗಲಿವೆ. ಚೊಚ್ಚಲ ಕಿರೀಟಕ್ಕಾಗಿ ಎರಡೂ ತಂಡಗಳ ನಡುವಿನ ಹೋರಾಟ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

. Ad Widget . Ad Widget

ಐಪಿಎಲ್‌ ಇತಿಹಾಸದ 18 ವರ್ಷಗಳಲ್ಲಿಯೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಇದೇ ಮೊದಲ ಬಾರಿಗೆ ಐಪಿಎಲ್‌ ಟ್ರೋಫಿ ಗೆಲ್ಲುವ ಸನಿಹದಲ್ಲಿವೆ. ವಿರಾಟ್‌ ಕೊಯ್ಲಿ, ಜೋಶ್‌ ಹ್ಯಾಜಲ್‌ವುಡ್‌ ಅವರಂತಹ ಬಲಾಢ್ಯ ಆಟಗಾರರನ್ನು ಹೊಂದಿದ್ದು ಗೆಲ್ಲುವ ಫೇವರೇಟ್‌ ತಂಡ ಎನಿಸಿಕೊಂಡಿದೆ. ಮತ್ತೊಂದೆಡೆಯಲ್ಲಿ ಶ್ರೇಯಸ್‌ ಅಯ್ಯರ್‌ ಅವರಂತಹ ಆಟಗಾರರನ್ನು ಹೊಂದಿರುವ ಪಂಜಾಬ್‌ ಕಿಂಗ್ಸ್‌ ತಂಡ ಯುವ ಆಟಗಾರರಿಂದ ಕೂಡಿದ್ದು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

. Ad Widget . . Ad Widget . Ad Widget

ಐಪಿಎಲ್‌ ಫೈನಲ್‌ ಪಂದ್ಯ ನಡೆಯಲಿರುವ ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರೀಡಾಂಗಣ ಬ್ಯಾಟಿಂಗ್‌ ಯೋಗ್ಯವಾಗಿರುವ ಪಿಚ್‌ ಹೊಂದಿದೆ. ಹಿಂದೆ ಗುಜರಾತ್‌ ಟೈಟಾನ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ವಿರುದ್ದದ ಪಂದ್ಯ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದು, ರನ್‌ ಹೊಳೆಯೇ ಹರಿದಿತ್ತು. ಇದೀಗ ಫೈನಲ್‌ ಪಂದ್ಯದಲ್ಲಿಯೂ ಮೊದಲು ಬ್ಯಾಟಿಂಗ್‌ ನಡೆಸುವ ತಂಡ 220+ ರನ್‌ ಗಳಿಸುವ ಸಾಧ್ಯತೆ ಎನ್ನುತ್ತಿದೆ ಕ್ರಿಕೆಟ್‌ ಪಂಡಿತ ಲೆಕ್ಕಾಚಾರ. ಬೌನ್ಸರ್‌ಗಳಿಗೆ ಪಿಚ್‌ ಹೆಚ್ಚು ಸಹಕಾರಿಯಾಗಲಿದೆ.

ರಾಯಲ್‌ ಚಾಲೆಂಜರ್ಸ್‌ ಸಂಭಾವ್ಯ ತಂಡ :
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಾಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ

ಪಂಜಾಬ್‌ ಕಿಂಗ್ಸ್‌ ಸಂಭಾವ್ಯ ತಂಡ :
ಪ್ರಭ್ಸಿಮ್ರಾನ್ ಸಿಂಗ್, ಪ್ರಿಯಾನ್ಶ್ ಆರ್ಯ, ಜೋಶ್ ಇಂಗ್ಲಿಸ್ (ವಾರ), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಾಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜೈ, ಕೈಲ್ ಜೇಮಿಸನ್, ಅರ್ಶ್ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್/ಯುಜ್ವೇಂದ್ರ ಚಾಹಲ್, ವಿಜಯಕುಮಾರ್ ವೈಶಾಕ್

Leave a Comment

Your email address will not be published. Required fields are marked *