ಸೂಟ್‌ಕೇಸ್‌ನಲ್ಲಿ ‘ಕೈ’ ಕಾರ್ಯಕರ್ತೆ ಮೃತದೇಹ ಪತ್ತೆ

ಸಮಗ್ರ ನ್ಯೂಸ್: ಹರಿಯಾಣ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಮೃತದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಈ ಹಿಂದೆ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಕಾಣಿಸಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ (22) ಮೃತದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

. Ad Widget . Ad Widget

ಇನ್ನೂ ಈ ಸಾವಿನ ಬಗ್ಗೆ ಅನುಮಾನಗಳು ಭುಗಿಲೆದ್ದಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಆಗ್ರಹಿಸಿದ್ದಾರೆ. ಸಂಪ್ಲಾ ಬಸ್ ನಿಲ್ದಾಣದ ಬಳಿ ದಾರಿಹೋಕರು ಸೂಟ್‌ಕೇಸ್ ಅನ್ನು ಪತ್ತೆಹಚ್ಚಿದ್ದು, ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ನಗರ ಪೊಲೀಸರು, ವಿಧಿವಿಜ್ಞಾನ ತಂಡದೊಂದಿಗೆ ಸೂಟ್‌ಕೇಸ್ ಒಳಗೆ ಏನಿದೆ ಎಂಬುದನ್ನು ತೆರೆದು ನೋಡಿದ್ದಾರೆ. ಈ ಸೂಟ್ಕೇಸ್ನಲ್ಲಿ ನರ್ವಾಲ್ ರುಂಡವನ್ನು ದೇಹದಿಂದ ಬೇರ್ಪಡಿಸಿ, ಆಕೆಯ ದುಪಟ್ಟಾದಿಂದ ಸುತ್ತಿಟ್ಟಿರುವುದು ಕಂಡು ಬಂದಿದೆ.

. Ad Widget . . Ad Widget . Ad Widget

ಈ ವಿಚಾರವಾಗಿ ಮಾತನಾಡಿದ ಸಂಪ್ಲಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಿಜೇಂದರ್ ಸಿಂಗ್  ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *