ಉಪ್ಪಿನಂಗಡಿ: ಅನಾಮಧೇಯ ಕರೆ ಸ್ವೀಕರಿಸಿದ ಕೂಡಲೇ ಖಾತೆಯಿಂದ ಹಣ ವರ್ಗಾವಣೆ| ಸೈಬರ್ ವಂಚಕರಿಂದ ಹುಷಾರಾಗಿರಿ…

ಸಮಗ್ರ ನ್ಯೂಸ್: ಸೈಬರ್‌ ವಂಚಕರು ಹಣ ದೋಚಲು ಹೊಸ ಹೊಸ ತಂತ್ರ ಹುಡುಕುತ್ತಿದ್ದು, ನಗರದಲ್ಲಿ ಪೋನ್‌ ಕರೆಯನ್ನು ಸ್ವೀಕರಿಸಿದ ಮಾತ್ರಕ್ಕೆ ವ್ಯಕ್ತಿಯೋರ್ವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ.

. Ad Widget . Ad Widget

ಉಪ್ಪಿನಂಗಡಿಯ ಮಾಧ್ಯಮ ಪ್ರತಿನಿಧಿಯೋರ್ವರಿಗೆ ಗುರುವಾರ ಮುಂಜಾನೆ ಪೋನ್‌ ಕರೆ ಬಂದಿದ್ದು, ಅದನ್ನು ಸ್ವೀಕರಿಸಿದ ಕೂಡಲೇ ಕರೆ ಕಡಿತಗೊಂಡಿತ್ತು. ಸ್ವಲ್ಪ ಹೊತ್ತಿನಲ್ಲೇ ಈ ದೂರವಾಣಿ ಸಂಖ್ಯೆ ಜೋಡಣೆ ಆಗಿದ್ದ ಬ್ಯಾಂಕಿನ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಬಗ್ಗೆ ಸಂದೇಶ ಬಂದಿತ್ತು. ಕೂಡಲೇ ಬ್ಯಾಂಕ್‌ಗೆ ದೂರು ಸಲ್ಲಿಸಿದಾಗ, 161 ರೂ. ವರ್ಗಾವಣೆಗೊಂಡಿದ್ದು, ಸಮರ್ಪಕ ಬ್ಯಾಲೆನ್ಸ್‌ ಇಲ್ಲದ ಕಾರಣ 14,839 ರೂ. ವರ್ಗಾವಣೆ ಆಗಿಲ್ಲ ಎಂದು ತಿಳಿದು ಬಂತು.

. Ad Widget . . Ad Widget . Ad Widget

ಇದೇ ವೇಳೆ ಅದೇ ಸಂಖ್ಯೆಯಿಂದ ಮತ್ತೊಂದು ಕರೆ ಬಂದಿದ್ದು, ಅದನ್ನು ಸ್ವೀಕರಿಸಲಿಲ್ಲ. ಕರೆ ಬಂದ ಪೋನ್‌ ನಂಬರ್‌ 68778220051 ಆಗಿದ್ದು, ಸೈಬರ್‌ ಕ್ರೈಂ ವಿಭಾಗದ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.

Leave a Comment

Your email address will not be published. Required fields are marked *