ಇಲ್ಲಿದೆ ಸಂಪೂರ್ಣ ಮಾಹಿತಿ
ಸಮಗ್ರ ನ್ಯೂಸ್: ಕ್ಯಾರಟ್ ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.ಬೀಟಾ ಕೆರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಇರುಳಿನ ದೃಷ್ಟಿ ಸಕ್ರಿಯಗೊಳ್ಳಲು ಅದು ಅತ್ಯಾವಶ್ಯಕ.ಕ್ಯಾರೆಟಿನಲ್ಲಿ ಥೈಮಿನ್, ನಿಯಾಸಿನ್ ಮತ್ತು ವಿಟಮಿನ್ ಬಿ6 ಇದೆ.ಕ್ಯಾರೆಟ್‌ನಲ್ಲಿರುವ ಡಯೆಟರಿ ಫೈಬರ್, ಸಕ್ಕರೆ ರಕ್ತ ಪ್ರವಾಹಕ್ಕೆ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಕ್ಯಾರೆಟ್‌ನಲ್ಲಿ ವಿಟಮಿನ್ ಸಿ, ಕೆ ಮತ್ತು ಮ್ಯಾಂಗನೀಸ್ ಹಾಗೂ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟಾಶಿಯಂ, ಕಾಪರ್, ಪ್ರಾಸ್ಪರಸ್‌ನಂತಹ ಮಿನರಲ್‌ಸ್‌ಗಳು ಇವೆÉ.ನಿರ್ದಿಷ್ಟ ವಿಧದ ಕ್ಯಾನ್ಸಗಳ ವಿರುದ್ಧ ಹೋರಾಡಲು ಸಹಾಯ ಮಾಡಬಲ್ಲ ಫಾಲ್‌ಕ್ಯಾರಿನೋಲ್ ಎಂಬ ಆ್ಯಂಟಿಆಕ್ಸಿಡೆಂಟ್ ಇದೆ.ಕ್ಯಾರೆಟ್ ವಿಟಮಿನ್ ಎ ಯ ಆಗರ.
ವಿಟಮಿನ್ ಎ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು. ನಿತ್ಯವೂ ಕ್ಯಾರೆಟ್ ತಿನ್ನುವುದರಿಂದ ಇರುಳುಗಣ್ಣು ಸೇರಿದಂ ದೃಷ್ಟಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ದೂರವಿರಬಹುದು ಮಾತ್ರವಲ್ಲ, ಅದು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.
ಆರೋಗ್ಯಕರ ಚರ್ಮ ಕ್ಯಾರೆಟ್‌ನಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮಕ್ಕೆ ಹೊಳಪನ್ನು ನೀಡಿದರೆ, ಅದರಲ್ಲಿರುವ ವಿಟಮಿನ್ ಎ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳು ಸೂರ್ಯನ ಕಿರಣಗಳಿಂದ ನಮ್ಮ ಚರ್ಮಕ್ಕಾಗುವ ಅಪಾಯಗಳಿಂದ ರಕ್ಷಿಸುತ್ತದೆ.
ಜೀರ್ಣಕ್ರೀಯೆಯನ್ನು ವೃದ್ಧಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ ಕ್ಯಾರೆಟ್‌ನಲ್ಲಿರುವ ಅಧಿಕ ಡಯೆಟರಿ ಫೈಬರ್, ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ, ಮಲಬದ್ಧತೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.ಕರುಳಿನ ಜಂತು ಹುಳಗಳಿಂದ ಪಾರಾಗಬಹುದು.ನೆನಪಿನಶಕ್ತಿ ಹೆಚ್ಚಿಸುತ್ತದೆ.
ಮೆದುಳಿನ ಉರಿಯೂತ ಮತ್ತು ವಯಸ್ಸಾದಂತೆ ಕ್ರಮೇಣ ಬರುವ ಮರೆವನ್ನು ತಡೆಯುತ್ತದೆ.ಕೆಟ್ಟ ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ನಿವಾರಿಸಲು ಹಾಗೂ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರ ಹಾಕಲು ಸಹಕರಿಸುತ್ತದೆ.ಹಲ್ಲು ಹುಳುಕಾಗಂತೆ ತಡೆಯುತ್ತವೆ .ಕ್ಯಾನ್ಸರ್, ಹೃದ್ರೋಗಗಳಿಂದ ರಕ್ಷಿಸಿಕೊಳ್ಳಬಹುದು.






