ವಿಚ್ಛೇದನ ಪಡೆಯದೆ ಎರಡನೇ ಮದುವೆ.. ಮದುವೆ ಮನೆಗೆ ನುಗ್ಗಿ ಮೊದಲನೇ ಹೆಂಡತಿ ತರಾಟೆ

ಸಮಗ್ರ ನ್ಯೂಸ್: ವಿಚ್ಛೇದನ ಪಡೆಯದೆ ಇನ್ನೊಂದು ಮದುವೆಗೆ ಮುಂದಾದ ಗಂಡನನ್ನು ಮೊದಲನೇ ಹೆಂಡತಿ ಹಾಗೂ ಆಕೆಯ ಅಕ್ಕ ಮದುವೆ ಮನೆಗೆ ನುಗ್ಗಿ ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಬಳ್ಳಾಪುರ ನಗರದ ಕ್ರೈಸ್ಟ್ ಚರ್ಚ್‌ನಲ್ಲಿ ನಡೆದಿದೆ.

. Ad Widget . Ad Widget . Ad Widget .

ನೋಹನ್‌ ಕಾಂತ್‌ ಎಂಬಾತ ಮದುವೆಯಾಗುತ್ತಿರುವ ಸಂದರ್ಭದಲ್ಲಿ, ಆತನ ಮೊದಲನೇ ಹೆಂಡತಿ ರಶ್ಮಿ ಹಾಗೂ ಅವರ ಅಕ್ಕ ರೋಸಿ ಎಂಬವರು ಮದುವೆ ಮನೆಗೆ ಆಗಮಿಸಿ ಗಲಾಟೆ ಎಬ್ಬಿಸಿದ್ದಾರೆ. ನೋಹನ್‌ ಕಾಂತ್‌ ತನ್ನಿಂದ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುತ್ತಿದ್ದಾನೆ ಎಂದು ರಶ್ಮಿ ಆರೋಪಿಸಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಚಿಕ್ಕಬಳ್ಳಾಪುರ ನಗರದ ನಿವಾಸಿ ನೋಹನ್ ಕಾಂತ್ ಹಾಗೂ ಬೆಂಗಳೂರು ಮೂಲದ ನಿವಾಸಿ ರಶ್ಮಿ 2018ರಲ್ಲಿ ವಿವಾಹವಾಗಿದ್ದರು. ವಿಚ್ಛೇದದ ಪಡೆದೇ ಎರಡನೇ ಮದುವೆಯಾಗುತ್ತಿರುವುದಾಗಿ ಗಂಡ ನೋಹನ್ ಕಾಂತ್ ಸ್ಪಷ್ಟನೆ ನೀಡಿದ್ದಾನೆ. ಈ ಹಂತದಲ್ಲಿ ಮದುವೆ ಮನೆಯಲ್ಲಿ ಪರಸ್ಪರರ ನಡುವೆ ಜೋರು ವಾಗ್ವಾದ ನಡೆದಿದ್ದು, ಸಂಬಂಧಿಕರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಎರಡೂ ಕಡೆಯವರ ಮನವೊಲಿಸುವ ಕಾರ್ಯ ನಡೆಸಿದ್ದಾರೆ.

Leave a Comment

Your email address will not be published. Required fields are marked *