ನಾಪತ್ತೆಯಾಗಿದ್ದ ‌ಧ.ಗ್ರಾ.ಯೋ ಸೇವಾಪ್ರತಿನಿಧಿ ಶವವಾಗಿ ಪತ್ತೆ| ಆರೋಪಿ ಬಂಧನ

ಸಮಗ್ರ ನ್ಯೂಸ್: ನಾಪತ್ತೆಯಾಗಿದ್ದ ಯುವತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ಆಗುಂಬೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಶಾಲ್ ಅವರ ಮಗಳಾದ ಪೂಜಾ ಎ.ಕೆ. (24) ಮೃತ ಯುವತಿ. ಕೊಲೆ ಆರೋಪಿ ಮಣಿಯನ್ನು ಬಂಧಿಸಲಾಗಿದೆ.

. Ad Widget . Ad Widget . Ad Widget .

ಪೂಜಾ ಜೂ.30 ರಂದು ನಾಪತ್ತೆಯಾಗಿದ್ದು, ಶವವಾಗಿ ಪತ್ತೆಯಾಗಿದ್ದಾರೆ. ಈ ಪ್ರಕರಣದ ತನಿಖೆ ಆಗುಂಬೆ ಪೊಲೀಸ್ ಠಾಣೆ ಪಿ ಎಸ್ ಐ ರಂಗನಾಥ್ ಅಂತರಗಟ್ಟಿ ನೇತೃತ್ವದಲ್ಲಿ ನಡೆದಿದ್ದು, ನಾಲೂರು ಸಮೀಪದ ಮಣಿ ಎಂಬ ವ್ಯಕ್ತಿ ಕತ್ತು ಹಿಸುಕಿ ಕೊಲೆ ಮಾಡಿ ನಾಲೂರು ಸಮೀಪ ಹೊಂಡದಲ್ಲಿ ಹಾಕಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಶನಿವಾರ ರಾತ್ರಿ 11 ರ ವೇಳೆ ಆರೋಪಿ ಮಣಿಯನ್ನು ಘಟನೆ ನಡೆದ ಸ್ಥಳಕ್ಕೆ ಕರೆದು ಸ್ಥಳ ಮಹಜರು ಮಾಡಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತದೆ.

Leave a Comment

Your email address will not be published. Required fields are marked *