ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್‌/ ಸ್ಥಾನ ಪಡೆದುಕೊಂಡ ಐಐಟಿ ಬಾಂಬೆ’ ಮತ್ತು ‘ಐಐಟಿ ದೆಹಲಿ’

ಸಮಗ್ರ ನ್ಯೂಸ್: ಕ್ವಾಕರಾಲಿ ಸೈಮಂಡ್ಸ್‌ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ‘ಐಐಟಿ ಬಾಂಬೆ’ ಮತ್ತು ‘ಐಐಟಿ ದೆಹಲಿ’ ಟಾಪ್‌ 150ರೊಳಗೆ ಸ್ಥಾನ ಪಡೆದುಕೊಂಡಿದೆ. ಇದರ ಜೊತೆಗೆ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) 211ನೇ ಸ್ಥಾನ ಪಡೆದುಕೊಂಡಿದೆ.

. Ad Widget . Ad Widget

ಪಟ್ಟಿಯಲ್ಲಿ ಕಳೆದ ವರ್ಷ 149ನೇ ಸ್ಥಾನದಲ್ಲಿದ್ದ ಐಐಟಿ ಬಾಂಬೆ ಈ ವರ್ಷ 31 ಸ್ಥಾನ ಏರಿಕೆ ಕಂಡು 118ನೇ ಸ್ಥಾನ ತಲುಪಿದೆ. ಇನ್ನೊಂದೆಡೆ ಐಐಟಿ ದೆಹಲಿ 47 ಸ್ಥಾನ ಏರಿಕೆ ಕಾಣುವ ಮೂಲಕ 150ನೇ ಸ್ಥಾನ ಪಡೆದಿದೆ. ಕಳೆದ ವರ್ಷ 225ನೇ ಸ್ಥಾನದಲ್ಲಿದ್ದ ಬೆಂಗಳೂರಿನ ಐಐಎಸ್‌ಸಿ ಈ ಬಾರಿ 211ನೇ ಸ್ಥಾನಕ್ಕೆ ಏರಿದೆ. ಉಳಿದಂತೆ ಐಐಟಿ ಖರಗ್‌ಪುರ 222, ಐಐಟಿ ಮದ್ರಾಸ್‌ 227, ಐಐಟಿ ಕಾನ್ಪುರ 263, ದೆಹಲಿ ವಿಶ್ವವಿದ್ಯಾಲಯ 328 ಮತ್ತು ಅಣ್ಣಾ ವಿಶ್ವವಿದ್ಯಾಲಯ 383ನೇ ಸ್ಥಾನ ಪಡೆದಿವೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *