Ad Widget

ವಾರಾಣಸಿಯಲ್ಲಿ ಮೇ 14ರಂದು ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯ ಕೊನೆಯ ಹಂತವಾದ ಜೂ.1ರಂದು ಮತದಾನ ನಡೆಯಲಿರುವ ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಮೇ 14ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಸತತ 3ನೇ ಬಾರಿಗೆ ಅವರು ಕಾಶಿಯಿಂದ ಸ್ಪರ್ಧಿಸುತ್ತಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget

ನಾಮಪತ್ರಕ್ಕೂ ಮುನ್ನ ಮೇ 13 ರಂದು ವಾರಣಾಸಿಯಲ್ಲಿ ಭವ್ಯವಾದ ರೋಡ್‍ಶೋ ಆಯೋಜಿಸಲಾಗಿದೆ. ಅಲ್ಲಿ ಪ್ರಧಾನಿ ಮೋದಿ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ. ಇನ್ನು ಮರುದಿನ 14ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ಅವರು ಕಾಶಿ ವಿಶ್ವನಾಥ ಮಂದಿರ ಹಾಗೂ ಕಾಲಭೈರವ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ ಎಂದು ಮೂಲಗಳು ಹೇಳಿವೆ.

Ad Widget . Ad Widget .

2014 ಹಾಗೂ 2019ರಲ್ಲಿ ಸತತವಾಗಿ ಮೋದಿ ವಾರಾಣಸಿಯಲ್ಲಿ ಗೆದ್ದಿದ್ದರು.

Leave a Comment

Your email address will not be published. Required fields are marked *