Ad Widget

ಚಾಮರಾಜನಗರ: ಇಂಡಿಗನತ್ತದಲ್ಲಿ ಮತ ಬಹಿಷ್ಕಾರ| ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆದು ಮತಗಟ್ಟೆ ದ್ವಂಸ

ಸಮಗ್ರ ನ್ಯೂಸ್ : ಮತ ಬಹಿಷ್ಕಾರ ಹಾಕಿದ್ದ ಮತದಾರರನ್ನು ಮನವೊಲಿಸಲು ಯತ್ನಿಸಿದ್ದ ಪೊಲೀಸ್ ಇನ್ಸ್ ಪೆಕ್ಟರ್, ತಹಸೀಲ್ದಾರ್ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮಾತಿಗೆ ಕೆರಳಿದ ಗುಂಪೊಂದು ಮಾತಿನ ಚಕಮಕಿಯಿಂದಾಗಿ ಮತಗಟ್ಟೆ ದ್ವಂಸ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಇರುವ ಹಿನ್ನಲೆಯಲ್ಲಿ ಮತ ಬಹಿಷ್ಕಾರಕ್ಕೆ ಮುಂದಾಗಿದ್ದರು.

Ad Widget . Ad Widget . Ad Widget .

ಇದನ್ನು ಅರಿತ ತಹಸೀಲ್ದಾರ್ ಗುರುಪ್ರಸಾದ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ರವರು ಮತದಾರರನ್ನು ಮನವೊಲಿಸಲು ಮುಂದಾದಾಗ ಮತ ಚಲಾವಣೆಗೆ ಬಂದ ಮತದಾರರನ್ನು ಕಂಡು ಕೆರಳಿದ ಮತ್ತೊಂದು ಗುಂಪಿನವರು ಮಾತಿನ‌ ಚಕಮಕಿ ನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮತಗಟ್ಟೆ ಗೆ ನುಗ್ಗಿದ ಪ್ರತಿಭಟನಾಕಾರರು ವಿದ್ಯುನ್ಮಾನ ಯಂತ್ರ ನಾಶ ಪಡಿಸಿ ಮತಗಟ್ಟೆ ದ್ವಂಸ ಮಾಡಿದರು.

ಈ ವೇಳೆ ಮಹಿಳೆಯರೊಬ್ಬರ ತಲೆಗೆ ಪೆಟ್ಟಾಗಿದೆ ಪ್ರಸ್ತುತ ಇಂಡಿಗನತ್ತ ಗ್ರಾಮದ ಮತಗಟ್ಟೆ ಯಲ್ಲಿ ಮತದಾನ ಸ್ಥಗಿತಗೊಂಡಿದೆ.

Leave a Comment

Your email address will not be published. Required fields are marked *