Ad Widget

ಬಿಜೆಪಿಗೆ ಸೇರಿದ 2 ಕೋಟಿ ಹಣ ಜಫ್ತಿ|ಬಿಜೆಪಿ ನಾಯಕರಿಗೆ ಹಿಂದಿರುಗಿಸಲಾಗಿದೆ ಎಂಬ ಊಹಾ ಪೋಹಗಳಿಗೆ ಮುನೀಶ್ ಮೌದ್ಗಿಲ್ ಸ್ಪಷ್ಟನೆ

ಸಮಗ್ರ ನ್ಯೂಸ್: ನಿನ್ನೆ ಬಿಜೆಪಿಗೆ ಸೇರಿದ ಸುಮಾರು ಎರಡು ಕೋಟಿಯಷ್ಟು ನಗದನ್ನು ಕಾರೊಂದರಲ್ಲಿ ಸಾಗಿಸುತ್ತಿದ್ದ ವೇಳೆ ಬೆಂಗಳೂರಿನ ಬಿನ್ನಿಮಿಲ್ ಹತ್ತಿರದ ಎಪಿಎಂಸಿ ಬಳಿ ಇರುವ ಚೆಕ್ ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget

ಬಳಿಕ ಈ ಹಣವನ್ನು ಪುನಃ ಬಿಜೆಪಿ ನಾಯಕರಿಗೆ ಹಿಂದಿರುಗಿಸಲಾಗಿದೆ ಎಂಬ ಊಹಾಪೋಹಗಳು ಹರಿಡಿತ್ತು. ಈ ಕುರಿತು ಇದೀಗ ಬೆಂಗಳೂರು ನಗರ ಜಿಲ್ಲೆ ಎಮ್​ಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಸ್ಪಷ್ಟನೆ ನೀಡಿದ್ದಾರೆ.

Ad Widget . Ad Widget .

ಪ್ರಾಥಮಿಕ ತನಿಖೆಯಲ್ಲಿ ಈ ಹಣವು ರಾಜ್ಯ ಬಿಜೆಪಿ ಪಕ್ಷದ ಕಚೇರಿಗೆ ಸಂಬಂಧಿಸಿದ್ದು ಎಂದು ತಿಳಿದು ಬಂದ ಹಿನ್ನಲೆ ಆದಾಯ ತೆರಿಗೆ ಇಲಾಖೆಯು ಬಿಜೆಪಿಯ ಪದಾಧಿಕಾರಿಗಳನ್ನು ಕರೆಸಿ ತನಿಖೆ ನಡೆಸಿದೆ. ಈ ವೇಳೆ ಹಣದ ಮೂಲವು ಸರಿಯಾಗಿರುವುದರಿಂದ ಐಟಿ ಕಾನೂನಿನ ಅಡಿಯಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ತೀರ್ಮಾನಿಸಿದೆ. ಆದರೆ, ಇಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ರಾಜಕೀಯ ಚಟುವಟಿಕೆಗಳಿಗಾಗಿ ನೀಡಿದ 10 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಚೆಕ್ ಅಥವಾ ಆನ್‌ಲೈನ್ ಮೂಲಕ ಮಾಡಲಾಗುತ್ತದೆ.

ರಾಜ್ಯ ಬಿಜೆಪಿ ಪಕ್ಷದ ಕಚೇರಿಗೆ ಸಂಬಂಧಿಸಿದ್ದು ಎಂದು ತಿಳಿದು ಬಂದ ಹಿನ್ನಲೆ ಆದಾಯ ತೆರಿಗೆ ಇಲಾಖೆಯು ಬಿಜೆಪಿಯ ಪದಾಧಿಕಾರಿಗಳನ್ನು ಕರೆಸಿ ತನಿಖೆ ನಡೆಸಿದೆ. ಈ ವೇಳೆ ಹಣದ ಮೂಲವು ಸರಿಯಾಗಿರುವುದರಿಂದ ಐಟಿ ಕಾನೂನಿನ ಅಡಿಯಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ತೀರ್ಮಾನಿಸಿದೆ

Leave a Comment

Your email address will not be published. Required fields are marked *