March 2024

ಬಂಟ್ವಾಳ: ಕಾನೂನು ಬಾಹಿರ ಆಟೋ ಚಾಲನೆ- ಚಾಲಕನಿಂದ ಆಕ್ರೋಶ

ಸಮಗ್ರ ನ್ಯೂಸ್ : ಕಾನೂನು ಬಾಹಿರವಾಗಿ ಆಟೋರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೊಲೀಸರು ತಡೆದು ದಂಡ ಹಾಕಿದ್ದಾರೆ. ಈ ಕಾರಣಕ್ಕೆ ಆವೇಶಕ್ಕೊಳಗಾದ ಚಾಲಕ ಟ್ರಾಫಿಕ್ ಎಸ್.ಐ.ಹಾಗೂ ಸರಕಾರಿ ವಾಹನಕ್ಕೆ ಮತ್ತು ಆಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ಬಂಟ್ವಾಳ ಬಿಸಿರೋಡಿನ ಕೈಕಂಬ ಎಂಬಲ್ಲಿ ಸೋಮವಾರ ನಡೆದಿದೆ. ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಪ್ರಕರಣದ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿರುತ್ತಾನೆ. ಟ್ರಾಫಿಕ್ ಎಸ್‍ಐ. ಸುತೇಶ್ ಅವರು ಕೈಕಂಬದಲ್ಲಿ ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ವೇಳೆ, ಯೂನಿಫಾರ್ಮ್ […]

ಬಂಟ್ವಾಳ: ಕಾನೂನು ಬಾಹಿರ ಆಟೋ ಚಾಲನೆ- ಚಾಲಕನಿಂದ ಆಕ್ರೋಶ Read More »

ಬಂಟ್ವಾಳ: ಹೃದಯಾಘಾತದಿಂದ ಯುವಕ ಮೃತ್ಯು

ಸಮಗ್ರ ನ್ಯೂಸ್ : ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಾ.11 ರಂದು ಸೋಮವಾರ ಬೆಳಿಗ್ಗೆ ನಡೆದಿದೆ. ಮೆಲ್ಕಾರ್ ನಿವಾಸಿ ಉದಯ (36) ಮೃತಪಟ್ಟ ಯುವಕ. ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಗ್ರಂಥಪಾಲಕನಾಗಿ ಕೆಲಸ ಮಾಡುತ್ತಿದ್ದ ಉದಯೋನ್ಮುಖ ಯುವಕ ಉದಯ ಅವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜನಸ್ನೇಹಿಯಾಗಿ, ಜನಸೇವಕನಾಗಿದ್ದ ಉದಯ ಅವರು ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು. ಇಂದು ಬೆಳಿಗ್ಗೆ ಉದಯ ಎದ್ದಿಲ್ಲಾ ಎಂದು ಮನೆಯವರು ಎಚ್ಚರಿಸಿದಾಗ ಯಾವುದೇ ಪ್ರತಿಕ್ರಿಯೆ ಇಲ್ಲದಿರುವುದು ಗಮನಿಸಿ,

ಬಂಟ್ವಾಳ: ಹೃದಯಾಘಾತದಿಂದ ಯುವಕ ಮೃತ್ಯು Read More »

ದೇಶದಲ್ಲಿ ಪೌರತ್ವ ಕಾಯ್ದೆ ಅನುಷ್ಟಾನ ಅಧಿಸೂಚನೆ ಪ್ರಕಟ| ಮಸೂದೆ ಅಂಗೀಕಾರದ 4 ವರ್ಷಗಳ ಬಳಿಕ ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ

ಸಮಗ್ರ ನ್ಯೂಸ್: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಜಾರಿಗೆ ತರಲು ಕೇಂದ್ರ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಷ್ಠಾನವನ್ನು ಘೋಷಿಸಿದೆ. 2024ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಈ ಕ್ರಮ ಕೈಗೊಳ್ಳಲಾಗಿದೆ. 2019ರ ಲೋಕಸಭಾ ಚುನಾವಣೆಯ ವೇಳೆ CAA ಜಾರಿಗೆ ತರುವುದು ಬಿಜೆಪಿಯ ಪ್ರಣಾಳಿಕೆಯ ಭಾಗವಾಗಿತ್ತು. ಈಗ 2024ರ ಚುನಾವಣೆಯ ಹೊಸ್ತಿಲಲ್ಲಿರುವಾಗ ಕಾಯ್ದೆ ಜಾರಿಗೆ ಬಂದಿದೆ. ಮಸೂದೆ ಸದನದಲ್ಲಿ ಅಂಗೀಕಾರವಾದ 4 ವರ್ಷಗಳ ಬಳಿಕ ಕೇಂದ್ರ

ದೇಶದಲ್ಲಿ ಪೌರತ್ವ ಕಾಯ್ದೆ ಅನುಷ್ಟಾನ ಅಧಿಸೂಚನೆ ಪ್ರಕಟ| ಮಸೂದೆ ಅಂಗೀಕಾರದ 4 ವರ್ಷಗಳ ಬಳಿಕ ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ Read More »

ಬೆಳ್ತಂಗಡಿ: ಪೊಲೀಸರ ಮೇಲೆ ಹಲ್ಲೆಗೆ ಯತ್ನ- ಐವರ ಬಂಧನ

ಸಮಗ್ರ ನ್ಯೂಸ್ : ಶಿವರಾತ್ರಿ ಹೆಸರಿನಲ್ಲಿ ಯುವಕರ ತಂಡ ಸಾರ್ವಜನಿಕ ರಸ್ತೆಯಲ್ಲಿ ಗಾಜು ಪುಡಿ ಮಾಡಿ ಪುಂಡಾಟಿಕೆ ಮೆರೆದಿದ್ದು, ಅದನ್ನು ತಡೆದ ಪೊಲೀಸರ ಮೇಲೆಯೇ ಕೈ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಐವರನ್ನು ವೇಣೂರು ಪೊಲೀಸರು ಬಂಧಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸ್ಥಳೀಯರಾದ ಮಹೇಶ್ (28), ಸುರೇಶ್ (33), ಗೌತಂ (21), ಅರುಣ್ (29) ಹಾಗೂ ಸುರೇಶ್ (28) ಬಂಧಿತರು. ಶಿವರಾತ್ರಿಯಂದು ಮಧ್ಯರಾತ್ರಿ ಎಎಸ್‍ಐ ರಾಮಯ್ಯ ಅವರು ಸಿಬ್ಬಂದಿ ಶಾಂತ ಕುಮಾರ್ ಜತೆ ಇಲಾಖಾ ವಾಹನ ದಲ್ಲಿ

ಬೆಳ್ತಂಗಡಿ: ಪೊಲೀಸರ ಮೇಲೆ ಹಲ್ಲೆಗೆ ಯತ್ನ- ಐವರ ಬಂಧನ Read More »

ಚಂದ್ರದರ್ಶನ ಹಿನ್ನಲೆ| ನಾಳೆಯಿಂದ ಪವಿತ್ರ ರಂಝಾನ್ ಉಪವಾಸ ಆರಂಭ

ಸಮಗ್ರ ನ್ಯೂಸ್ :ರಾಜ್ಯಾದ್ಯಂತ ಮಂಗಳವಾರದಿಂದ ರಮಝಾನ್ ಉಪವಾಸ ಆರಂಭವಾಗಲಿದೆ. ಪವಿತ್ರ ರಮಝಾನ್ ಮಾಸದ ಚಂದ್ರ ದರ್ಶನವಾಗಿರುವುದರಿಂದ ಮಂಗಳವಾರದಿಂದ ಉಪವಾಸ ಪ್ರಾರಂಭವಾಗಲಿದೆ. ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ರಮಝಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್‌ ಅಲ್ ಅಝ್ಹರಿ ಉಸ್ತಾದರವರ ನಿರ್ದೇಶನದಂತೆ ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಜುಮಾ ಮಸೀದಿಯ ಕೋಶಾಧಿಕಾರಿಯವರಾದ ಹಾಜಿ ಎಸ್.ಎಂ. ರಶೀದ್ ಪ್ರಕಟಣನೆಯಲ್ಲಿ ತಿಳಿಸಿರುತ್ತಾರೆ. ಕೇರಳದಲ್ಲಿ ರಮಝಾನ್

ಚಂದ್ರದರ್ಶನ ಹಿನ್ನಲೆ| ನಾಳೆಯಿಂದ ಪವಿತ್ರ ರಂಝಾನ್ ಉಪವಾಸ ಆರಂಭ Read More »

ಪುತ್ತೂರು :ಮನೆಯ ಆವರಣಗೋಡೆ ಕೆಡವಿ ಮಹಿಳೆಗೆ ಹಲ್ಲೆ-ದೂರು ದಾಖಲು

ಸಮಗ್ರ ನ್ಯೂಸ್: ಮನೆಯ ಕೌಂಪೌಂಡನ್ನು ಜೆಸಿಬಿ ಯಂತ್ರದ ಮೂಲಕ ಕೆಡವಿದ್ದಲ್ಲದೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುವುದಾಗಿ ಕಡಬ ಕೊಂಬಾರು ಗ್ರಾಮದ ಗಂಗಮ್ಮ(72) ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾ.10ರಂದು ನೆರೆಕೆರೆಯ ಸಂಬಂಧಿಯೂ ಆಗಿರುವ ಶಶಿಧರ ಎಂಬಾತ ಜೆಸಿಬಿ ಯಂತ್ರದ ಮೂಲಕ ಮನೆಯ ಆವರಣಗೋಡೆಯನ್ನು ಕೆಡವಿದ್ದು, ಇದನ್ನು ಪ್ರಶ್ನಿಸಿದಾಗ ಆತ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ್ದು, ಗಾಯಗೊಂಡ ಗಂಗಮ್ಮ ಅವರನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಗಂಗಮ್ಮ ನೀಡಿದ ದೂರಿನನ್ವಯ ಕಡಬ ಪೊಲೀಸರು

ಪುತ್ತೂರು :ಮನೆಯ ಆವರಣಗೋಡೆ ಕೆಡವಿ ಮಹಿಳೆಗೆ ಹಲ್ಲೆ-ದೂರು ದಾಖಲು Read More »

ಪುತ್ತೂರು: ಆಟೋಚಾಲಕನ ಮೇಲೆ ಹಲ್ಲೆ, ಜೀವಬೆದರಿಕೆ-ದೂರು ದಾಖಲು

ಸಮಗ್ರ ನ್ಯೂಸ್ : ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದ ದಯಾನಂದ, ಅಚ್ಚುತ ಹಾಗೂ ಇಬ್ಬರು ಅಪರಿಚಿತರು ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿರುವುದಾಗಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಬೆಳಗಿನ ಜಾವ, ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕರೊಬ್ಬರಿಗೆ ಡ್ರಾಪ್ ಕೊಡಲು ಪುತ್ತೂರು ತಾಲೂಕು ಪಡವನ್ನೂರು ಗ್ರಾಮದ ಕೆಳಗಿನ ಕನ್ನಡ್ಕ ಬಸ್ ನಿಲ್ದಾಣ ಬಲಿ ಬಂದಿದ್ದಾಗ ದಯಾನಂದ, ಅಚ್ಚುತ ಹಾಗೂ ಮತ್ತಿಬ್ಬರು ಅಪರಿಚಿತರು ಆಟೋ ಬಳಿ ಬಂದು, ಈ ಹಿಂದೆ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ತಕರಾರು ತೆಗೆದು

ಪುತ್ತೂರು: ಆಟೋಚಾಲಕನ ಮೇಲೆ ಹಲ್ಲೆ, ಜೀವಬೆದರಿಕೆ-ದೂರು ದಾಖಲು Read More »

ಮಂಗಳೂರು: ಕಾಂಗ್ರೆಸ್‍ನ ರಕ್ಷಿತ್ ಶಿವರಾಂ ಬೆಂಬಲಿಸುವಂತೆ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಕರೆ

ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಶುರು ಮಾಡಿದ್ದು, ಕರ್ನಾಟಕದ ಚುಕ್ಕಾಣಿ ಹಿಡಿಯಬೇಕೆಂದು ಬಿಜೆಪಿ ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಇಂತಹ ಸಮಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಕಾಂಗ್ರೆಸ್‍ನ ರಕ್ಷಿತ್ ಶಿವರಾಂ ಅವರನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ. ಬೆಳ್ತಂಗಡಿ ವಿಧಾನಸಭೆಯ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಸೋಲಿನ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅಸಮಾಧಾನ ಹೊರ ಹಾಕಿದ್ದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮಂಗಳೂರು: ಕಾಂಗ್ರೆಸ್‍ನ ರಕ್ಷಿತ್ ಶಿವರಾಂ ಬೆಂಬಲಿಸುವಂತೆ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಕರೆ Read More »

ಮಂಗಳೂರಿನಲ್ಲಿ ಅಮಾನವೀಯ ಘಟನೆ: ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್​​ನಲ್ಲಿ ಹೊಡೆದ ಸೊಸೆ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ, ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್​​ನಲ್ಲಿ ಸೊಸೆ ಹೊಡೆದಿರುವಂತಹ ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ಮಾರ್ಚ್ 9 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕುಲಶೇಖರ ನಿವಾಸಿ ಪದ್ಮನಾಭ ಸುವರ್ಣ (76) ಎಂಬುವವರು ಹಲ್ಲೆಗೊಳಗಾದವರು, ಇವರ ಮಗಪ್ರೀತಂ. ಇವರು ವಿದೇಶದಲ್ಲಿ ಕೆಲಸದಲ್ಲಿದ್ದಾರೆ, ಆದರೆ ಮನೆಯಲ್ಲಿ ಸಿಸಿಟಿವಿಯನ್ನು ತನ್ನ ಮೊಬೈಲಿಗೆ ಕನೆಕ್ಟ್‌ ಮಾಡಿದ್ದರು. ತನ್ನ ಪತ್ನಿ ಉಮಾಶಂಕರಿ ಅವರು ಎರಡು ದಿನಗಳ ಹಿಂದೆ ವಾಕಿಂಗ್‌ ಸ್ಟಿಕ್‌ನಲ್ಲಿ ತಂದೆ ಮೇಲೆ ಹಲ್ಲೆ

ಮಂಗಳೂರಿನಲ್ಲಿ ಅಮಾನವೀಯ ಘಟನೆ: ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್​​ನಲ್ಲಿ ಹೊಡೆದ ಸೊಸೆ Read More »

ಕಡಬ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ಆಯ್ಕೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಜಾರಿ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳು ಇಂದು ಜನಸಾಮಾನ್ಯರನ್ನು ಮುಟ್ಟಿದೆ. ಈ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ರಚಿಸಿದೆ. ಕಡಬ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ, ಕಾಂಗ್ರೆಸ್ ನಾಯಕರಾದ ಸುಧೀರ್ ಕುಮಾರ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಸುಧೀರ್ ಕುಮಾರ್ ಬಿಳಿನೆಲೆ ಗ್ರಾಮದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾಗಿ, ಸುಳ್ಯ ವಿಧಾನಸಭೆ

ಕಡಬ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ಆಯ್ಕೆ Read More »