ಉಡುಪಿ: ಬಾಡಿಗೆ ಹಣ ಪಾವತಿಸುವಂತೆ ಜೀವ ಬೆದರಿಕೆ|ಯುವಕ ಆತ್ಮಹತ್ಯೆ
ಸಮಗ್ರ ನ್ಯೂಸ್ : ಜೀವ ಬೆದರಿಕೆಯಿಂದ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಳಂಬೆಯ ಸುರೇಶ್ ಅವರು ಪ್ರಶಾಂತ್ ಅವರಿಗೆ ಅಂಗಡಿಯನ್ನು ಬಾಡಿಗೆಗೆ ನೀಡಿದ್ದರು. ಆದರೆ ಅವರು ಅಂಗಡಿಯ ಬಾಡಿಗೆ ಹಣವನ್ನು ಪಾವತಿಸಿರಲಿಲ್ಲ. ಡಿ. 4ರಂದು ರಾತ್ರಿ ಪ್ರಶಾಂತ್ ಅವರು ಸುರೇಶ್ ಅವರಿಗೆ ಕರೆಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದೇ ಕಾರಣದಿಂದ ಆಘಾತಕ್ಕೊಳಗಾಗಿ ಸುರೇಶ್ ಅವರು ಡಿ. 8ರಂದು ಸಾವನ್ನಪ್ಪಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಬಾಡಿಗೆ ಹಣ ಪಾವತಿಸುವಂತೆ ಜೀವ ಬೆದರಿಕೆ|ಯುವಕ ಆತ್ಮಹತ್ಯೆ Read More »










