March 2024

ಮಂಗಳೂರು: ಹಿರಿಯ, ವಿಕಲಚೇತನ ಮತದಾರರು ಹಕ್ಕು ಚಲಾಯಿಸಲು ಮತಗಟ್ಟೆಗಳಲ್ಲಿಯೇ ಅಗತ್ಯ ಸೌಲಭ್ಯ

ಸಮಗ್ರ ನ್ಯೂಸ್:‌ ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಗಳಲ್ಲಿ ಅರ್ಹ ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಪ್ರತಿಬಾರಿ ವಿವಿಧ ರೀತಿಯ ಸೌಕರ್ಯ ಕಲ್ಪಿಸಿಕೊಡುವ ಚುನಾವಣಾ ಆಯೋಗವು ಈ ಬಾರಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ಶೇ.40ಕ್ಕೂ ಹೆಚ್ಚು ಅಂಗವಿಕಲತೆ ಹೊಂದಿರುವ ವಿಕಲಚೇತನರಿಗೆ ಅಂಚೆ ಮತದ ಮೂಲಕ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಕಲ್ಪಿಸಿಕೊಟ್ಟಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಮತದಾರರ ಪಟ್ಟಿಯಲ್ಲಿ ಗುರುತಿಸಲಾದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕ ಮತದಾರರು ಹಾಗೂ ಶೇ.40ಕ್ಕೂ […]

ಮಂಗಳೂರು: ಹಿರಿಯ, ವಿಕಲಚೇತನ ಮತದಾರರು ಹಕ್ಕು ಚಲಾಯಿಸಲು ಮತಗಟ್ಟೆಗಳಲ್ಲಿಯೇ ಅಗತ್ಯ ಸೌಲಭ್ಯ Read More »

ಮಂಗಳೂರು: ಡಿವೈಡರ್ ಕಾರು ಢಿಕ್ಕಿ| ಬಿಜೆಪಿ ನಾಯಕಿಯ ಮೊಮ್ಮಗ ಸಾವು

ಸಮಗ್ರ ನ್ಯೂಸ್‌ : ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂತೂರಿನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಮೃತರನ್ನು ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಮೊಮ್ಮಗ ಶಮಿತ್ ಶೆಟ್ಟಿ(29) ಯಾನೆ ಬಂಟಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಮಿತ್ ಶೆಟ್ಟಿಯವರ ಸ್ನೇಹಿತನ ಮನೆಯಲ್ಲಿ ದೈವದ ಕೋಲದಲ್ಲಿ ಭಾಗವಹಿಸಿದ ಬಳಿಕ ತೊಕ್ಕೊಟ್ಟಿನಲ್ಲಿದ್ದ ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆಕಾರು ಢಿಕ್ಕಿಯಾದ ರಭಸಕ್ಕೆ

ಮಂಗಳೂರು: ಡಿವೈಡರ್ ಕಾರು ಢಿಕ್ಕಿ| ಬಿಜೆಪಿ ನಾಯಕಿಯ ಮೊಮ್ಮಗ ಸಾವು Read More »

ಮಾಸ್ಕೋದಲ್ಲಿ ಗುಂಡಿನ ದಾಳಿ/ 40ಕ್ಕೂ ಅಧಿಕ ಜನರ ಸಾವು

ಸಮಗ್ರ ನ್ಯೂಸ್: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಮೂರು ಜನ ಬಂದೂಕುಧಾರಿಗಳು ಸಭೆ-ಸಮಾರಂಭಗಳು ನಡೆಯುವ ಸಿಟಿ ಕ್ರಾಕಸ್ ಹಾಲ್‍ಗೆ ನುಗ್ಗಿ ಅಂಧಾದುಂಧಿ ದಾಳಿ ನಡೆಸಿ ಬೆಂಕಿ ಹಚ್ಚಿದ್ದು, ಸುಮಾರು 40ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ಭೀಕರ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಹಾಲ್‍ನಲ್ಲಿ ಸಮಾರಂಭವೊಂದು ನಡೆಯುತ್ತಿದ್ದಾಗ ಸುಮಾರು 3 ಬಂದೂಕುಧಾರಿಗಳು ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿದ್ದು ಅಲ್ಲದೇ ಹಾಲ್‍ಗೆ ಬೆಂಕಿ ಹಚ್ಚಿದ್ದಾರೆ. ಆಗ ಭಯಗ್ರಸ್ತ ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಈ ವೇಳೆ ಅನೇಕರು ಅಸುನೀಗಿ ಹಲವರು ಗಾಯಗೊಂಡಿದ್ದಾರೆ

ಮಾಸ್ಕೋದಲ್ಲಿ ಗುಂಡಿನ ದಾಳಿ/ 40ಕ್ಕೂ ಅಧಿಕ ಜನರ ಸಾವು Read More »

ಭಾರತ-ಭೂತಾನ್ ರೈಲು ಸೇವೆ/ ಒಪ್ಪಂದಕ್ಕೆ ಸಹಿ ಹಾಕಿದ ಉಭಯ ಪ್ರಧಾನಿಗಳು

ಸಮಗ್ರ ನ್ಯೂಸ್: ಭೂತಾನ್ ಮತ್ತು ಭಾರತದ ನಡುವೆ ಇಂಧನ, ವ್ಯಾಪಾರ, ಡಿಜಿಟಲ್ ಸಂಪರ್ಕ, ಬಾಹ್ಯಾಕಾಶ ಮತ್ತು ಕೃಷಿ ಕ್ಷೇತ್ರಗಳ ನಡುವಿನ ವಿನಿಯಮದ ಒಪ್ಪಂದಕ್ಕೆ ಉಭಯ ದೇಶಗಳ ಪ್ರಧಾನಿಗಳು ಸಹಿ ಹಾಕಿದ್ದಾರೆ. ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಭೂತಾನ್ ಮತ್ತು ಭಾರತದ ನಡುವೆ ರೈಲು ಸಂಪರ್ಕ ಸ್ಥಾಪಿಸುವ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದ್ದು, ಈ ಮೂಲಕ ನೆರೆಯ ದೇಶಗಳ ನಡುವೆ ರೈಲು ಸಂಚಾರ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಬೆ ಅವರ ಉಪಸ್ಥಿತಿಯಲ್ಲಿ

ಭಾರತ-ಭೂತಾನ್ ರೈಲು ಸೇವೆ/ ಒಪ್ಪಂದಕ್ಕೆ ಸಹಿ ಹಾಕಿದ ಉಭಯ ಪ್ರಧಾನಿಗಳು Read More »

17 ಶಾಲೆಗಳ ಮಾನ್ಯತೆ ರದ್ದು/ ಕಠಿಣ ಕ್ರಮ ಕೈಗೊಂಡ ಸಿಬಿಎಸ್‍ಇ

ಸಮಗ್ರ ನ್ಯೂಸ್: ಸಂಯೋಜಿತವಲ್ಲದ ಶಾಲೆಗಳು, ನಕಲಿ ವಿದ್ಯಾರ್ಥಿಗಳು, ಅನರ್ಹ ಅಭ್ಯರ್ಥಿಗಳನ್ನು ಪ್ರಸ್ತುತ ಪಡಿಸುತ್ತಿವೆ ಮತ್ತು ದಾಖಲೆಗಳನ್ನ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಉದ್ದೇಶದಿಂದ 17 ಶಾಲೆಗಳ ಮಾನ್ಯತೆಯನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ರದ್ದುಗೊಳಿಸಿದೆ. ಇದರ ಜೊತೆಗೆ ಇನ್ನು 3 ಶಾಲೆಗಳನ್ನು ಕೆಳದರ್ಜೆಗೆ ಇಳಿಸಿದೆ. ‘ಈ ಶಾಲೆಗಳು ನಕಲಿ ವಿದ್ಯಾರ್ಥಿಗಳು, ಅನರ್ಹ ಅಭ್ಯರ್ಥಿಗಳನ್ನು ಪ್ರಸ್ತುತಪಡಿಸುವ ಮತ್ತು ದಾಖಲೆಗಳನ್ನ ಸರಿಯಾಗಿ ನಿರ್ವಹಿಸದ ವಿವಿಧ ದುಷ್ಕೃತ್ಯಗಳನ್ನು ಮಾಡುತ್ತಿರುವುದನ್ನು ಕಂಡುಕೊಂಡ ನಂತರ ಸಿಬಿಎಸ್‍ಇ 17 ಶಾಲೆಗಳನ್ನು ಅಮಾನತುಗೊಳಿಸಿದೆ, ಇನ್ನು 3 ಶಾಲೆಗಳನ್ನು

17 ಶಾಲೆಗಳ ಮಾನ್ಯತೆ ರದ್ದು/ ಕಠಿಣ ಕ್ರಮ ಕೈಗೊಂಡ ಸಿಬಿಎಸ್‍ಇ Read More »

ಕೆರೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಮೂರು ಅಪರಿಚಿತ ಶವಗಳು ಪತ್ತೆ

ಸಮಗ್ರ ನ್ಯೂಸ್: ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಮೂರು ಅಪರಿಚಿತ ಶವಗಳು ಪತ್ತೆಯಾಗಿದ್ದು. ನಿನ್ನೆ ರಾತ್ರಿ ನಡೆದಿರುವ ಘಟನೆ ಇದಾಗಿದ್ದು, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಕೆರೆಗೆ ಕಾರು ತಳ್ಳಿರುವ ಶಂಕೆ ವ್ಯಕ್ತವಾಗಿದೆ. ಇದು ದಕ್ಷಿಣ ಕನ್ನಡ ಮೂಲದ ರಫಿಕ್ ಎಂಬುವರಿಗೆ ಸೇರಿದ ಕಾರು ಎನ್ನಲಾಗಿದೆ. ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ್ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ. ತುಮಕೂರು ಎಸ್ ಪಿ ಅಶೋಕ್ ಕೆ.ವಿ, ಘಟನೆ ಕುರಿತು ಮಾಹಿತಿ ನೀಡಿದ್ದು, ಇವತ್ತು ಮಧ್ಯಾಹ್ನ

ಕೆರೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಮೂರು ಅಪರಿಚಿತ ಶವಗಳು ಪತ್ತೆ Read More »

ಪಿಲಿಕುಳ ಜೈವಿಕ ಉದ್ಯಾನವನದಿಂದ ತಪ್ಪಿಸಿಕೊಂಡ ಬೃಹತ್ ಕಾಳಿಂಗ‌ ಸರ್ಪ

ಸಮಗ್ರ ನ್ಯೂಸ್: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಿಂದ ಬೃಹತ್ ಕಾಳಿಂಗ‌ ಸರ್ಪ ತಪ್ಪಿಸಿಕೊಂಡ ಘಟನೆ ನಡೆದಿದೆ. ಕಾಳಿಂಗ ಸರ್ಪ ತಪ್ಪಿಸಿಕೊಂಡು ಜೈವಿಕ ಉದ್ಯಾನವನದ ಟಿಕೆಟ್​ ಕೌಂಟರ್ ಬಳಿ ಬಂದಿತ್ತು. ಕಾಳಿಂಗ‌ ಸರ್ಪ ಕಂಡು ಜನರು ಹೆದರಿದ್ದಾರೆ. ಬಳಿಕ ರಸ್ತೆ ದಾಟಿ ವಿಜ್ಞಾನ ಕೇಂದ್ರದತ್ತ ಸಾಗಿದ್ದು, ಸದ್ಯ ಕಾಳಿಂಗ‌ ಸರ್ಪ ಹಿಡಿಯಲು ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ. ಇನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಾಳಿಂಗ ಸರ್ಪ ತಪ್ಪಿಸಿಕೊಂಡಿದೆ ಎಂದು ಜನರು ಆರೋಪಿಸಿದ್ದಾರೆ.

ಪಿಲಿಕುಳ ಜೈವಿಕ ಉದ್ಯಾನವನದಿಂದ ತಪ್ಪಿಸಿಕೊಂಡ ಬೃಹತ್ ಕಾಳಿಂಗ‌ ಸರ್ಪ Read More »

ಬಂಟ್ವಾಳ : ಅಕ್ರಮ ಮರಳು ಸಾಗಾಟ|ನಾಲ್ವರ ಅರೆಸ್ಟ್‌

ಸಮಗ್ರ ನ್ಯೂಸ್‌ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಎರಡು ಲಾರಿ ಹಾಗೂ ಸಾವಿರಾರು ರೂಪಾಯಿ ಮೌಲ್ಯದ ಮರಳನ್ನು ಹಾಗೂ ನಾಲ್ಕು ಮಂದಿ ಆರೋಪಿಗಳನ್ನು ಬಂಟ್ವಾಳ ‌ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ಪೊಲೀಸ್ ತಂಡ ವಶಕ್ಕೆ ಪಡೆದುಕೊಂಡ ಘಟನೆ ಇತ್ತೀಚೆಗೆ ನಡೆದಿದೆ. ಕನ್ಯಾನ ನಿವಾಸಿ ಅಬ್ದುಲ್ ರಹಮಾನ್‌ (೨೧),ಅಡ್ಯಾರು ನಿವಾಸಿ ಮಹಮ್ಮದ್ ಸಾದಿಕ್ , ಕಂಬಳಬೆಟ್ಟು ನಿವಾಸಿ ಗೌತಮ್(೨೧), ಕೆಲಿಂಜ ನಿವಾಸಿ ಗುಡ್ಡಪ್ಪ ಗೌಡ ಎಂಬವರು ಆರೋಪಿಗಳಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನರಿಕೊಂಬು

ಬಂಟ್ವಾಳ : ಅಕ್ರಮ ಮರಳು ಸಾಗಾಟ|ನಾಲ್ವರ ಅರೆಸ್ಟ್‌ Read More »

ಮಂಗಳೂರು: ಹುಡುಗಿಯ ವಿಚಾರ- ಯುವಕನಿಗೆ ಹಿಗ್ಗಾ ಮುಗ್ಗಾ ಥಳಿತ

ಸಮಗ್ರ ನ್ಯೂಸ್‌: ನಗರದ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ವಿದ್ಯಾರ್ಥಿಗಳಾಗಿರುವ ಯುವಕರು ಹುಡುಗಿ ವಿಚಾರದಲ್ಲಿ ಹೊಡೆದಾಡಿದ್ದು, ಒಬ್ಬ ಯುವಕನಿಗೆ ಮುಖದಲ್ಲಿ ರಕ್ತ ಹರಿಯುವಂತೆ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ನೀರುಮಾರ್ಗದಲ್ಲಿ ಈ ಘಟನೆ ನಡೆದಿದ್ದು ವಿಡಿಯೋದಲ್ಲಿ ಯುವಕರ ಹೊಡೆದಾಟದ ದೃಶ್ಯ ಇದೆ. ಬಟ್ಟೋಡಿ ನಿವಾಸಿ ಯುವಕ ತಾನು ಪ್ರೀತಿಸುತ್ತಿದ್ದ ಹುಡುಗಿಯಲ್ಲಿ ಪದೇ ಪದೇ ಹಣ ಕೇಳಿ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಯುವತಿ ತನ್ನ ನೀರುಮಾರ್ಗದ ಗೆಳೆಯನಿಗೆ ವಿಷಯ ತಿಳಿಸಿದ್ದಳು. ವಿಷಯ ತಿಳಿದ ಲವರ್ ಯುವಕ

ಮಂಗಳೂರು: ಹುಡುಗಿಯ ವಿಚಾರ- ಯುವಕನಿಗೆ ಹಿಗ್ಗಾ ಮುಗ್ಗಾ ಥಳಿತ Read More »

ಉಡುಪಿ:ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕ್ಕಿದ್ದ ಮೀನುಗಾರರ ರಕ್ಷಣೆ

ಸಮಗ್ರ ನ್ಯೂಸ್‌ : ಬೋಟ್​​ನಲ್ಲಿ ಅಪಾಯಕ್ಕೆ ಸಿಲುಕ್ಕಿದ್ದ 8 ಮಂದಿ ಮೀನುಗಾರರನ್ನು ಉಡುಪಿ ಜಿಲ್ಲೆಯ ಕುಂದಾಪುರದ ಅರಬ್ಬಿ ಸಮುದ್ರದಲ್ಲಿ ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ 8 ಮಂದಿ ಬೋಟ್​ ಹಾನಿಗೀಡಾಗಿ ಅಪಾಯಕ್ಕೆ ಸಿಲುಕಿದ್ದರು. ಕಲ್ಮಾಡಿಯ ಪ್ಯಾರು ಎಸ್. ಎಂಬವರ ಒಡೆತನದ ಬೋಟ್​ ಅಪಾಯಕ್ಕೆ ಸಿಲುಕಿತ್ತು. ಬೋಟ್​​ನ ತಳಭಾಗ ಒಡೆದು ನೀರು ಒಳನುಗ್ಗಲಾರಂಭಿಸಿತ್ತು. ಅಪಾಯದ ಅರಿವಾಗುತ್ತಿದ್ದಂತೆಯೇ ಬೋಟ್​ನಲ್ಲಿದ್ದ ಮೀನುಗಾರರು ಪೊಲೀಸರಿಗೆ ವಿಷಯ ತಿಳಿಸಿದ್ದರು. ತಕ್ಷಣವೇ ಪೊಲೀಸರು ಕರಾವಳಿ ಕಾವಲು ಪಡೆಗೆ

ಉಡುಪಿ:ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕ್ಕಿದ್ದ ಮೀನುಗಾರರ ರಕ್ಷಣೆ Read More »