March 2024

ಕ್ರೀಡಾಂಗಣದಲ್ಲಿ ಕೊಹ್ಲಿಯ ಕಾಲು ಹಿಡಿದ ಅಭಿಮಾನಿ ವಿರುದ್ಧ ಕೇಸ್

ಸಮಗ್ರ ನ್ಯೂಸ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​ ನಡುವಣ ಐಪಿಎಲ್ ಪಂದ್ಯದ ವೇಳೆ ಆರ್​ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಕ್ರೀಸ್​ಗೆ ಬರುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಕ್ರೀಡಾಂಗಣದ ಗ್ರಿಲ್ ಹಾರಿ ಕ್ರೀಸ್​ ಬಳಿ ಬಂದು ಕೊಹ್ಲಿಯ ಕಾಲು ಹಿಡಿದ ಘಟನೆ ನಡೆದಿದ್ದು, ತಕ್ಷಣ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಯಚೂರಿನಿಂದ ಬಂದಿದ್ದ ಅಪ್ರಾಪ್ತ ಎಂಬ ಮಾಹಿತಿ ತಿಳಿದು ಬಂದಿದೆ. ಈತ 3000 ರೂಪಾಯಿ ಕೊಟ್ಟು ಡಿ ಬ್ಲಾಕ್ ಟಿಕೆಟ್ […]

ಕ್ರೀಡಾಂಗಣದಲ್ಲಿ ಕೊಹ್ಲಿಯ ಕಾಲು ಹಿಡಿದ ಅಭಿಮಾನಿ ವಿರುದ್ಧ ಕೇಸ್ Read More »

ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಗೌರಿತಾಳಿಗೆ ಪುನೀತ ಪ್ರಶಸ್ತಿ

ಸಮಗ್ರ ನ್ಯೂಸ್: ಯೋಗ ಪಟು ಗೌರಿತಾಳಿಗೆ ಪುನೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾ. 23ರಂದು ಧಾರವಾಡದ ಸುವರ್ಣ ಸಮುಚ್ಛಯ ಭವನ ರಂಗಾಯಣದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರ ನಟಿ ಸುನಂದಾ ಕಲ್ಬುರ್ಗಿ, ಚಲನಚಿತ್ರ ನಟ ಹಾಗೂ ನಿರ್ಮಾಪಕ ಡಾ. ಕಲ್ಮೇಶ ಹಾವೇರಿ ಪೇಟ, ನಟ ಹಾಗೂ ನಿರ್ದೇಶಕ ತಮನ್, ಚಿತ್ರ ನಿರ್ದೇಶಕ ಲೋಕೇಶ ವಿದ್ಯಾಧರ, ಚೇತನ್ ಫೌಂಡೇಶನ್ ಕರ್ನಾಟಕದ ಅಧ್ಯಕ್ಷ ಚಂದ್ರ ಶೇಖರ ಮಾಡಲಗೇರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯದ ಕುಮಾರಸ್ವಾಮಿ

ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಗೌರಿತಾಳಿಗೆ ಪುನೀತ ಪ್ರಶಸ್ತಿ Read More »

‘ಯದುವೀರ್ ರಾಜರ ಬಾಯಿಂದ ರಾಜರ ಕಥೆಗಳು’ ರೇಡಿಯೋ ಕಾರ್ಯಕ್ರಮ/ ಪ್ರಸಾರ ನಿಲ್ಲಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು

ಸಮಗ್ರ ನ್ಯೂಸ್: ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ‘ಯದುವೀರ್ ರಾಜರ ಬಾಯಿಂದ ರಾಜರ ಕಥೆಗಳು’ ಎನ್ನುವ ಹೆಸರಿನಲ್ಲಿ ರೇಡಿಯೋ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಈ ಕೂಡಲೇ ನಿಲ್ಲಿಸಿ ಎಂದು ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ರೇಡಿಯೋದಲ್ಲಿ ಈ ಕಾರ್ಯಕ್ರಮ ಬರುತ್ತಿದೆ ಎಂದು ಹೇಳೋದಕ್ಕೂ ನಿಮಿಷ ನಿಮಿಷಕ್ಕೆ ಜಾಹೀರಾತು ಇಟ್ಟಿದ್ದಾರೆ. ವ್ಯಕ್ತಿಯಾಗಿ ರಾಜರ ಕಥೆಗಳನ್ನು ಹೇಳಲಿ ತಪ್ಪಿಲ್ಲ ಆದರೆ ಈಗ ಚುನಾವಣೆ ಸಂದರ್ಭದಲ್ಲಿ ಇದು ಅಪ್ರಸ್ತುತ. ಇಲ್ಲಿ ನೀತಿ ಸಂಹಿತೆ ಉಲ್ಲಂಘನೆ

‘ಯದುವೀರ್ ರಾಜರ ಬಾಯಿಂದ ರಾಜರ ಕಥೆಗಳು’ ರೇಡಿಯೋ ಕಾರ್ಯಕ್ರಮ/ ಪ್ರಸಾರ ನಿಲ್ಲಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು Read More »

ಪಾಕಿಸ್ತಾನದ ಎರಡನೇ ಅತಿದೊಡ್ಡ ನೌಕಾಪಡೆಯ ವಾಯುನೆಲೆ ಮೇಲೆ ಉಗ್ರರ ದಾಳಿ

ಸಮಗ್ರ ನ್ಯೂಸ್: ಉಗ್ರರು ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ದೇಶದ ಎರಡನೇ ಅತಿದೊಡ್ಡ ನೌಕಾಪಡೆಯ ವಾಯುನೆಲೆ ಮೇಲೆ ದಾಳಿ ನಡೆಸಿದ್ದಾರೆ. ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಗ್ರೆನೇಡ್ಗಳೊಂದಿಗೆ ಭಯೋತ್ಪಾದಕರು ಟರ್ಬತ್‍ನಲ್ಲಿರುವ ಪಾಕಿಸ್ತಾನದ ನೌಕಾ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಹತ್ಯೆ ಮಾಡಿದೆ. ಈ ದಾಳಿಯಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳಿಗೆ ಯಾವುದೇ ರೀತಿ ಹಾನಿಯಾಗಿಲ್ಲ. ಒಟ್ಟಾರೆ ಆರು ಉಗ್ರರು ದಾಳಿ ನಡೆಸಿದ್ದು, ನಾಲ್ವರನ್ನು ಹತ್ಯೆ ಮಾಡಲಾಗಿದೆ. ಇನ್ನುಳಿದ ಇಬ್ಬರು ತಪ್ಪಿಸಿಕೊಂಡಿದ್ದಾರೆ.

ಪಾಕಿಸ್ತಾನದ ಎರಡನೇ ಅತಿದೊಡ್ಡ ನೌಕಾಪಡೆಯ ವಾಯುನೆಲೆ ಮೇಲೆ ಉಗ್ರರ ದಾಳಿ Read More »

ನೂತನ ದಾಖಲೆ ನಿರ್ಮಿಸಿದ ಕೊಹ್ಲಿ / ಟಿ20 ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಎಂಬ ಹೆಗ್ಗಳಿಕೆ

ಸಮಗ್ರ ನ್ಯೂಸ್: ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ, ಜಾನಿ ಬೇರ್‍ಸ್ಟೋವ್ ನೀಡಿದ ಕ್ಯಾಚ್ ಪಡೆಯುವ ಮೂಲಕ ಕ್ಯಾಚ್‍ನಲ್ಲೂ ನೂತನ ದಾಖಲೆ ಬರೆದಿದ್ದಾರೆ. ಈ ಕ್ಯಾಚ್ ಪಡೆಯುವ ಮೂಲಕ ಟಿ20 ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಪಂದ್ಯದಲ್ಲಿ ಒಟ್ಟು 2 ಕ್ಯಾಚ್ ಪಡೆದ ಕೊಹ್ಲಿ ಸದ್ಯ ಟಿ20 ಕ್ರಿಕೆಟ್‍ನ ಕ್ಯಾಚ್ ಸಂಖ್ಯೆಯನ್ನು 174ಕ್ಕೆ ಹೆಚ್ಚಿಸಿದರು. ಅವರು ಸುರೇಶ್ ರೈನಾರ ಹೆಸರಲ್ಲಿದ್ದ ದಾಖಲೆಯನ್ನು ಮುರಿದರು. ರೈನಾ 172

ನೂತನ ದಾಖಲೆ ನಿರ್ಮಿಸಿದ ಕೊಹ್ಲಿ / ಟಿ20 ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಎಂಬ ಹೆಗ್ಗಳಿಕೆ Read More »

ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಹತ್ವದ ಸಭೆ/ ಗಾಜಾದಲ್ಲಿ ಕದನ ವಿರಾಮಕ್ಕೆ ನಿರ್ಣಯ

ಸಮಗ್ರ ನ್ಯೂಸ್: ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಸಂಘರ್ಷ ಅಂತ್ಯಗೊಳಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಹತ್ವದ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ತಕ್ಷಣವೇ ಗಾಜಾದಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಭದ್ರತಾ ಮಂಡಳಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ವಿಶ್ವಂಸ್ಥೆ ಭದ್ರತಾ ಮಂಡಳಿ ಕದನ ವಿಮಾನ ಘೋಷಣೆಗೆ ಆಗ್ರಹಿಸಿದೆ. ಭದ್ರತಾ ಮಂಡಳಿಯ ಎಲ್ಲಾ 14 ಸದಸ್ಯರು ಕದನ ವಿಮಾನ ಘೋಷಣೆಗೆ ಮತ ಚಲಾಯಿಸಿದರು. ಇದೇ ವೇಳೆ ಒತ್ತೆಯಾಳಾಗಿ ಇರಿಸಿಕೊಂಡಿರುವ ನಾಗರೀಕರನ್ನು ಹಮಾಸ್ ತಕ್ಷಣವೇ ಬಿಡುಗಡೆ ಮಾಡಬೇಕು.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಹತ್ವದ ಸಭೆ/ ಗಾಜಾದಲ್ಲಿ ಕದನ ವಿರಾಮಕ್ಕೆ ನಿರ್ಣಯ Read More »

ಐಪಿಎಲ್‍ನಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯ/ ಇಂದು ಚೆನ್ನೈ-ಗುಜರಾತ್ ಹಣಾಹಣಿ

ಸಮಗ್ರ ನ್ಯೂಸ್: ಮತ್ತೊಂದು ಹೈವೋಲ್ವೇಜ್ ಐಪಿಎಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಮೊದಲ ಪಂದ್ಯಗಳನ್ನು ಗೆದ್ದಿರುವ ಚೆನ್ನೈ ಮತ್ತು ಗುಜರಾತ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳಲ್ಲಿ ಗೆಲುವಿನೊಂದಿಗೆ ಉತ್ತಮ ಆರಂಭವನ್ನು ಪಡೆದಿದ್ದು, ಇಂದು ಚೆಪಾಕ್ ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿವೆ. ಹಾಲಿ ಚಾಂಪಿಯನ್ಸ್ ಮತ್ತು ರನ್ನರ್ ಅಪ್ ತಂಡಗಳ ನಡುವಿನ ಕದನವು ಹೆಚ್ಚು ಗಮನ ಸೆಳೆಯುತ್ತದೆ. ಇನ್ನೊಂದೆಡೆ ಯಂಗ್ ಕ್ಯಾಪ್ಟನ್ಸ್ ಮುಖಾಮುಖಿ ಹೇಗಿರುತ್ತೆ ಎಂಬ ಪ್ರಶ್ನೆ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್‍ನಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯ/ ಇಂದು ಚೆನ್ನೈ-ಗುಜರಾತ್ ಹಣಾಹಣಿ Read More »

ಕುಡಿಯುವ ನೀರಿನ ದುರ್ಬಳಕೆ/ ಬೆಂಗಳೂರಿನಲ್ಲಿ ಕಾರ್ ತೊಳೆದ 22 ಮಂದಿಗೆ ದಂಡ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕುಡಿಯುವ ನೀರಿಲ್ಲದೆ ಸಾಕಷ್ಟು ಮಂದಿ ಪರದಾಡುತ್ತಿರುವ ಸಂದರ್ಭದಲ್ಲಿ ಕುಡಿಯುವ ನೀರನ್ನು ಬಳಕೆ ಮಾಡಿ ಕಾರ್ ತೊಳೆದ 22 ಮಂದಿಗೆ ದಂಡ ವಿಧಿಸಲಾಗಿದೆ. ಕುಡಿಯುವ ನೀರನ್ನು ಕಾರ್ ತೊಳೆಯಲು ಬಳಸಬಾರದು ಎನ್ನುವ ಆದೇಶ ಇದ್ದರೂ ಕಾವೇರಿ ಹಾಗೂ ಕೊಳವೆ ಬಾವಿ ನೀರನ್ನು ಬಳಕೆ ಮಾಡಿದ್ದ 22 ಮಂದಿಯಿಂದ ಜಲಮಂಡಳಿ 1.10 ಲಕ್ಷ ರೂಪಾಯಿ ವಸೂಲಿ ಮಾಡಿದೆ. ಜಲಮಂಡಳಿ ಕಟ್ಟುನಿಟ್ಟಿನ ಆದೇಶ ಲೆಕ್ಕಿಸದ ಕೆಲವರು ಕುಡಿಯಲು ಮತ್ತು ಗೃಹ ಬಳಕೆಗೆ ಬಳಸಲಾಗುವ ನೀರಿನಲ್ಲಿಯೇ ವಾಹನಗಳನ್ನು ತೊಳೆಯುತ್ತಿರುವುದು

ಕುಡಿಯುವ ನೀರಿನ ದುರ್ಬಳಕೆ/ ಬೆಂಗಳೂರಿನಲ್ಲಿ ಕಾರ್ ತೊಳೆದ 22 ಮಂದಿಗೆ ದಂಡ Read More »

ಡಬಲ್ ಸೆಂಚುರಿ ಬಾರಿಸಿದ ಹಸಿ ಕೋಕ್ಕೋ| ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ

ಸಮಗ್ರ ನ್ಯೂಸ್: ಮಾರುಕಟ್ಟೆಯಲ್ಲಿ ಹಸಿ ಕೊಕ್ಕೋ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರಸ್ತುತ ಪ್ರತೀ ಕೆ.ಜಿ.ಗೆ 200 ರೂ. ದಾಟಿದೆ. ಇದು ಇದು ವರೆಗಿನ ಸಾರ್ವಕಾಲಿಕ ದಾಖಲೆ ದರ. ಈ ಹಿಂದೆ ಪ್ರತೀ ಕೆ.ಜಿ.ಗೆ 125 ರೂ.ಗಳಿಗಿಂತ ಹೆಚ್ಚಾದುದಿಲ್ಲ. ಇದರ ಜತೆಗೆ ಒಣ ಕೊಕ್ಕೊ ಧಾರಣೆಯೂ ಜಿಗಿದಿದ್ದು, ಬೆಳೆಗಾರರಲ್ಲಿ ಉಲ್ಲಾಸ ಮೂಡಿಸಿದೆ. ಹಸಿ ಕೊಕ್ಕೋ ಧಾರಣೆ ಕೆ.ಜಿ.ಗೆ ತೀರಾ ಕುಸಿತ ಕಂಡು ಹೆಚ್ಚೆಂದರೆ 75 ರೂ. ವರೆಗೆ ಇತ್ತು. ಹಿಂದೆ ಧಾರಣೆ ಕೆ.ಜಿ.ಗೆ 30 ರೂ. ವರೆಗೆ

ಡಬಲ್ ಸೆಂಚುರಿ ಬಾರಿಸಿದ ಹಸಿ ಕೋಕ್ಕೋ| ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ Read More »

ಚಿನ್ನಸ್ವಾಮಿ ಮೈದಾನದಲ್ಲಿ ಭದ್ರತಾ ಲೋಪ| ಮೈದಾನಕ್ಕೆ ನುಗ್ಗಿದ ಕೊಹ್ಲಿ ಅಭಿಮಾನಿ

ಸಮಗ್ರ ನ್ಯೂಸ್: ಮಾ.25 ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂಜಾಬ್- RCB ಮ್ಯಾಚ್ ನಡೆಯುತ್ತಿದೆ. ಇದೇ ಸಂಧರ್ಭದಲ್ಲಿ ಭದ್ರತಾ ಲೋಪ ನಡೆದಿದೆ. ಮೈದಾನಕ್ಕೆ ನುಗ್ಗಿದ ಕೊಹ್ಲಿ ಅಭಿಮಾನಿಯೊಬ್ಬ ಕೊಹ್ಲಿಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಕೊಹ್ಲಿ ಕಾಲು ಹಿಡಿದು ನಂತರ ತಬ್ಬಿಕೊಂಡು ಹುಚ್ಚಾಟ ಮಾಡಿದ್ದಾನೆ. ಕೊಹ್ಲಿ ಬ್ಯಾಟಿಂಗ್ ಬರ್ತಿದ್ದಂತೆ ಅಭಿಮಾನಿ ಯೊಬ್ಬ ಓಡಿಬಂದಿದ್ದಾನೆ. ಕೂಡಲೇ ಯುವಕನನ್ನು ವಶಕ್ಕೆ ಪಡೆಯಲಾಯಿತು.

ಚಿನ್ನಸ್ವಾಮಿ ಮೈದಾನದಲ್ಲಿ ಭದ್ರತಾ ಲೋಪ| ಮೈದಾನಕ್ಕೆ ನುಗ್ಗಿದ ಕೊಹ್ಲಿ ಅಭಿಮಾನಿ Read More »