Ad Widget

ಇಂದು ರಾಜ್ಯದಾದ್ಯಂತ ‘ಯುವ’ ರಿಲೀಸ್| ಥಿಯೇಟರ್ ಮುಂದೆ ರಾರಾಜಿಸುತ್ತಿದೆ ಯುವನ ಕಟೌಟ್

ಸಮಗ್ರ ನ್ಯೂಸ್: ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಯ ಮಗ ಯುವ ರಾಜ್‌ಕುಮಾರ್ ಅವರ ಚೊಚ್ಚಲ ಸಿನಿಮಾ ‘ಯುವ’ ಇಂದು (ಮಾ.29) ರಿಲೀಸ್ ಆಗಿದೆ. ಬೆಂಗಳೂರಿನ ಸಿದ್ದೇಶ್ವರ ಥಿಯೇಟರ್​ನಲ್ಲಿ ಮುಂಜಾನೆಯಿಂದಲೇ ಫ್ಯಾನ್ಸ್​ ಶೋ ಪ್ರದರ್ಶನ ಕಂಡಿದೆ. ರಾಜ್ಯದಲ್ಲಿ 350ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ಇದೀಗ ಸಿನಿಮಾ ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget

ಥಿಯೇಟರ್ ಮುಂದೆ ಯುವನ ಕಟೌಟ್ ಗಳು ರಾರಾಜಿಸುತ್ತಿದೆ. ಜೂನಿಯರ್ ಅಪ್ಪು ಎಂದೆ ಅಭಿಮಾನಿಗಳಿಗೆ ಯುವ ಫೇಮಸ್ ಆಗಿದ್ದಾರೆ. ಸಿನಿಮಾದಲ್ಲಿ ಯುವನ “ಒಬ್ಬನೇ ಶಿವ ಒಬ್ಬನೇ ಯುವ” ಹಾಡಿಗೆ ಸ್ಕ್ರೀನ್ ಮುಂದೆ ದೊಡ್ಮನೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

Ad Widget . Ad Widget .

ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರದಲ್ಲಿ ಯುವ ರಾಜ್‌ಕುಮಾರ್ ಬಣ್ಣ ಹಚ್ಚಿದ್ದಾರೆ. ‘ಯುವ’ ಚಿತ್ರದಲ್ಲಿ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದಾರೆ. ಕಿಶೋರ್, ಅಚ್ಯುತ್‌ ಕುಮಾರ್ ಹಾಗೂ ಸುಧಾರಾಣಿ ಚಿತ್ರದ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ. ಈ ಸಿನಿಮಾಕ್ಕಂತು ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಬರುತ್ತಿದೆ.

Leave a Comment

Your email address will not be published. Required fields are marked *