ಪುತ್ತೂರು: ಅನುದಾನ ಹಂಚಿಕೆ ವಿಚಾರದಲ್ಲಿ ಕಿರಿಕ್| ಬಿಜೆಪಿ ಜಾಲತಾಣ ಪ್ರಮುಖ್ ಮನೆಗೆ ತೆರಳಿ ಶಾಸಕ ರೈ ಬೆಂಬಲಿಗರ ದಾಂಧಲೆ!?

ಸಮಗ್ರ ನ್ಯೂಸ್: ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯ ನಡೆಸಿರುವುದಾಗಿ ಜಾಲತಾಣಗಳಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಬೆಂಬಲಿಗರು‌ ಹಾಕಿರುವ ಪೋಸ್ಟ್ ಗಳ ಬಗ್ಗೆ ಅನುದಾನ ಬಳಕೆ ಕುರಿತು ಸ್ಪಷ್ಟನೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಕೇಳಿಕೊಂಡಿದ್ದು, ಇದೇ ವಿಚಾರವಾಗಿ ಶಾಸಕ ಅಶೋಕ್ ರೈ ಬೆಂಬಲಿಗರೆನ್ನಲಾದ ತಂಡ ದಾಂಧಲೆ ನಡೆಸಿರುವ ಘಟನೆ ಪುತ್ತೂರಿನಿಂದ ವರದಿಯಾಗಿದೆ.

. Ad Widget . Ad Widget

ದಕ್ಷಿಣ ಕನ್ನಡ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಜಯಾನಂದ ಬಂಗೇರ ಮನೆಗೆ ತೆರಳಿ ಕಾಂಗ್ರೆಸ್ ಕಾರ್ಯಕರ್ತರು ಕಿರಿಕ್ ಮಾಡಿದ್ದು, ಚುನಾವಣಾ ಹೊಸ್ತಿಲಿನಲ್ಲಿ ಕಾರ್ಯಕರ್ತರ ವಾರ್ ಜೋರಾಗಿದೆ.

. Ad Widget . . Ad Widget . Ad Widget

ಪುತ್ತೂರಿನ ಶಾಸಕರ ಬಳಿ 1400 ಕೋಟಿಯ ಅನುದಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಕೇಳಿದ ಬಗ್ಗೆ ಆಕ್ರೋಶಿತಗೊಂಡಿರುವ, ಪುತ್ತೂರು ಶಾಸಕರ ಬೆಂಬಲಿಗರೆನ್ನಲಾದ ತಂಡವೊಂದು ಮನೆಗೆ ನುಗ್ಗಿ ದಾಂಧಲೆಗೆ ಮುಂದಾಗಿರುವ ಘಟನೆ ಭಾನುವಾರ(ಮಾ.17) ಸಂಜೆ ನಡೆದಿದೆ.

ದಕ್ಷಿಣ ಕನ್ನಡ ಬಿಜೆಪಿ ಸಾಮಾಜಿಕ ಜಾಲತಾಣದ ಜಯಾನಂದ ಬಂಗೇರ ಮನೆಗೆ ಬ್ಯಾನರ್ ಹಿಡಿದು ತೆರಳಿದ ತಂಡವೊಂದು ದಾಂಧಲೆಗೆ ಮುಂದಾಗಿದೆ ಎನ್ನಲಾಗಿದ್ದು, ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ.

Leave a Comment

Your email address will not be published. Required fields are marked *