ಮತ್ತೊಮ್ಮೆ ಬದಲಾವಣೆಗೆ ತೆರೆದುಕೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘ/ ಸಂಘ ಶಿಕ್ಷಾ ವರ್ಗದ ಸಂಯೋಜನೆಯಲ್ಲಿ ನೂತನ ವ್ಯವಸ್ಥೆ

ಸಮಗ್ರ ನ್ಯೂಸ್: ಸಂಘ ಶಿಕ್ಷಾ ವರ್ಗದ ಸಂಯೋಜನೆಯಲ್ಲಿ ಹೊಸ ಪಠ್ಯಕ್ರಮವನ್ನು ಸೇರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಹ ಸರಕಾರ್ಯವಾಹ ಡಾ. ಮನಮೋಹನ್ ವೈದ್ಯ ಹೇಳಿದ್ದಾರೆ.

. Ad Widget . Ad Widget . Ad Widget .

ಈ ಹಿಂದೆ ಸಂಘ ಶಿಕ್ಷಾ ವರ್ಗದ ಸಂಯೋಜನೆಯಲ್ಲಿ ಮೊದಲು 7 ದಿನಗಳ ಪ್ರಾಥಮಿಕ ಶಿಕ್ಷಾ ವರ್ಗ, 20 ದಿನಗಳ ಪ್ರಥಮ ವರ್ಷ ಸಂಘ ಶಿಕ್ಷಾ ವರ್ಗ, 20 ದಿನಗಳ ದ್ವಿತೀಯ ವರ್ಷ ಸಂಘ ಶಿಕ್ಷಾ ವರ್ಗ ಮತ್ತು ನಾಗಪುರದಲ್ಲಿ ನೆಡೆಯುತ್ತಿದ್ದ ತೃತೀಯ ವರ್ಷ ಸಂಘ ಶಿಕ್ಷಾ ವರ್ಗ 25 ದಿನಗಳ ಕಾಲ ನಡೆಯುತ್ತಿದ್ದವು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಈಗ ಹೊಸ ಪಠ್ಯಕ್ರಮದಲ್ಲಿ ಮೊದಲು 3 ದಿನಗಳ ಪ್ರಾರಂಭಿಕ ವರ್ಗ, ನಂತರ 7 ದಿನಗಳ ಪ್ರಾಥಮಿಕ ಶಿಕ್ಷಾ ವರ್ಗ ಇರುತ್ತದೆ. ಇದರ ನಂತರದಲ್ಲಿ 15 ದಿನಗಳ ಸಂಘ ಶಿಕ್ಷಣ ವರ್ಗ, 20 ದಿನಗಳ ಕಾರ್ಯಕರ್ತ ವಿಕಾಸ ವರ್ಗ -1 ಮತ್ತು 25 ದಿನಗಳ ಕಾರ್ಯಕರ್ತ ವಿಕಾಸ ವರ್ಗ 2 ಕ್ರಮವಾಗಿ ಇರುತ್ತದೆ. ಈ ತರಗತಿಗಳು ವಿಶೇಷ ಪ್ರಾಯೋಗಿಕ ತರಬೇತಿಯನ್ನು ಸಹ ಒಳಗೊಂಡಿರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *