ಸಮಗ್ರ ನ್ಯೂಸ್: ಕುಡಿದ ಮತ್ತಲ್ಲಿ ಏನೇನೆಲ್ಲ ಮಾಡ್ತಾರೆ ಅನ್ನೋದಕ್ಕೆ ಇಲ್ಲೊಂದು ಸಾಕ್ಷಿ ಇದೆ ನೋಡಿ, ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಸಿಕ್ಕ ಸಿಕ್ಕವರಿಗೆ ಮನಬಂದಂತೆ ಯುವಕ ಕಚ್ಚಿದಾನೆ.
ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಂ.ಜಿ ರಸ್ತೆಯಲ್ಲಿ ನಡೆದಿದೆ. ಮಹೇಶ್ ಎನ್ನುವ ಯುವಕನಿಂದ ಕೃತ್ಯವೆಸಗಲಾಗಿದೆ. ಶೇಖರ್, ಪೆಂಚಲಯ್ಯ, ಅಶ್ವತ್ಥ್ ಎಂಬ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಗಾಯ ಮಾಡಿದ ವ್ಯಕ್ತಿಯನ್ನು ಹಿಡಿದು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರ ಮನವಿಗೂ ಸ್ಪಂದಿಸದೆ ಯುವಕ ರಂಪಾಟ ಮಾತ್ರ ಜೋರಾಗಿತ್ತು.








