ಸುಳ್ಯ: ಬಿಜೆಪಿ ಮಂಡಲದ ನೂತನ ಅದ್ಯಕ್ಷರಾಗಿ ವೆಂಕಟ್ ವಳಲಂಬೆ ನೇಮಕ

ಸಮಗ್ರ ನ್ಯೂಸ್: ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ಸಮಿತಿ ನೂತನ ಅಧ್ಯಕ್ಷರಾಗಿ ವೆಂಕಟ್ ವಳಲಂಬೆಯವರನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಘೋಷಿಸಿದ್ದಾರೆ.

Ad Widget ... ..

ವೆಂಕಟ್ ವಳಲಂಬೆಯವರು ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಹರೀಶ್ ಕಂಜಿಪಿಲಿಯವರು ಪ್ರಸ್ತುತ ಅಧ್ಯಕ್ಷರಾಗಿದ್ದು, ಇವರ ನೇಮಕಕ್ಕೆ ಮೊದಲು ವೆಂಕಟ್ ವಳಲಂಬೆಯವರು ಅಧ್ಯಕ್ಷರಾಗಿದ್ದು ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಅವರು ಈ ಹಿಂದೆ 2015 ರಿಂದ 2020 ರವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

Ad Widget

ವೆಂಕಟ್ ವಳಲಂಬೆ ನೇಮಕಕ್ಕೆ ಪಕ್ಷದೊಳಗೆ ಅಸಮಾಧಾನ ಇದ್ದರೂ ಕೊನೆಕ್ಷಣದಲ್ಲಿ ರಾಜ್ಯದ ಹಿರಿಯರ ಸೂಚನೆ ಮೇರೆಗೆ ಆದೇಶ ಹೊರಬಿದ್ದಿದೆ. ವೆಂಕಟ್ ವಳಲಂಬೆ ಆಯ್ಕೆಯಾಗುವ ಬಗ್ಗೆ ‘ಸಮಗ್ರ ಸಮಾಚಾರ’ ಈ ಹಿಂದೆಯೇ ವರದಿ ಮಾಡಿತ್ತು.

ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಕೇಶ್ ರೈಯವರು ಉಪಾಧ್ಯಕ್ಷರಾಗಿ ನೇಮಕವಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಆರ್ವಾರ , ಕಾರ್ಯದರ್ಶಿಯಾಗಿ ವಿನಯಕುಮಾರ್ ಮುಳುಗಾಡು ನೇಮಕಗೊಂಡಿದ್ದಾರೆ.

Leave a Comment

Your email address will not be published. Required fields are marked *