ಚಿತ್ರರಂಗಕ್ಕೆ ಗುಡ್ ಬೈ ಹೇಳಲಿರುವ ವಿಜಯ್| ಹೊಸ ಪಕ್ಷ ಹೆಸರು ಘೋಷಿಸಿದ ದಳಪತಿ

ಸಮಗ್ರ ನ್ಯೂಸ್: ಕಾಲಿವುಡ್ ನಟ ದಳಪತಿ ವಿಜಯ್ ಇಂದು ತಮ್ಮ ರಾಜಕೀಯ ಪಕ್ಷವಾದ ‘ತಮಿಳಗ ವೆಟ್ರಿ ಕಳಗಂ’ ಅನೌನ್ಸ್ ಮಾಡಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ ಮೂಲಭೂತ ರಾಜಕೀಯ ಬದಲಾವಣೆ ಎಂದು ನಟ ಟ್ವೀಟ್ ಮಾಡಿದ್ದಾರೆ.

Ad Widget ... ..

ಕಳೆದ ವಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಅವರ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಂ ರಾಜಕೀಯ ಪಕ್ಷದ ರಚನೆಗೆ ಒಪ್ಪಿಗೆ ನೀಡಿದ ನಂತರ ಈ ಒಂದು ಬಿಗ್ ಅನೌನ್ಸ್​ಮೆಂಟ್ ಬಂದಿದೆ. ರಾಜಕೀಯವು ನನಗೆ ಮತ್ತೊಂದು ವೃತ್ತಿಯಲ್ಲ. ಇದು ಪವಿತ್ರವಾದ ಜನರ ಕೆಲಸ. ನಾನು ಬಹಳ ಸಮಯದಿಂದ ಅದಕ್ಕಾಗಿ ನನ್ನನ್ನು ಸಿದ್ಧಪಡಿಸುತ್ತಿದ್ದೇನೆ. ರಾಜಕೀಯ ನನಗೆ ಹವ್ಯಾಸವಲ್ಲ. ಅದು ನನ್ನ ಆಳವಾದ ಆಸೆಯಾಗಿದೆ. ನಾನು ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ ನಟ. ಇನ್ನೂ ಯಾವುದೇ ಪಕ್ಷದ ಬೆಂಬಲ ಪಡೆಯದೆ ಸ್ವತಂತ್ರ ಸರ್ಧೆ ನಡೆಸಲು ನಿರ್ಧಾರ. ಅದರೇ ಇ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ 2026ರ ತಮಿಳುನಾಡು ವಿಧಾನಸಭೆ ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ನಿರ್ಧಾರ ಎಂದು ದಳಪತಿ ತಿಳಿಸಿದ್ದಾರೆ.

Ad Widget

ಚುನಾವಣಾ ಆಯೋಗದ ಅನುಮೋದನೆ ಪಡೆದ ನಂತರ, ಪಕ್ಷವು ಸಾರ್ವಜನಿಕ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಿದೆ. ಈ ಕೂಟಗಳ ಸಮಯದಲ್ಲಿ, ಅವರು ತಮ್ಮ ನೀತಿಗಳು, ತತ್ವಗಳು ಮತ್ತು ಕ್ರಿಯಾ ಯೋಜನೆಗಳನ್ನು ಪ್ರಸ್ತುತಪಡಿಸುತ್ತಾರೆ, ಜೊತೆಗೆ ಧ್ವಜ ಮತ್ತು ಪಕ್ಷದ ಚಿಹ್ನೆಯನ್ನು ಪರಿಚಯಿಸಲಿದ್ದಾರೆ.

ಅದರೊಂದಿಗೆ ಇನ್ನೂ ಎರಡು ಸಿನಿಮಾಗಳ ಕೆಲಸ ಪೂರ್ಣಗೊಂಡ ನಂತರ ಸಿನಿಮಾಕ್ಕೆ ಗುಡ್ ಬೈ ಹೇಳಲಿದ್ದಾರೆ.

Leave a Comment

Your email address will not be published. Required fields are marked *