ಏಷ್ಯನ್ ಕ್ರಿಕೆಟ್ ಮಂಡಳಿ(ಎಸಿಸಿ)ಯ ಅಧ್ಯಕ್ಷರಾಗಿ ಜಯ್ ಶಾ ಪುನಾರಾಯ್ಕೆ

ಸಮಗ್ರ ನ್ಯೂಸ್: ಏಷ್ಯನ್ ಕ್ರಿಕೆಟ್ ಮಂಡಳಿ(ಎಸಿಸಿ)ಯ ಅಧ್ಯಕ್ಷರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಬಾಲಿಯಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.

. Ad Widget . Ad Widget . Ad Widget

ಜಯ್ ಶಾ ಅವರ ಅಧಿಕಾರಾವಧಿಯ ವಿಸ್ತರಣೆಯನ್ನು ಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಪ್ರಸ್ತಾಪಿಸಿದ್ದಾರೆ. ನಾಮನಿರ್ದೇಶನವನ್ನು ಏಷ್ಯನ್ ಕ್ರಿಕೆಟ್ ಮಂಡಳಿಯ ಎಲ್ಲಾ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದ್ದಾರೆ. ಇದರೊಂದಿಗೆ ಜಯ್ ಶಾ ಮೂರನೇ ಬಾರಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ.

. Ad Widget .

ಜನವರಿ 2021 ರಲ್ಲಿ ಜಯ್ ಶಾ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ನಜ್ರುಲ್ ಹಸನ್ ಅವರಿಂದ ಎಸಿಸಿಯ ಆಡಳಿತವನ್ನು ವಹಿಸಿಕೊಂಡಿದ್ದರು. ಇದಾದ ಬಳಿಕ ಅವರನ್ನು 2 ಬಾರಿ ಮರು ನೇಮಕ ಮಾಡಲಾಗಿದೆ.

Leave a Comment

Your email address will not be published. Required fields are marked *